ನವದೆಹಲಿ : ಭಾರತ ಪಾಕಿಸ್ಥಾನದ ಒಳನುಗ್ಗಿ ಟಾರ್ಗೆಟ್ ಕಿಲ್ಲಿಂಗ್ ಮಾಡುತ್ತಿದೆ ಎಂಬ ಆಂಗ್ಲ ದೈನಿಕ ಗಾರ್ಡಿಯನ್ ಪ್ರಕಟಿಸಿರುವ ತನಿಖಾ ವರದಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ದೇಶ ವಿದೇಶಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ವರದಿ ಸದ್ದು ಮಾಡುತ್ತಿದ್ದಂತೆ ಭಾರತದ ವಿದೇಶಾಂಗ ಇಲಾಖೆ ಈ ವರದಿಯನ್ನು ಅಲ್ಲಗಳೆದಿದೆ. ಭಾರತ ಇಂತಹ ಕೃತ್ಯಗಳನ್ನು ನಡೆಸುವುದಿಲ್ಲ ಎಂಬ ಸ್ಪಷ್ಟನೆ ನೀಡಿದೆ.

ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ವಿದೇಶಾಂಗ ಇಲಾಖೆಯ ಹೇಳಿಕೆಯನ್ನು ಸಮರ್ಥಿಸುವ ಬದಲಾಗಿ ಗಾರ್ಡಿಯನ್ ವರದಿಯನ್ನು ಅಪ್ರತ್ಯಕ್ಷವಾಗಿ ಸಮರ್ಥಿಸಿದ್ದಾರೆ.
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿ ಇನ್ನೊಂದು ದೇಶದಲ್ಲಿ ಅಡಗಿರುವವರನ್ನು ಕೊಲ್ಲುವುದು ತಪ್ಪೇ ಎಂದು ಅವರು ಪ್ರಶ್ನಿಸಿದ್ದಾರೆ.

ಉತ್ತರ ಭಾರತದ ಹಲವೆಡೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ನಮ್ಮ ಜನರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಮಗೆ ಗೊತ್ತು ಎಂದರು. ಇದು ನವಭಾರತ ಎಂದು ಹೇಳಿದ ಅವರು ಭಾರತದ ವಿರುದ್ಧ ಮಾತನಾಡುವ ಧೈರ್ಯವೂ ಅವರಿಗಿಲ್ಲ ಎಂದು ಪಾಕಿಸ್ಥಾನವನ್ನು ಟೀಕಿಸಿದರು

Author

Leave a Reply

Your email address will not be published. Required fields are marked *