ಅಮೇರಿಕ ವಿಶ್ವವಿದ್ಯಾಲಯಗಳಲ್ಲಿ ಪ್ಯಾಲಿಸ್ತೇನ್ ಪರ ಪ್ರತಿಭಟನೆ ; ವಿದ್ಯಾರ್ಥಿಗಳ ಬಂಧನ

Pro Palestinian Protests : ಪ್ರಸಿದ್ದ ವಿಶ್ವವಿದ್ಯಾಲಯಗಳಾದ ಹಾರ್ವರ್ಡ್, ಯಾಲೆ ವಿಶ್ವವಿದ್ಯಾಲಯಗಳಲ್ಲಿ 34 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ನ್ಯೂಯಾರ್ಕ್ : ಗಜಾ ಪ್ರದೇಶದ ಮೇಲೆ ಇಸ್ರೇಲಿ ದಾಳಿ ತೀವ್ರಗೊಳ್ಳುತ್ತಿರುವಂತೆ ಅಮೇರಿಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಇಸ್ರೇಲಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ಯಾಲಿಸ್ತೇನಿ ಪರವಾದ ಪ್ರತಿಭಟನಾಕಾರರನ್ನು ಪೊಲೀಸರು ಬಂದಿಸಿದ್ದಾರೆ.

ಪ್ರಸಿದ್ದ ವಿಶ್ವವಿದ್ಯಾಲಯಗಳಾದ ಹಾರ್ವರ್ಡ್, ಯಾಲೆ ವಿಶ್ವವಿದ್ಯಾಲಯಗಳಲ್ಲಿ 34 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ಹಲವಾರು ವಿಶ್ವವಿದ್ಯಾಲಯಗಳಿಗೆ ಪಸರಿಸಿದೆ.

ಪ್ಯಾಲೆಸ್ತೇನಿಯನ್ ಸೊಲಿಡಾರಿಟಿ ಸಮಿತಿ ಈ ಪ್ರತಿಭಟನೆಯ ವ್ಯವಸ್ಥೆ ಮಾಡಿದೆ. ಈ ಪ್ರತಿಭಟನೆಯನ್ನು ತಡೆಯಲು ಆಡಳಿತ ವರ್ಗ 100ಕ್ಕೂ ಹೆಚ್ಚು ಟ್ರೂಪರ್ ಗಳನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿದೆ ಎಂದು ವರದಿ ತಿಳಿಸಿದೆ..
ಸುಮಾರು ನೂರಾರು ವಿದ್ಯಾರ್ಥಿಗಳು ಟೆಂಟ್ ಹಾಕಿಕೊಂಡು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

Author

error: