ಮೈ ಹೂ ನಾ ? ಈ ಸಿನಿಮಾ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಭಾರತೀಯ ಚಿತ್ರರಂಗದಲ್ಲಿ ಇದು ಸೃಷ್ಟಿಸಿದ ಮೈಲುಗಲ್ಲು ಹಾಗೆ.
ಫರಾ ಖಾನ್ ನಿರ್ದೇಶನದ ಈ ಚಿತ್ರಕ್ಕೆ ಈಗ ೨೦ ವರ್ಷ…ಹೌದು ೨೦ ವರ್ಷ. ಈ ೨೦ ವರ್ಷಗಳಲ್ಲಿ ಅದೆಷ್ಟು ನೆನಪುಗಳು !
ಫರಾ ಖಾನ್ ಹಲೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಶಾರೂಖ್ ಅವರನ್ನು ಕಾಲೇಜಿಗೆ ಕರೆದುಕೊಂಡು ಹೋಗಿದ್ದು… ಅದು ಹೀಗೆ ಮುಂದುವರಿಯುತ್ತದೆ.
ಈ ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡುವಾಗ ಶೋಲೆ, ಅಮರ್ ಅಕ್ಬರ್ ಅಂತೋನಿ, ನಸೀಬ್ ಮೊದಲಾದ ಸಿನಿಮಾಗಳನ್ನು ನೆನಪು ಮಾಡಿಕೊಳ್ಳಲಾಗುತ್ತೆ. ಅದೇ ಸಾಲಿಗೆ ಸೇರುವ ಸಿನಿಮಾ ಮೈ ಹೂ ನಾ ?
ಇವತ್ತೂ ಸಹ ಈ ಸಿನಿಮಾ ಬಿಡುಗಡೆಯಾದರೆ ಅಭಿಮಾನಿಗಳು ಚಿತ್ರ ಮಂದಿರದತ್ತ ಓಡುತ್ತಾರೆ.
ಏಪ್ರಿಲ್ ೩೦ ರಂದು ೨೦ ವರ್ಷ ಪೂರೈಸುವ ಈ ಸಿನಿಮಾ ಯಶಸ್ಸು ಕಾಣಲು ಕಾರಣಗಳೇನು ಎಂಬ ಪ್ರಶ್ನೆಯನ್ನು ಕಳೆದ ೨೦ ವರ್ಷಗಳಿಂದ ಕೇಳುತ್ತಲೇ ಬರಲಾಗಿದೆ. ಉತ್ತರ ನೀಡುವವರು ನೀಡುತ್ತಲೇ ಇದ್ದಾರೆ. ಈ ಚಿತ್ರದಲ್ಲಿ ಇರುವ ನಾಟಕೀಯ ಅಂಶ, ಹಾಸ್ಯ ಮೇಳೈಸಿರುವ ರೀತಿ ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದು.
ಆದರೆ ಈ ಸಿನಿಮಾದ ಟೈಟಲ್. ಎನನ್ನೋ ತುಂಬಿ ಬಿಡುತ್ತದೆ. ಮೈ ಹೂ ನಾ ಎಂದರೆ ನಾನಿದ್ದೇನೆ ಎಂಬುದು ವಿಶ್ವಾಸ ತುಂಬುವ ಮಾತು. ಇದೇ ಸಾಕಲ್ಲವೆ ?

Leave a Reply

Your email address will not be published. Required fields are marked *