ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಬೆಳವಣಿಗೆಗಳನ್ನು ಅಮೇರಿಕ ಗಂಭೀರವಾಗಿ ಪರಿಗಣಿಸಿದೆ.

ಈ ಕುರಿತು ಅಮೇರಿಕ ನೀಡಿದ ಹೇಳಿಕೆಯ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಕಟೂವಾಗಿ ಪ್ರತಿಕ್ರಿಯಿಸಿತ್ತು, ಅಮೇರಿಕ ರಾಯಬಾರಿ ಸಿಬ್ಬಂದಿಯನ್ನು ವಿದೇಶಾಂಗ ಇಲಾಖೆಗೆ ಕರೆಸಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೆ ಅಮೇರಿಕ ಈಗಲೂ ತನ್ನ ನಿಲುಮೆಯನ್ನು ಬದಲಿಸಿಲ್ಲ. ಒತ್ತಡಕ್ಕೆ ಮಣಿದಿಲ್ಲ..ಇದು ಭಾರತ ಮತ್ತು ಅಮೇರಿಕ ನಡುವಿನ ಸಂಬಂಧದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು.

ಅರವಿಂದ ಕೇಜ್ರಿವಾಲ್ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಯುತ, ಪಾರದರ್ಶಕ ಮತ್ತು ಸಕಾಲಿಕ ಕಾನೂನು ಪ್ರಕ್ರಿಯೆಯನ್ನು ಬೆಂಬಲಿಸುವುದಾಗಿ ಅಮೇರಿಕ ಪ್ರತಿಕ್ರಿಯೆ ನೀಡಿದೆ. ಇದು ಗಂಭೀರ ಸ್ವರೂಪದ ಪ್ರತಿಕ್ರಿಯೆಯಾಗಿದೆ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಬ್ಯಾಂಕ್ ಖಾತೆಗಳ ಸ್ಥಗಿತ ಮೊದಾಲಾದ ಬೆಳವಣಿಗೆಯನ್ನು ನಾವು ನಿಕಟವಾಗಿ ಪರಿಶೀಲಿಸುತ್ತಿದ್ದೇವೆ. ಇದನ್ನು ನಾವು ಮುಂದುವರಿಸುತ್ತೆವೆ ಎಂದು ಅಮೇರಿಕ ಹೇಳಿದೆ. ಈ ಮೂಲಕ ಈ ವಿಚಾರಗಳಲ್ಲಿ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದ ಆಕ್ಷೇಪದ ನಂತರವೂ ಅಮೇರಿಕ ತನ್ನ ನಿಲುವಿಗೆ ಬದ್ಧವಾಗಿರುವುದು ಗಮನಾರ್ಹವಾಗಿದೆ.

Leave a Reply

Your email address will not be published. Required fields are marked *