ಮಾಲೆ : ಮಾಲ್ಡೀವ್ಸ್ ದ್ವೀಪ ರಾಷ್ಟ್ರ ಭಾರತೀಯರನ್ನು ಹೊರ ಹಾಕಿ ಮಹಾನ್ ಸಾಧನೆ ಮಾಡಿದೆ ಎಂದುಕೊಂಡು ಈಗ ತೊಂದರೆಗೆ ಸಿಕ್ಕಿ ಹಾಕಿಕೊಂಡಿದೆ.
ಭಾರತ ನೀಡಿದ ಮೂರು ವಿಮಾನಗಳು ಮಾಲ್ಡೀವ್ಸ್ ಬಳಿ ಇದೆ. ಆದರೆ ಅದನ್ನು ಹಾರಿಸೋದಕ್ಕೆ ಅಲ್ಲಿನ ಮಿಲಿಟರಿಯಲ್ಲಿ ಯಾರಿಗೂ ಬರೋಲ್ಲ… ಮಾಲ್ಡೀವ್ಸ್ ನಲ್ಲಿ ಚೀನಾ ಪರವಾದ ಸರ್ಕಾರ ಬಂದ ಮೇಲೆ ಭಾರತೀಯರನ್ನು ಹೊರ ಹಾಕುವ ಪ್ರಕ್ರಿಯೆ ಪ್ರಾರಂಭವಾಯಿತು.
ಅಲ್ಲಿನ ಅಧ್ಯಕ್ಷರು ಭಾರತೀಯ ಮಿಲಿಟರಿ ಸಿಬ್ಬಂದಿ ಜೂನ್ 10 ರ ಒಳಗೆ ಜಾಗ ಖಾಲಿ ಮಾಡಬೇಕು ಎಂದು ಸೂಚಿಸಿದರು. ಭಾರತ ಒಪ್ಪಿಕೊಂಡಿತು. ಈಗ ಸುಮಾರು 80 ರಷ್ಟಿದ್ದ ಭಾರತೀಯ ಮಿಲಿಟರಿ ಸಿಬ್ಬಂದಿ ಅಲ್ಲಿಂದ ವಾಪಸ್ ಬಂದರು. ಸಮಸ್ಯೆ ಪ್ರಾರಂಭವಾದದ್ದು ಆಗಲೇ.
ಮಾಲ್ಡೀವ್ಸ್ ಗೆ ತುರ್ತು ಸಂದರ್ಭಗಳಲ್ಲಿ ಮಾನವೀಯ ದೃಷ್ಟಿಯಿಂದ ಮೂರು ವಿಮಾನಗಳನ್ನು ಭಾರತ ನೀಡಿತ್ತು. ಆರೋಗ್ಯ ಸಮಸ್ಯೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಈ ವಿಮಾನವನ್ನು ಬಳಸಲಾಗುತ್ತಿತ್ತು.
ಈ ವಿಮಾನದ ಪೈಲೆಟ್ ತರಬೇತಿಯನ್ನು ನೀಡಲಾಗುತ್ತಿದ್ದರೂ ಅದನ್ನು ಪೂರ್ಣಗೊಂಡಿರಲಿಲ್ಲ. ಅಷ್ಟರಲ್ಲಿ ಸರ್ಕಾರ ಬದಲಾಯಿತು. ಭಾರತ ವಿರೋಧಿ ಮತ್ತು ಚೀನಾ ಪರವಾದ ಸರ್ಕಾರ ಅಲ್ಲಿ ಅಸ್ಥಿತ್ವಕ್ಕೆ ಬಂತು. ಈಗ ವಿಮಾನ ಇದೆ. ಹಾರಿಸುವವರಿಲ್ಲ. ಇದು ಮಾಲ್ಡೀವ್ಸ್ ಇಂದಿನ ಸ್ಥಿತಿ …
