ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಪರಿಣಾಮ ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತದ ಗ್ರಾಮವೊಂದಕ್ಕೆ ಸಂಪರ್ಕ ಕಡಿತಗೊಂಡಿದೆ.

ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಮಳೆಯಿಂದ ಹೆದ್ದಾರಿ ಕೊಚ್ಚಿ ಹೋಗಿರುವುದರಿಂದ ದಿಬಾಂಗ್ ಕಣಿವೆಯೊಂದಿಗೆ ಸಂಪರ್ಕ ಕಡಿತವಾಗಿದೆ.

ದಿಬಾಂಗ್ ಜಿಲ್ಲೆಯೂ ಭಾರಿ ಮಳೆಗೆ ಸಾಕ್ಷಿಯಾಗಿದ್ದು, ಹುನ್ಲಿ ಹಾಗೂ ಅನಿನಿ ನಡುವೆ ಬರುವ ರಾಷ್ಟ್ರೀಯ ಹೆದ್ದಾರಿ 313ರಲ್ಲಿ ಭೂಕುಸಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಕೊಚ್ಚಿ ಹೋಗಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೆದ್ದಾರಿಯ ಒಂದು ಭಾಗವೇ ಕಾಣೆಯಾಗಿರುವುದನ್ನು ತೋರಿಸುತ್ತಿವೆ. ಇದರಿಂದಾಗಿ ವಾಹನಗಳು ಇನ್ನೊಂದು ಬದಿಗೆ ಸಾಗಲಾಗದೇ ನಿಂತಿವೆ.

ಈ ಹೆದ್ದಾರಿ ಚೀನಾ ಗಡಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದ್ದು, ಸ್ಥಳೀಯ ಜನರ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಇಂತಹ ಹೆದ್ದಾರಿ ಈಗ ಕುಸಿತಗೊಂಡಿರುವುದರಿಂದ ಸ್ಥಳೀಯರು ಹಾಗೂ ಭದ್ರತಾ ಪಡೆ ಇಬ್ಬರು ತೊಂದರೆಗೊಳಗಾಗುವಂತಾಗಿದೆ. 

Author

Leave a Reply

Your email address will not be published. Required fields are marked *