ಗಾಂಧಿನಗರ : ಹಿಂದೂಗಳನ್ನು ಒಡೆಯುವ ತುಷ್ಟೀಕರಣದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.‘

ಗುಜರಾತ್ ನ ವಿವಿದೆಡೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು ರಾಮ ಮತ್ತು ಶಿವನ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.

ಕಾಂಗ್ರೆಸ್ ಹಿಂದೂಗಳನ್ನು ಒಡೆಯಲು ಮುಂದಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಮ ಮತ್ತು ಶಿವನ ಕುರಿತು ಆಡಿರುವ ಮಾತುಗಳೂ ಅತ್ಯಂತ ಅಪಾಯಕಾರಿ ಎಂದು ಹೇಳಿದರು. ಇದು ದುರುದ್ದೇಶದ ಹೇಳಿಕೆ ಎಂದು ಪ್ರಧಾನಿ ಹೇಳಿದರು.

ರಾಮ ಮತ್ತು ಶಿವ ಭಕ್ತರ ನಡುವೆ ಭಿನ್ನಾಭಿಪ್ರಾಯ ಮತ್ತು ಓಡಕು ಮೂಡಿಸುವ ಯತ್ನ ಇದಾಗಿದೆ. ಆದರೆ ಮೊಘಲರಿಗೆ ಇದು ಸಾಧ್ಯವಾಗಲಿಲ್ಲ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗುತ್ತದೆಯೆ ಎಂದು ಅವರು ಪ್ರಶ್ನಿಸಿದರು.

Author

Leave a Reply

Your email address will not be published. Required fields are marked *