ಇದೊಂದು ಅಪರೂಪದ ಪ್ರಕರಣ. ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಕೇಜ್ರಿವಾಲ್..ನ್ಯಾಯಾಲಯದಲ್ಲಿ ತಮ್ಮ ಪರವಾದ ವಕೀಲರು ಹಾಜರಿದ್ದರೂ ತಾವೇ ವಾದ ಮಂಡಿಸುವುದಾಗಿ ಅವರ್ ಮನವಿ ಮಾಡಿದರು. ನ್ಯಾಯಾಲಯದ ಅನುಮತಿ ಪಡೆದು ಹಿಂದಿಯಲ್ಲಿ ವಾದ ಮಂಡಿಸಿದರು.

ಅಬ್ಕಾರಿ ನೀತಿಯಲ್ಲಿ ಹಗರಣ ನಡೆದಿಲ್ಲ. ನಂತರ ನಡೆದಿದೆ. ಶರತ್ ಚಂದ್ರ ರೆಡ್ಡಿ ಅವರಿಗೆ ಜಾಮೀನು ದೊರಕಿದ ಮೇಲೆ ಅವರು ಬಿಜೆಪಿಗೆ ದೇಣಿಗೆ ನೀಡುತ್ತಾರೆ. ಅವರಿಗೆ ಜಾಮೀನು ನೀಡುವುದಕ್ಕೂ ಇಡಿ ಪರ ವಕೀಲರು ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಕೇಜ್ರಿವಾಲ್ ನ್ಯಾಯಾಲಯದ ಮುಂದೆ ವಾದಿಸಿದರು.

ಅಬಕಾರಿ ನೀತಿ ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳಿಂದ ನನನ್ನು ಆರೋಪಿತನಾಗಿ ಮಾಡಲಾಗಿದೆ. ಹಾಲಿ ಸಿಎಂ ಅನ್ನು ಬಂಧಿಸಲು ನಾಲ್ಕು ಹೇಳಿಕೆಗಳು ಸಾಕೇ? ಎಂದು ಪ್ರಶ್ನಿಸಿದ ಕೇಜ್ರಿವಾಲ್, ಶರತ್ ಚಂದ್ರರೆಡ್ಡಿ ಬಿಜೆಪಿಗೆ 55 ಕೋಟಿ ದೇಣಿಗೆ ನೀಡಿದ್ದಾರೆ “ನನ್ನ ಬಳಿ ಇದಕ್ಕೆ ಪುರಾವೆಗಳಿವೆ ಎಂದು ಹೇಳಿದರು

ನಂತರ ಅರವಿಂದ್ ಕೇಜ್ರಿವಾಲ್ ಅವರ ಕಸ್ಟಡಿ ಅವಧಿಯನ್ನು ರೂಸ್ ಅವೆನ್ಯೂ ನ್ಯಾಯಾಲಯ ಏಪ್ರಿಲ್ 1ರವರೆಗೆ ವಿಸ್ತರಿಸಿತು. ಎಎಪಿ ಮುಖ್ಯಸ್ಥರಾದ ಕೇಜ್ರಿವಾಲ್ ಅವರ ವಿಚಾರಣೆಗೆ ಏಳು ದಿನಗಳ ಕಸ್ಟಡಿಗೆ ಇಡಿ ಕೋರಿತ್ತು. ಆದರೆ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ನ್ಯಾಯಾಲಯ ಹೇಳಿತು. ಗುರುವಾರ ಕಸ್ಟಡಿ ಅವಧಿ ಕೊನೆಗೊಳ್ಳುತ್ತಿದ್ದಂತೆಯೇ, ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಇಡಿ ಹಾಜರುಪಡಿಸಿತು.

ಕಸ್ಟಡಿ ವಿಚಾರಣೆ ಸಮಯದಲ್ಲಿ ಐದು ದಿನಗಳಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಅವರು ತಪ್ಪಿಸಿಕೊಳ್ಳುವ ಉತ್ತರ ನೀಡುತ್ತಿದ್ದಾರೆ ಎಂದು ಇಡಿ ಹೊಸ ರಿಮಾಂಡ್ ಅರ್ಜಿಯಲ್ಲಿ ಹೇಳಿತು. ಕಸ್ಟಡಿ ಅವಧಿಯಲ್ಲಿ ಇತರ ಮೂವರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *