ಬೆಂಗಳೂರು : ಚುನಾವಣೆ ಬಂದರೆ ಸಾಕು ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಸಿದ್ದರಾಗುತ್ತಾರೆ. ಮೊದಲು ಭಾಷಣದ ತಯಾರಿ ನಡೆಸುವ ಅವರು ಯಾವ ಯಾವ ವಿಚಾರಗಳನ್ನು ಎತ್ತಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ,
ಮುಂದಿನದು ರೋಡ್ ಷೋ. ಒಂದರಿಂದ 10 ಕಿಮೀ ವರೆಗೆ ಅವರ ರೋಡ್ ಶೋ ನಡೆಯುತ್ತದೆ, ಈ ರೋಡ್ ಶೋನಲಿ ಪ್ರಧಾನಿ ಮಾತನಾಡುವುದಿಲ್ಲ. ರಸ್ತೆ ಎರಡೂ ಪಕ್ಕದಲ್ಲಿ ನಿಂತಿರುವ ಅಭಿಮಾನಿಗಳು ಹೂ ಮಳೆ ಗೈಯುತ್ತಾರೆ.ಅದಕ್ಕಾಗಿ ಅವರು ರೋಡ್ ಶೋ ಮಾಡುವ ನಗರ ಪಟ್ಟಣಗಳಲ್ಲಿ ರಾರಿ ಗಟ್ಟಲೆ ಹೂ ಖರೀದಿಸಲಾಗುತ್ತದೆ.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಪ್ರಧಾನಿಗಳ ರೋಡ್ ಶೋ ನಡೆದಿತ್ತು. ಆಗ ಕೆ ಅರ್ ಮಾರುಕಟ್ಟೆಯ ಹೂವನ್ನೆಲ್ಲ ಖರೀದಿಸಲಾಗಿತ್ತು. ಈಗ ಬೆಂಗಳೂರಿನ ಜನರಿಗೆ ಅಂತಹ ಇನ್ನೊಂದು ಅವಕಾಶ ಬಂದಿದೆ. ಏಪ್ರಿಲ್ 14 ರಂದು ಬೆಂಗಳೂರು ನಗರದಲ್ಲಿ ಪ್ರಧಾನಿ ಮತ್ತೊಮ್ಮೆ ರೋಡ್ ಶೋ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರಂದು ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಹಾಗೂ ರೋಡ್ ಶೋ ನಡೆಸುವರು.
ಪ್ರಧಾನಿ ಮೋದಿ ಅವರು ಮುಂದಿನ ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವರು.. ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸುವರು.. ಬಳಿಕ ರಾಮನಗರ ಅಥವಾ ಚೆನ್ನಪಟ್ಟಣದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವರು.
ಪ್ರಧಾನಿ ಮೋದಿ ಸುಮಾರು 10 ಕಿ. ಮೀ. ಗಳಷ್ಟು ದೂರ ರೋಡ್ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ರೋಡ್ ಶೋ ನಲ್ಲಿ ಜೆಡಿಎಸ್ ನಾಯಕರು ಪಾಲ್ಗೊಳ್ಳುತ್ತಾರೆಯೆ ಎಂಬ ಬಗ್ಗೆ ವಿವರಗಳು ಲಭ್ಯವಾಗಿಲ್ಲ. ಪ್ರಧಾನಿಗಳ ಜೊತೆ ಮಾಜಿ ಪ್ರಧಾನಿ ಹೆಚ್,ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಪಾಲ್ಗೊಳ್ಳುವರೆ ? ಗೊತ್ತಿಲ್ಲ.
ಇವರೂ ಪಾಲ್ಗೊಂಡರೆ ಇವರ ತಲೆಯ ಮೇಲೂ ಹೂ ಬೀಳಲಿದೆ. ಪ್ರಧಾನಿಗಳ ಜೊತೆ ಹೂ ಹಾಕಿಸಿಕೊಳ್ಳುವ ಸೌಭಾಗ್ಯ ಇವರದಾಗಲಿದೆ.
