ಜೈಪುರ : ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮಣಿಸಿತು. ಪಂದ್ಯದ ಅಂತಿಮ ಹಂತದ ವರೆಗೆ ರೋಚಕತೆ ಮನೆ ಮಾಡಿತ್ತು. ಗೆಲ್ಲುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಿದ್ದು ಕೊನೆಯ ಎರಡು ಓವರ್ ಇದ್ದಾಗ ಮಾತ್ರ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಗೆ ಕಟ್ಟಿ ಹಾಕಿತು. ಈ ಮೊತ್ತ ಗೆಲುವಿಗೆ ಸಾಕೇ ಎಂಬ ಪ್ರಶ್ನೆ ಇತ್ತು. ಆದರೆ ಈ ಮೊತ್ತ ದೆಹಲಿಗೆ ಸಾಕಾಗಲಿಲ್ಲ. ರಾಯಲ್ಸ್ ತಂಡ ರಾಯಲ್ ಆಗಿ ಆಡಿ ಈ ಮೊತ್ತವನ್ನು ಮುಟ್ಟಲು ದೆಹಲಿಗೆ ಅವಕಾಶ ನೀಡಲಿಲ್ಲ.

ದೆಹಲಿ ತಂಡಕ್ಕೆ ಹಲವು ರೀತಿಯ ಸಮಸ್ಯೆಗಳಿದ್ದವು. ದೆಹಲಿ ತಂಡದ ನಾಯಕ ರಿಷಭ್ ಪಂತ್ ತಮ್ಮ ಗಾಯದಿಂದ ಹೊರ ಬಂದು ಮೈದಾನಕ್ಕೆ ಇಳಿದಿದ್ದರು..ಜೊತೆಗೆ ತಂಡದಿಂದ ಸಂಘಟಿತ ಹೋರಾಟ ಕಂಡು ಬರಲಿಲ್ಲ. ಚೇಸಿಂಗ್ ನಲ್ಲಿ ಶಿಸ್ತು ಬದ್ಧ ಆಟವೂ ಕಾಣಸಿಗಲಿಲ್ಲ. ಕೊನೆಯ ಓವರ್ ಗಳನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೂ ದೆಹಲಿ ತಂಡಕ್ಕೆ ಸಾಧ್ಯವಾಗಲಿಲ್ಲ. ಆವೀಶ್ ಖಾನ್ ಅವರ ಶಿಸ್ತು ಬದ್ಧ ಮತ್ತು ಪರಿಣಾಮಕಾರಿ ಬೌಲಿಂಗ್ ನಿಂದಾಗಿ ದೆಹಲಿ ಹೆಣಗಾಡತೊಡಗಿತು. ಗುರಿ ದೂರ…ಬಹು ದೂರ ಎನ್ನುವಂತಾಯಿತು.

ವಾರ್ನರ್ ಮತ್ತು ಮಾರ್ಷ್ ಅವರ ಉತ್ತಮ ಆರಂಭಿಕ ಆಟದ ಹೊರತಾಗಿಯೂ ದೆಹಲಿ ತಂಡ ಚೇಸಿಂಗ್ ನಲ್ಲಿ ಎಡವಿತ್ತು.

ಈ ಜೋಡಿಯ ಜೊತೆಯಾಟ ಮುರಿದ ನಂತರ ಸ್ಟಬ್ಸ್ ಟಾರ್ಗೆಟ್ ತಲುಪುವ ನಿಟ್ಟಿನಲ್ಲಿ ಹೋರಾಟ ನಡೆಸಿದರು. ಆದರೆ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿತ್ತು ಹೀಗಾಗಿ ಜಯ ಗಗನ ಕುಸುಮವಾಯಿತು.

Leave a Reply

Your email address will not be published. Required fields are marked *