ಕೆನಡಾ: ಬ್ರಿಟೀಷ್ ಕೊಲಂಬಿಯಾದಲ್ಲಿ ಹತ್ಯೆಯಾದ ಖಲಿಸ್ತಾನ ಪ್ರತ್ಯೇಕದಾವಾದಿ ಹರದೀಪ್ ಸಿಂಗ್ ನಿಜ್ಜಾರ್ ನ ಕೊಲೆಗೆ ಸಂಬಂಧಿಸಿದಂತೆ ಮೂವರು ಭಾರ‍ತೀಯರನ್ನು ಕೆನಡಾ ಪೋಲಿಸರು ಬಂಧಿಸಿದ್ದಾರೆ.

ಕಳೆದ ವರ್ಷ ನಡೆದ ಈ ಹತ್ಯಾ ಪ್ರಕರಣ ಅಂತಾರಾಷ್ಟ್ರ‍ೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವನ್ನು ಒದಗಿಸಿತ್ತು. ಭಾರತದ ಗುಪ್ತಚರರು ಈ ಹತ್ಯೆಯ ಹಿಂದೆ ಇದ್ದಾರೆ ಎಂದು ಕೆನಡಾ ಆರೋಪಿಸಿತ್ತು. ಭಾರತ ಇದನ್ನು ಅಲ್ಲಗಳೆದಿತ್ತು. ಈಗ ಕೆನಡಾ ಪೋಲಿಸರಿಗೆ ಸಿಕ್ಕಿರುವ ಈ ಮೂವರು ಭಾರತೀಯರು ಹಿಟ್ ಸ್ಕ್ವಾಡ್ ನ ಸದಸ್ಯರು ಎಂದು ಪೋಲಿಸರು ತಿಳಿಸಿದ್ದಾರೆ.

ಈ ಮೂವರನ್ನು ಕರನ್ ಪ್ರೀತ್ ಸಿಂಗ್, ಕಮಲ್ ಪ್ರೀತ್ ಸಿಂಗ್, ಮತ್ತು ಕರನ್ ಬ್ರಾರ್ ಎಂದು ಗುರುತಿಸಲಾಗಿದೆ. ಇವರು ಭಾರತೀಯ ನಾಗರಿಕರು. ಕಳೆದ ಕೆಲವು ತಿಂಗಳುಗಳಿಂದ ಈ ಮೂವರ ಚಲನವಲನದ ಮೇಲೆ ಪೊಲೀಸರಿ ನಿಗಾ ವಹಿಸಿದ್ದರು.

ನಾವು ಈಗ ವಿಚಾರಣೆ ನಡೆಸುತ್ತಿದ್ದೇವೆ. ಭಾರತದ ಸರ್ಕಾರದ ಜೊತೆ ಇವರಿಗೆ ನಂಟು ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಯಲ್ ಪೊಲೀಸರು ತಿಳಿಸಿದ್ದಾರೆ.

ಈ ಹಿಟ್ ಸ್ಕ್ವಾಡ್ ನ ಸದಸ್ಯರು ಬೇರೆ ಬೇರೆ ಕೆಲಸ ಮಾಡುತ್ತ ಇದನ್ನು ಮಾಡುತ್ತಾರೆ. ನಾವೀಗ ಎಲ್ಲ ವಿಧದಿಂದಲೂ ತನಿಖೆ ನಡೆಸುತ್ತಿದ್ದೇವೆ. ತನಿಖೆ ಇಲ್ಲಿಗೆ ಮುಗಿಯುವುದಿಲ್ಲ. ಇದರ ಹಿಂದೆ ಇರುವವರನ್ನು ಪತ್ತೆ ಮಾಡಬೇಕಾಗಿದೆ ಎಂದು ಕೆನಡಾದ ಪೋಲಿಸ್ ಸುಪರಿಂಟೆಂಡೆಂಟ್ ತಿಳಿಸಿದ್ದಾರೆ.

ಅಮೇರಿಕ ಕಾನೂನು ವಿಭಾಗದ ಜೊತೆಯಾಗಿ ಜಂಟಿಯಾಗಿ ಕೆಲಸ ಮಾಡಿ ಇವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.

Author

Leave a Reply

Your email address will not be published. Required fields are marked *