ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಮತ್ತೆ ಹಿಂದಿನಂತೆ ಲಯ ಕಂಡುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಮೋದಿ ಕರೆದಿದ್ದಾರೆ.

ಈ ಹಿಂದೆ ಭಿನ್ನ ಧ್ವನಿ ಎತ್ತುವವರನ್ನು ವಿಅಚಾರಿಕವಾಗಿ ಮಾತನಾಡುವವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಬಿಜೆಪಿ ಮತ್ತು ಅದರ ಪರಿವಾರದ ನಾಯಕರು ಕರೆಯುತ್ತಿದ್ದರು. ಪ್ರಧಾನಿ ಮೋದಿ ಅವರೂ ಸಹ ಇದೇ ಭಾಷೆಯನ್ನು ಬಳಸುತ್ತಿದ್ದರು. ಆದರೆ ಈ ಭಾರಿ ಲೋಕಸಭಾ ಚುನಾವಣೆ ಘೋಷಣೆ ಆದ ಮೇಲೆ ಮೋದಿ ಅವರು ಈ ವಿಶೇಷಣವನ್ನು ಬಳಸಿರಲಿಲ್ಲ.

ಇದರಿಂದಾಗಿ ಮೋದಿ ಅವರು ತಮ್ಮ ಭಾಷಣದ ರೀತಿ ರಿವಾಜು ಬದಲಿಸಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಅದು ಸುಳ್ಳು ಎಂದು ಸಾಬೀತಾಗಿದೆ. ಮೋದಿ ಮತ್ತೆ ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆದಿದ್ದಾರೆ.

ಇನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಇಟಾಲಿಯನ್ ಮನಸ್ಥಿತಿ ಎಂದು ದೂಷಿಸತೊಡಗಿದ್ದಾರೆ. ತಮಾಷೆ ಎಂದರೆ ಇಟಲಿಯ ಪ್ರಾಧಾನಿಯವರೇ ಪ್ರಧಾನಿಯವರ ಸ್ನೇಹಿತೆ. ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಕ್ಡೆ ಯುಕ್ಡೆ ಗ್ಯಾಂಗ್ ಎಂದು ಕರೆಯುವುದಕ್ಕೆ ಕಾರಣ ಅವರು ರಾಜಸ್ಥಾನದಲ್ಲಿ ಮಾಡಿದ ಭಾಷಣ. ರಾಜಸ್ಥಾನಕ್ಕೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ತೆಗೆದಿರುವುದಕ್ಕೂ ಎನು ಸಂಬಂಧ ? ಎಂದು ಖರ್ಗೆ ಪ್ರಶ್ನಿಸಿದ್ದರು

ವಿಚಾರವನ್ನು ಎತ್ತಿಕೊಂಡ ಮೋದಿ ಕಾಂಗ್ರೆಸ್ ಪಕ್ಶ್ಃಅವನ್ನು ಅಧ್ಯಕ್ಷರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆದಿದ್ದಾರೆ.

Author

Leave a Reply

Your email address will not be published. Required fields are marked *