ನವದೆಹಲಿ : ದೇಶದಲ್ಲೀಗ ಕ್ರಿಕೆಟ್ ಜ್ವರ. ಐ ಪಿಎಲ್ ಎಲ್ಲರ ಸಂಜೆಯನ್ನು ಆಕ್ರಮಿಸಿ ಕುಳಿತಿದೆ. ಸಂಜೆಯಾದರೆ ಸಾಕು ಕ್ರಿಕೆಟ್ ಅಭಿಮಾನಿಗಳು ಟಿವಿ ಮುಂದೆ ಪ್ರತಿಷ್ಟಾಪನೆ, ಇನ್ನು ಕ್ರಿಕೆಟ್ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಕಾರುಬಾರು. ಈ ಅಭಿಮಾನ ಮಿತಿ ಮೀರುತ್ತಿದೆ. ಎರಡು ದಿನಗಳ ಹಿಂದೆ ಅಹಮದಾಬಾದ್ ನಲ್ಲಿ ನಡೆದ ಗುಜರಾತ್ ಮತ್ತು ಮುಂಬೈ ನಡುವೆ ನಡೆದ ಪಂದ್ಯದುದ್ದಕ್ಕೂ ಅಭಿಮಾನಿಗಳು ಬಡಿದಾಡಿಕೊಂಡರು. ರೋಹಿತ್ ಶರ್ಮಾ ಮತ್ತು ಪಾಂಡ್ಯ ಅಭಿಮಾನಿಗಳು. ಮೈದಾನದಲ್ಲೂ ಇವರಿಬ್ಬರ ನಡುವೆ ಮಾತಿನ ಚಕಮಕಿ.

ರೋಹಿತ್ ಶರ್ಮಾ ಆವರನ್ನು ಅವಮಾನಕರ ರೀತಿಯಲ್ಲಿ ನಾಯಕತ್ವದಿಂದ ಕಿತ್ತೊಗೆದ ಅಂಬಾನಿ ದಣಿಗಳು. ಮುಂಬೈಗೆ ಜಯದ ಸರಮಾಲೆಯನ್ನು ತಂದವರು ರೋಹಿತ್ ಶರ್ಮಾ. ಆದರೆ ದಣಿಗಳೀಗೇನು ? ಅವರ ಬಳಿ ದುಡ್ದಿದೆ . ಯಾರನ್ನೂ ಬೇಕಾದರೆ ಖರೀದಿಸುವ ಅಹಂಕಾರ. ರೋಹಿತ್ ಶರ್ಮಾ ಯಾವ ಲೆಕ್ಕ ? ಅವರದೇನಿದ್ದರೂ ದುಡ್ದಿನ ಲೆಕ್ಕಾಚಾರ. ಆದರೆ ಅಭಿಮಾನಿಗಳಿಗೆ ಹಾಗಲ್ಲ. ಅವರಿಗೆ ಅವರು ಬೆಂಬಲಿಸುವ ತಂಡ ಮುಖ್ಯ. ಆಟಗಾರರು ಮುಖ್ಯ.

ಯಜಮಾನರಿಗೆ ಹಾಗಲ್ಲವಲ್ಲ ? :

ರೋಹಿತ್ ಶರ್ಮಾ ಕ್ರಿಕೆಟ್ ನ ಕ್ರಾಫ್ಟ್ಸ್ ಮೆನ್. ಶಾಂತ ಸ್ವಭಾವ. ಗೆಲ್ಲುವ ಹಠ.. ಕೈತಪ್ಪುವ ಜಯವನ್ನು ಎಳೆದುಕೊಳ್ಳುವ ಬದ್ಧತೆ. ಈ ಜಗಳದ ನಡುವೆ ಈ ಬಾರಿಯ ಐ ಪಿಎಲ್ ನ ಅಂತಿಮ ಪಂದ್ಯದ ಘೋಷಣೆ ಮಾಡಲಾಗಿದೆ. ಈ ಬಾರಿ ಫೈನಲ್ ನಡೆಯುವುದು ಚೆನ್ನೈನಲ್ಲಿ. ಚೆನ್ನೈನ ಅಂತಿಮ ಪಂದ್ಯ ರೋಚಕವಾಗುವುದರಲ್ಲಿ ಯಾವ ಅನುಮಾನವೂ ಬೇಕಾಗಿಲ್ಲ. ಆದರೆ ಈ ದುಡ್ದಿರುವ ದಣಿಗಳು ಏನು ಮಾಡುತ್ತಾರೆ? ಯಾವ ಯಾವ ಆಟಗಾರರಿಗೆ ಹಿಂದಿನಿಂದ ಹೊಡೆಯುತ್ತಾರೆ ನೋಡಬೇಕು.

ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಇದೇನು ಐಪಿಎಲ್ ಮೇಲೆ ಪರಿಣಾಮ ಬೀರುತ್ತಿಲ್ಲ. ಕರ್ನಾಟಕ, ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಎದ್ದಿದೆ. ಆದರೂ ಇದೇನು ಕ್ರಿಕೆಟ್ ಮೇಲೆ ಪರಿಣಾಮ ಬೀರುತ್ತಿಲ್ಲ.. ಕುಡಿಯಲು ನೀರಿಲ್ಲದಿದ್ದರೂ ಕ್ರಿಕೆಟ್ ಗೆ ನೀರಿದೆ.

ಏತನ್ಮಧ್ಯೆ, ಲಕ್ನೋವು ಏಪ್ರಿಲ್ 19 ರಂದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಆತಿಥ್ಯ ವಹಿಸಲಿದೆ, ಅದೇ ದಿನ ಉತ್ತರ ಪ್ರದೇಶ ಮೊದಲ ಹಂತದ ಚುನಾವಣೆಯನ್ನು ನಡೆಸುತ್ತದೆ.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, 2024 ರ ಟಿ 20 ವಿಶ್ವಕಪ್ ಅಮೇರಿಕಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿ ಪ್ರಾರಂಭವಾಗುವುದಕ್ಕೆ ಮೊದಲು ಭಾರತೀಯ ತಂಡಕ್ಕೆ ಐದು ದಿನಗಳು ಕಾಲಾವಕಾಶ.

.

Leave a Reply

Your email address will not be published. Required fields are marked *

You missed