ಬೆಂಗಳೂರು : ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ. ಅವರೀಗ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರು, ದೊಡ್ದಬಳ್ಳಾಪುರ, ಬಳ್ಳಾರಿ ಮೊದಲಾದ ಪ್ರದೇಶಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಮೊದಲಿನಿಂದಲೂ ಬಿಜೆಪಿಗೆ ಚಿತ್ರ ನಟರ ಮೋಹ. ಈಗಲೂ ಅಷ್ಟೇ. ಹಲವು ಚಿತ್ರ ನಟರಿಗೆ ಟಿಕೆಟ್ ನೀಡಿದೆ. ರಾಮಾಯಣದ ರಾಮ ಅರುಣ್ ಗೋವಿಲ್, ವಿವಾದಾತ್ಮಕ ಹೆಣ್ಣು ಮಗಳು ಚಿತ್ರ ನಟಿ ಕಂಗನಾ ಎಲ್ಲರೂ ಬಿಜೆಪಿ ಅಭ್ಯರ್ಥಿಗಳೇ. ಜೊತೆಗೆ ಇತರ ನಟ ನಟಿಯರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

ತೆಲುಗು ಚಿತ್ರ ನಟರು ಸ್ವಲ್ಪ ಬೇರೆ ರೀತಿ. ಅವರಿಗೆ ರಾಜಕೀಯ ಮಾಡಿ ಗೊತ್ತು. ರಾಜಕೀಯದಲ್ಲಿ ಯಶಸ್ವಿಯಾಗಿಯೂ ಗೊತ್ತು. ಆದರೆ ಕರ್ನಾಟಕದಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಿಗೆ ಜನ ಸೇರಿಸಲು ಇದು ಸಹಕಾರಿಯಾಗುವುದು ನಿಜ. ಆದರೆ ಇದು ಮತವಾಗಿ ಬದಲಾಗುತ್ತದೆಯೆ ? ಗೊತ್ತಿಲ್ಲ.

ಪವನ್ ಕಲ್ಯಾಣ ಯಶಸ್ವಿ ನಟ. ಆದರೆ ರಾಜಕೀಯವಾಗಿ ಇನ್ನೂ ಯಶಸ್ವಿಯಾಗಿಲ್ಲ. ಅವರು ಯಶಸ್ವಿಯಾಗುತ್ತಾರೆ ಎಂದು ಹೇಳುವುದು ಕಷ್ಟ. ಎನೇ ಇರಲಿ ಪವನ್ ಕಲ್ಯಾಣ ಅವರಿಂದ ರಾಜ್ಯ ಚುನಾವಣಾ ಪ್ರಚಾರಕ್ಕೆ ರಂಗು ಬರುವುದಂತೂ ನಿಜ.

Author

Leave a Reply

Your email address will not be published. Required fields are marked *