ಬಾರಿಯ ಐ ಪಿಎಲ್ ವಿಶೇಷ ಅಂದರೆ ಅನಿರೀಕ್ಷಿತ ಫಲಿತಾಂಶ. ಘಟಾನುಘಟಿಗಳಿರುವ ತಂಡಗಳು ನೆಲ ಕಚ್ಚುತ್ತಿವೆ. ಅಂಡರ್ ರೇಟೆಡ್ ತಂಡಗಳು ಜಯಭೇರಿ ಭಾರಿಸುತ್ತಿವೆ.ನಿನ್ನೆ ಪಂಜಾಬ್ ಮತ್ತು ಕೊಲಕತ್ತಾ ನಡುವೆ ನಡೆದ ಪಂದ್ಯ ಕೂಡ ಹಾಗೆ. ಪಂಜಾಬ್ ಜಯಭೇರಿ ಭಾರಿಸುತ್ತೆ ಎಂದು ಎಂದು ಯಾರೂ ಭಾವಿಸಿರಲಿಲ್ಲ. ಪಂಜಾಬ್ ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆಯನ್ನೇ ಬರೆದು ಬಿಟ್ಟಿತು.
ಕೋಲ್ಕತ್ತಾದಲ್ಲಿ ನಡೆದ ಕೊಲಕತ್ತಾ- ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ, ಪಂಜಾಬ್ ತಂಡ 8 ವಿಕೆಟ್ ಗಳ ಗೆಲುವು ದಕ್ಕಿಸಿಕೊಂಡಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಿಗದಿತ 20 ಓವರ್ ಗಳಿಗೆ 261 ರನ್ ಗಳಿಗೆ ಕಟ್ಟಿ ಹಾಕಿತು. ಇದು ಸಣ್ನಮೊತ್ತವೇನೂ ಆಗಿರಲಿಲ್ಲ.
ಬಳಿಕ ರನ್ ಚೇಸಿಂಗ್ ನಲ್ಲಿ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ ಕೇವಲ 18.4 ಓವರ್ ಗಳಲ್ಲಿ 262 ರನ್ ಗಳಿಸುವ ಮೂಲಕ ಎದುರಾಳಿ ವಿರುದ್ಧ ಗೆಲುವು ದಾಖಲಿಸಿತು. ಐಪಿಎಲ್ ನಲ್ಲಿ ತಂಡವೊಂದು ರನ್ ಚೇಸ್ ನಲ್ಲಿ 250 ರನ್ ಗಳಿಗೂ ಅಧಿಕ ರನ್ ಗಳಿಸಿದ ದಾಖಲೆಯನ್ನು ಪಂಜಾಬ್ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. ಇದಷ್ಟೇ ಅಲ್ಲದೇ ಅತ್ಯಂತ ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿ ಗೆಲುವು ದಾಖಲಿಸಿದ ತಂಡ ಎಂಬ ದಾಖಲೆಯನ್ನೂ ಪಂಜಾಬ್​ ನಿರ್ಮಿಸಿದೆ.
ಪಂಜಾಬ್​ ಕಿಂಗ್ಸ್​ ಪರ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೇರ್​ಸ್ಟೋ ಕೇವಲ 5.6 ಓವರ್​ ಗಳಲ್ಲಿ ಮೊದಲ ವಿಕೆಟ್​​ಗೆ 93 ರನ್​ ಗಳಿಸುವ ಮೂಲಕ ಅಬ್ಬರದ ಬ್ಯಾಟಿಂಗ್​ ಮಾಡಿದರು.

Leave a Reply

Your email address will not be published. Required fields are marked *