ಪ್ರಮುಖ ಸುದ್ದಿ
  • ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತು ಚರ್ಚಿಸಿದ್ದೇನೆ: ಪ್ರಕಾಶ್ ರೈ - ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತು ಶಿಕ್ಷಕರು, ಹೋರಾಟಗಾರರೊಂದಿಗೆ ಶ್ಲಾಘನೀಯ ಚರ್ಚೆಗಳನ್ನು ನಡೆಸಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಪ್ರಗತಿಪರ ಶಿಕ್ಷಣ ಸಚಿವ ಎನ್ ಮಹೇಶ್ ಅವರೊಂದಿಗೆ ಸಮಾನ ಶಿಕ್ಷಣದ ಅವಶ್ಯಕತೆ ಕುರಿತು ಚರ್ಚಿಸಿದೆ. ಜಸ್ಟ್​​ಆಸ್ಕಿಂಗ್ ಮತ್ತು ಪ್ರಕಾಶ್ ರಾಜ್ ಫೌಂಡೇಷನ್ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈ ಮೂಲಕ ಹಂಚಿಕೊಳ್ಳುವ ಸಂಸತವನ್ನು ಅನುಭವಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಹೋರಾಟಗಾರರು ಮತ್ತು...
  • ಅಲಿಘರ್​​ನಲ್ಲಿ ಆರ್​​ಎಸ್​​ನಿಂದ ಬಾಲಕಿಯರಿಗೆ ಶಸ್ತ್ರಾಸ್ತ್ರ ತರಬೇತಿ! - ಲಖ್ನೋ: ಅಲಿಘರ್​​ನಲ್ಲಿ ಬಾಲಕಿಯರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ಆರ್​ಎಸ್​ಎಸ್​ ನೀಡುತ್ತಿದೆ. ಇಂದು ಇಡೀ ದಿನ ಬಾಲಕಿಯರಿಗೆ ಶಸ್ತ್ರಾಸ್ತ್ರ ಬಳಕೆ ಕುರಿತು ತರಬೇತಿ ನೀಡಲಾಗುತ್ತಿದೆ. ಬಾಲಕಿಯರ ಆತ್ಮ ರಕ್ಷಣೆಗಾಗಿ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಉತ್ತರಪ್ರದೇಶದ ಅಲಿಘರ್​​​ನ ರಾಷ್ಟ್ರ ಸೇವಿಕಾ ಸಮಿತಿಯ ಸರಸ್ವತಿ ವಿದ್ಯಾ ಮಂದಿರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ತರಬೇತಿ ಶಿಬಿರವನ್ನು ನಡೆಸಲಾಗಿದೆ.
  • ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಸಂದರ್ಭದಲ್ಲಿ ನಡೆದದ್ದೇನು? - ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಬೈಕುಂಥ್​​ಪುರ್ ರೇಂಜ್ ಆಫೀಸರ್ ಸಂಜಯ್ ದತ್ತಾ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಜಲೈಗುರಿ ಪ್ರದೇಶದಲ್ಲಿ ತಾವು ಹಿಡಿದಿದ್ದ ಹೆಬ್ಬಾವನ್ನು ಹೆಗಲ ಮೇಲೆ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ತಾವು ರಕ್ಷಿಸಿದ ಬೃಹತ್ ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವೇಳೆ ಹೆಬ್ಬಾವು ಸಂಜಯ್ ದತ್ತಾ ಅವರನ್ನು ಸುತ್ತಿಕೊಳ್ಳಲು ಯತ್ನಿಸಿದೆ. ನಂತರ ಜೊತೆಯಲ್ಲಿದ್ದವರ ನೆರವನಿಂದ ದತ್ತಾ...
  • ಆಕಸ್ಮಿಕವಾಗಿ ತಾಯಿ ಮೇಲೆ ಗುಂಡು ಹಾರಿಸಿದ ಬಾಲಕಿ - ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ತಮ್ಮ ತಾಯಿಗೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಘಟನೆ ನಡೆದಿದ್ದು, ತಾಹಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ತಾಯಿ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದ್ದು, ಲೋಡ್ ಆಗಿರುವ ಗನ್ ಅನ್ನು ಆಟಿಕೆ ಎಂದು ತಿಳಿದು ಬಾಲಕಿ ತಾಯಿಯನ್ನೇ ಶೂಟ್ ಮಾಡಿದ್ದಾಳೆ. ಮಲಗಿದ್ದ ತಾಯಿಯನ್ನು ಗುರಿಯಾಗಿ ಹಾರಿಸಿದ ಗುಂಡು ದೇಹ ಹೊಕ್ಕಿದೆ ಎಂದು ವರದಿಯಾಗಿದೆ.
  • ಮಹಾಕಾಲ ಸನ್ನಿಧಿಯಲ್ಲಿ ಹೂವಿನ ವ್ಯಾಪಾರಿಗಳ ನಡುವೆ ಮಾರಾಮಾರಿ - ಭೋಪಾಲ್: ಮಧ್ಯಪ್ರದೇಶದ ಉಜ್ಜೈನಿ ಬಳಿಯ ಮಹಾಕಾಲ ದೇವಾಲಯದ ಬಳಿ ಹೂವಿನ ವ್ಯಾಪಾರಿಗಳು ಪರಸ್ಪರರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ನಾಗರಿಕರು ಮೊಬೈಲ್​​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಅಮಾನುಷವಾಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು, ಕೋಲು ಮುರಿದು ಹೋಗುವವರೆಗೆ ಥಳಿಸಿದ್ದಾನೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
  • ಸ್ಟೆರ್ಲೈಟ್ ಸೋರಿಕೆ ತಡೆಗೆ ಅಗತ್ಯ ಕ್ರಮ: ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ - ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಟರ್ಲೈಟ್ ರಾಸಾಯನಿಕ ಘಟಕದಲ್ಲಿ ಉಂಟಾಗುತ್ತಿದ್ದ ಸಲ್ಫರಿಕ್ ಆಸಿಡ್​​ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ ನಂದೂರಿ ಹೇಳಿದ್ದಾರೆ. ಸೋರಿಕೆ ತಡೆಗಟ್ಟಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟಕ ಮುಚ್ಚುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ಹತ್ತಿಕ್ಕಲು ನಡೆಸಿದ್ದ ಗೋಲೀಬಾರ್​ಗೆ 10ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದರು. ಕಡೆಗೆ ಘಟಕವನ್ನು ಮುಚ್ಚುವಂತೆ ಕೋರ್ಟ್ ಆದೇಶಿಸಿತ್ತು.
  • ಯೋಗ ದಿನಾಚರಣೆ ಜಾಗೃತಿಗೆ ಮುಖದ ಮೇಲೆ ಟ್ಯಾಟೂ ಹಾಕಿಸಿಕೊಂಡ ಬಾಲಕಿಯರು - ಲಖ್ನೋ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜನ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳು ತಮ್ಮ ಮುಖದ ಮೇಲೆ ಯೋಗದ ವಿವಿಧ ಭಂಗಿಯ ಟ್ಯಾಟೂ ಹಾಕಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಜೂನ್ 21ರಂದು ಯೋಗ ದಿನಾಚರಣೆ ನಡೆಯಲಿದ್ದು, ಉತ್ತರಪ್ರದೇಶದ ಮೊರಾದಾಬಾದ್​ನ 4 ವಿದ್ಯಾರ್ಥಿನಿಯರು ಯೋಗದ ಮುದ್ರೆಗಳನ್ನು ತಮ್ಮ ಮುಖದ ಮೇಲೆ ಅಚ್ಚು ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
  • ಭಾರತ, ಪಾಕ್, ಚೀನಾ ನಡುವಎ ತ್ರಿಪಕ್ಷೀಯ ಮಾತುಕತೆ ಪ್ರಸ್ತಾವನೆ ಇಟ್ಟ ಚೀನಾ - ದೆಹಲಿ/ಬೀಜಿಂಗ್: ಭಾರತದ ಕೆಲವು ಸ್ನೇಹಿತರು ಚೀನಾ, ಪಾಕಿಸ್ತಾನ ಮತ್ತು ಭಾರತ ತ್ರಿಪಕ್ಷೀಯ ಮಾತುಕತೆ ನಡೆಸಬೇಕು ಎಂಬ ಸಲಹೆ ನೀಡಿದ್ದಾರೆ ಎಂದು ಭಾರತದ ಚೀನಾ ರಾಯಭಾರಿ ಲು ಜಹೋರಿ ಹೇಳಿದ್ದಾರೆ. ಶಾಂಘೈ ಶೃಂಗ ಸಭೆಯ ಜೊತೆಗೆ ತ್ರಿಪಕ್ಷೀಯ ಮಾತುಕತೆ ನಡೆಯಬೇಕು. ಚೀನಾ, ರಷ್ಯಾ ಮತ್ತು ಮಂಗೋಲಿಯಾ ರಾಷ್ಟ್ರಗಳು ತ್ರಿಪಕ್ಷೀಯ ಮಾತುಕತೆ ನಡೆಸಿದಂತೆ, ಭಾರತ, ಚೀನಾ ಮತ್ತು ಪಾಕಿಸ್ತಾನ ಏಕೆ ಮಾತುಕತೆ ನಡೆಸಬಾರದು ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ, ನಾವು ಮತ್ತೊಂದು ದೋಕ್ಲಾಂ ಘಟನೆ ನಡೆಯಬಾರದು...
  • ಪೊಲೀಸ್ ನೇಮಕ ಪರೀಕ್ಷೆಯಲ್ಲಿ ಅಕ್ರಮ: ಮೂವರ ಬಂಧನ - ಲಖ್ನೋ: ಅಲಹಾಬಾದ್ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪದಡಿ 3 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಪೇದೆ ನೇಮಕದ ಪರೀಕ್ಷೆ ನಿನ್ನೆ ಮತ್ತು ಇಂದು ನಿಗದಿಯಾಗಿದ್ದು, ಈ ವೇಳೆ, ಬಚ್ಚಿಟ್ಟ ಮೈಕ್ ಮೂಲಕ ಕಳುಹಿಸಿ, ಉತ್ತರ ಬರೆದ ಆರೋಪ ಎದುರಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಲಹಾಬಾದ್​ನ ಎಸ್​ಎಸ್​​ಪಿ ನಿತಿನ್ ತಿವಾರಿ, ಒಂದು ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ಹೇಳಲು 5 ಲಕ್ಷ ರೂ. ದರ ನಿಗದಿಗೊಳಿಸಲಾಗಿತ್ತು ಎಂದಿದ್ದಾರೆ.
  • 4 ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ - ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ತನ್ನ ಅಟಾಟೋಪ ಮುಂದುವರೆಸಿದ್ದು ಬಂಡಿಪೋರಾದಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿತು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಯಿಂದ ಪ್ರತಿ ದಾಳಿ ನಡೆಸಿ, 4 ಭಯೋತ್ಪಾದಕರನ್ನು ಹತ್ಯೆಗೈದಿದೆ. ಈ ಮೂಲಕ ಪಾಕ್ ಪುಂಡಾಟಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಇದಕ್ಕೂ ಮುನ್ನ ನಡೆದ ಕದನ ವಿರಾಮ ಘೋಷಣೆಯ ನಂತರ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರದಲ್ಲಿ ಉಗ್ರರಿಗಾಗಿ ಶೋಧಕಾರ್ಯ ನಡೆಸಲಾಗಿದ್ದು, ಬಿಜ್ಬೆಹರಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಶೋಧ...
870x150 Ads

Sports

[ View All ]

ಫಿಫಾ ವಿಶ್ವಕಪ್​​ನಲ್ಲಿ ಗೆಲುವಿನ ನಗೆ ಬೀರಿದ ಉರೂಗ್ವೆ

ಫಿಟ್​ ಫೈನ್​ ಧೋನಿ, ರೋಟಿನ್​ ಕಹಾನಿ

ಯಾವುದೇ ಆಟಗಾರರಿಗೆ ಫಿಟ್​ನೆಸ್​ ಬಹಳ ಇಪಾರ್ಟೆಂಟ್​. ಫಿಟ್​ನೆಸ್ ಇಲ್ಲದಿದ್ರೆ ಅವರಲ್ಲಿ ಎಷ್ಟೇ ...

21ನೇ ಫೀಫಾ ವಿಶ್ವಕಪ್​ಗೆ ನಿನ್ನೆ ಅದ್ಧೂರಿ ಚಾಲನೆ

ಪುಟ್ಬಾಲ್​ ಅಭಿಮಾನಿಗಳ ಕಾತುರಕ್ಕೆ ನಿನ್ನ ಮುಕ್ತಿ ಸಿಕ್ಕಿದೆ. 21ನೇ ಫೀಫಾ ವಿಶ್ವಕಪ್​ಗೆ ನಿನ್ನೆ ...

ಮಗಳಿಂದ ಪರಿಪೂರ್ಣ ವ್ಯಕ್ತಿಯಾದ್ರು ಧೋನಿ

Metro

[ View All ]

ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್​ ನೌಕರರ ಪ್ರತಿಭಟನೆ..

ಎಸ್ಮಾ ಜಾರಿಗೆ ಅನುಮತಿ…

ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಮೆಟ್ರೋ ನೌಕರರ ಹಲವು ದಿನಗಳಿಂದ ಧರಣಿ ನಡೆಸಿಕೊಂಡು ಬಂದಿದ್ರ...

ಮತ್ತೆ ಏರಿಕೆಯಾಯ್ತು ಪೆಟ್ರೋಲ್ ಬೆಲೆ…

ಶಾಲಾ ಶುಲ್ಕ ಏಕಾಏಕಿ 41 ಸಾವಿರಕ್ಕೆ ಹೆಚ್ಚಳ..

ಶಾಲಾ ಶುಲ್ಕ ಹೆಚ್ಚಳ ಖಂಡಿಸಿ ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ಎದುರು ಪೊಷಕರು ಪ್ರತಿಭಟನೆ ನಡೆ...

Lifestyle

[ View All ]

ಕೋಟಿ ಕೋಕಾಗೆ ತಾಯಿಯಾದ ಸಂಭ್ರಮ..

ಕಿಡ್ಸ್ ನೈಲ್ ಆರ್ಟ್…

ಹೆಂಗಳೆಯರು ಅಲಂಕಾರ ಪ್ರಿಯರು ಸದಾ ಯಾವುದಾದ್ರು ಹೊಸ ಟ್ರೆಂಡ್ ಬಂದಿದೆಯಾ ಅಂತ ಹುಡುಕ್ತಾ ಇರ್ತಾರ...

ಹೆಂಗಳೆಯರ ಮೋಹಕ ಆ್ಯಂಟಿಕ್ ಜ್ಯುವೆಲ್ಲರಿ…

ಹಳೆ ಬೈಕ್​​ಗಳಿಗೆ ನ್ಯೂ ಲುಕ್​..

ಮಾರ್ಕೆಟ್​ನಲ್ಲಿ ಹೊಸ ಹೊಸ ಬೈಕ್ ಬಂದ್ರೆ ಸಾಕು ಬೈಕ್ ಕ್ರೇಜ್ ಇರೊರು ಅದನ್ನಾ ಖರೀದಿ ಮಾಡೋ ಶೋಕಿ ಒ...