ಕಾಂಗ್ರೆಸ್ ನಾಯಕರ ಮೇಲೆ IT ಅಸ್ತ್ರ ; ಚುನಾವಣೆ ಬರುತ್ತಿದ್ದಂತೆ ಡಿ ಕೆ ಸುರೇಶ್ ಆಪ್ತರ ಮೇಲೆ ದಾಳಿ

It Raid IN Bengaluru: ಕೋಣನಕುಂಟೆಯಲ್ಲಿರುವ ಗಂಗಾಧರ ಎನ್ನುವವರ ಮನೆಯ ಮೇಲೆ IT RAID ನಡೆದಿದ್ದು. ಇವರು ಡಿ.ಕೆ. ಸುರೇಶ್ ಅವರ ಆಪ್ತರು ಎಂದು ಹೇಳಲಾಗಿದೆ

ಬೆಂಗಳೂರು : ಚುನಾವಣೆಯ ಮೊದಲ ಹಂತದ ಮತದಾನ ನಡೆಯಲು ಒಂದು ದಿನ ಇರುವಂತೆ ಐ ಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮೇಲೆ ದಾಳಿ ಪ್ರಾರಂಭಿಸಿದ್ದಾರೆ.

ನಿನ್ನೆ ನಗರದ ಕೋಣನಕುಂಟೆಯಲ್ಲಿ ಇರುವ ಗಂಗಾಧರ ಎನ್ನುವವರ ಮನೆಯ ಮೇಲೆ ಐಟಿ ದಾಳಿ ನಡೆಯಿತು.
ಇವರು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಆಪ್ತರು ಎಂದು ಹೇಳಲಾಗಿದೆ.
ಹಾಗೆ ಇನ್ನೂ ಒಂದೆರಡು ಕಡೆ ದಾಳಿ ನಡೆದಿರುವ ವರದಿಗಳಿವೆ.

ನಿನ್ನೆ ಈ ದಾಳಿ ನಡೆಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಗಂಗಾಧರ್ ಅವರು ಶ್ರೀಮಂತರು. ಅವರ ಮೇಲೆ ದಾಳಿ ನಡೆಸಿದವರಿಗೆ ಬಿಜೆಪಿ ಶ್ರೀಮಂತರು ಯಾಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.

Author

error: