ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿ ಬಹಳ ವೀಕ್ ಇದೆ. ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯವರು, ಸರಕಾರವನ್ನು ಸರಿಯಾಗಿ ನಡೆಸಲಿಲ್ಲ. ಈ ಅಂಶವನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು ಇದು ಸಾಹಿತಿ ಕಾದಂಬರಿಕಾರ ಬೈರಪ್ಪನವರು ಹೇಳಿದ್ದು.

ಬಿಜೆಪಿ, ಮೋದಿ ಅಭಿಮಾನಿಯಾದ ಬೈರಪ್ಪನವರು ಯಾಕೋ ಬಿಜೆಪಿ ಬಗ್ಗೆ ಕೋಪಗೊಂಡಂತಿತ್ತು..ಜ್ನಾನಪೀಠ ಮಧ್ಯ ಬಂತೋ ಗೊತ್ತಿಲ್ಲ. ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಹಾಗೂ ಬಿಜೆಪಿ ಮುಖಂಡರು ಇಂದು ಕುವೆಂಪುನಗರದ ಎಸ್.ಎಲ್.ಬೈರಪ್ಪ ನಿವಾಸಕ್ಕೆ ಭೇಟಿಗಾಗಿ ತೆರಳಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು ಬೈರಪ್ಪ ಪಾಪ ಯದುವೀರ್ ಹಾಗೂ ಉಳಿದ ಬಿಜೆಪಿ ನಾಯಕರಿಗೆ ಹೇಗೆ ಅನ್ನಿಸಬೇಡ..?

ಕರ್ನಾಟಕದಲ್ಲಿ ಬಿಜೆಪಿ ಬಹಳ ವೀಕ್ ಇದೆ. ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯವರು, ಸರಕಾರವನ್ನು ಸರಿಯಾಗಿ ನಡೆಸಲಿಲ್ಲ. ಈ ಅಂಶವನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು ಎಂದು ಅವರು ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಿದರು. ಜೊತೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಬಗ್ಗೆ ಅವರು ಕೋಪ ಅಸಹನೆಯನ್ನು ಹೊರಹಾಕಿದರು

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಮರೆ ಮಾಚಲು ಕಾಂಗ್ರೆಸ್‌ , ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಜತೆಗೆ ಕೇಂದ್ರದಿಂದ ಬಂದ ಅನುದಾನವನ್ನು ಫ್ರೀ ಬೀಸ್ ಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಅವರೇನು ಆರ್ಥಿಕ ತಜ್ನರೆ ? ಕೇಂದ್ರ ಸರ್ಕಾರದ ಅನುದಾನವನ್ನು ಕಾಂಗ್ರೆಸ್ ಫ್ರೀ ಬೀಸ್ ಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಅವರ ಬಳಿ ದಾಖಲೆ ಇದೆಯೆ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಲಿಲ್ಲ. ಮಾನವೀಯತೆಯ ವಿರೋಧಿ ಬುಲ್ಡೋಜರ್ ಮುಖ್ಯಮಂತ್ರಿ ಎಂದೇ ಹೆಸರಾದ ಉತ್ತರ ಪ್ರದೇಶದ ಯೋಗಿ ಆದಿತ್ಯ ನಾಥ್ ಅವರನ್ನು ಬೈರಪ್ಪ ಶ್ಲಾಘಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಮಾದರಿ ರಾಜ್ಯದಲ್ಲಿ ಸರ್ಕಾರ ಇದ್ದಿದ್ರೆ ಹೆಚ್ಚು ಸೀಟ್ ಗೆಲ್ಲಬಹುದಿತ್ತು ಎಂದು ಹೇಳಿದ ಅವರು ತಮಗೆ ವಯಸ್ಸಾಗುತ್ತಿದೆ ಎಂಬುದನ್ನು ನೆನಪಿಸಿದರು.

ದೇಶದಲ್ಲಿ ಮೋದಿ ಅಲೆ ಇದೆ ಎಂದು ಗಟ್ಟಿಧ್ವನಿಯಲ್ಲಿ ಅವರು ಹೇಳಲಿಲ್ಲ. ಮೋದಿ ಭಕ್ತರಾಗಿದ್ದರೂ ಈ ಮಾತು ಹೇಳಲು ಅವರಿಗೆ ಹಿಂಜರಿಕೆ ಇದ್ದಂತಿತ್ತು.

ಮೋದಿ ಅಲೆ ಕಡಿಮೆ ಆಗಿದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಈ ಬಾರಿಯೂ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂಬುದು ಅವರ ವಿಶ್ವಾಸವಾಗಿತ್ತು..

Leave a Reply

Your email address will not be published. Required fields are marked *