ನವದೆಹಲಿ : ಪ್ರಾಯಶಃ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಈಗ ದೇಶ ವಿದೇಶಗಳಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.
ಇಂದು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿತು. ಆಮ್ ಆದ್ಮಿ ಪಾರ್ಟಿಯ ಆಡಳಿತ ಇರುವ ಪಂಜಾಬ್ ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಗತ್ ಸಿಂಗ್ ಅವರ ಹುಟ್ಟೂರಿನಲ್ಲಿಯೂ ಕಾರ್ಯಕ್ರಮ ನಡೆಯಿತು.
ವಿದೇಶಗಳಲ್ಲೂ ಪ್ರತಿಭಟನಾ ಕಾರ್ಯಕ್ರಮಗಳು ನಡೆದವು. ಬೋಸ್ಟನ್ ನ ಹಾರ್ವರ್ಡ್ ಸ್ಕ್ವಾರ್, ಲಾಸ್ ಎಂಜಲೀಸ್ ನ ಹಾಲಿವುಡ್ ಸೈನ್, ವಾಷಿಂಗಟನ್ ಡಿಸಿ ಯ ಭಾರತೀಯ ರಾಯಭಾರಿ ಕಚೇರಿಯ ಹೊರಗೆಮ್ ನ್ಯೂಯಾರ್ಕ್ ಟೈಂಸ್ ಸ್ಕ್ವಾರ್, ಟೊರೆಂಟೋ, ಲಂಡನ್ ಮತ್ತು ಮೆಲ್ಬೋರ್ನ್ ಸೇರಿದಂತೆ ಹಲವೆಡೆ ಭಾರತೀಯ ಸಮುದಾಯದವರು ಪ್ರತಿಭಟನೆ ನಡೆಸಿದರು.
