ಮಾಲೆ: ದ್ವೀಪ ರಾಷ್ಟ್ರ ಮಾಲ್ಡೀವ್ಸ್ ನಲ್ಲಿರುವ ಭಾರತೀಯ ಮಿಲಟರಿ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಉನ್ನತ ಮಟ್ಟದ ಸಭೆ ಶುಕ್ರವಾರ ನಡೆಯಿತು. ಮಾಲ್ಡೀವ್ಸ್ ಅಧ್ಯಕ್ಷರ ಸೂಚನೆಯಂತೆ ಮೇ 10 ರೊಳಗೆ ಎಲ್ಲ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಭಾರತ ವಾಪಸ್ ಕರೆಸಿಕೊಳ್ಳಬೇಕಾಗಿದೆ.
ಭಾರತ ವಿರೋಧಿ ಮತ್ತು ಚೀನಾ ಪರ ಎಂದು ಗುರುತಿಸಲಾಗುವ ಅಧ್ಯಕ್ಷ ಮೊಹಮ್ಮದ್ ಮೋಜು ದ್ವೀಪ ರಾಷ್ಟ್ರದಲ್ಲಿರುವ ಎಲ್ಲ ಭಾರತೀಯ ಮಿಲಿಟರಿ ಸಿಬ್ಬಂದಿಗಳನ್ನು ವಾಪಸ್ ಕಳುಹಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಇದಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಕ್ಕೇ ಭೇಟಿ ನೀಡಿ ಅಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವುದಕ್ಕೆ ಯತ್ನ ಪ್ರಾರಂಭಿಸಿದರು. ಇದನ್ನು ಮಾಲ್ಡೀವ್ಸ್ ನ ಇಬ್ಬರು ಸಚಿವರು ಟೀಕಿಸುವುದರೊಂದಿಗೆ ಎರಡೂ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಕೆಟ್ಟಿತು.
ಭಾರತದ ಪ್ರವಾಸಿಗರು ಮಾಲ್ಡೀವ್ಸ್ ಗೆ ಹೋಗುವುದಕ್ಕೆ ಬಹಿಷ್ಕಾರ ಹಾಕಿದರು. ಇದು ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸಿತು. ಆದರೆ ಮಾಲ್ಡೀವ್ಸ್ ಭಾರತದ ಮಿಲಿಟರಿ ಸಿಬ್ಬಂದಿ ವಾಪಸ್ ಕಳಿಸುವ ನಿಲುವನ್ನು ಬದಲಿಸಲಿಲ್ಲ.







