ಚೆನ್ನೈ : ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್​ ವಿರುದ್ಧ ಜಯವನ್ನು ಸಾಧಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ತಾನೇ ಸೂಪರೋ ಸೂಪರು ಎಂದು ತೋರಿಸಿಕೊಟ್ಟಿದ್ದು ಚೆನ್ನೈ.
ಈ ಜಯ ಸಾಮಾನ್ಯ ಜಯ ಅಲ್ಲ. 63 ರನ್ ಗಳ ಭರ್ಜರಿ ಜಯ..

ಐಪಿಎಲ್ 2024 ನ 7 ನೇ ಪಂದ್ಯ ಇದಾಗಿತ್ತು. ಮೊದಲು ಬ್ಯಾಟ್ ಮಾಡಿದ ಚೆನ್ನೈ 207 ರನ್ ಗಳ ಗುರಿಯನ್ನು ಗುಜರಾತ್ ಗೆ ನೀಡಿತ್ತು. ಆದರೆ ಈ ಗುರಿ ತಲುಪಲು ಗುಜರಾತ್ ಗೆ ಸಾಧ್ಯವಾಗಲೇ ಇಲ್ಲ..

ರನ್ ಚೇಸಿಂಗ್ ನಲ್ಲಿ ಗುಜರಾತ್ ತಂಡ ಆರಂಭದಲ್ಲೇ ಮುಗ್ಗರಿಸಿತ್ತು. ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಹಾ ಹಾಗೂ ಶುಭ್ಮನ್ ಗಿಲ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಬಳಿಕ ಸಾಯಿ ಸುದರ್ಶನ್ 31 ಎಸೆತಗಳಲ್ಲಿ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗುಜರಾತ್ ಟೈಟನ್ಸ್ ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಚೆನ್ನೈ ತಂಡದ ಬೌಲಿಂಗ್ ಅಬ್ಬರವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳನ್ನಷ್ಟೇ ಗಳಿಸಿತು. ಚೆನ್ನೈ ತಂಡದ ಪರ ದೀಪಕ್ ಚಹಾರ್, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಪಡೆದರೆ, ಡೇರಿಲ್ ಮಿಚೆಲ್, ಮತೀಶ ಪತಿರಾನ ತಲಾ 1 ವಿಕೆಟ್ ಪಡೆದರು.

Leave a Reply

Your email address will not be published. Required fields are marked *