ನವದೆಹಲಿ : ಚೀನಾದ ಜೊತೆಗಿನ ಗಡಿ ತಂಟೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಭಾರತ ಒಲವು ವ್ಯಕ್ತಪಡಿಸಿದೆ. ಪೂರ್ವ ಲಡಾಖ್ ನಲ್ಲಿ ಮಿಲಿಟರಿ ಬಿಕ್ಕಟ್ಟು ಐದು ವರ್ಷ ಪೂರೈಸಿದೆ.
ಭಾರತ ಮತ್ತು ಚೀನಾ ಈ ಕುರಿತು ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗಿಲ್ಲ. ಈ ಪರಿಸ್ಥಿತಿಯಲ್ಲಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಚೀನಾದ ಜೊತೆಗಿನ ಬಾಕಿ ಇರುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುವ ಮಾತನಾಡಿದ್ದಾರೆ.
ಚೀನಾದ ಜೊತೆ ಗುಸ್ಕೆ ಮಾರೇಂಗೆ ನೀತಿಯನ್ನು ಭಾರತ ಅನುಸರಿಸುತ್ತಿಲ್ಲ. ಈ ಹಿಂದೆ ಜೈಶಂಕರ್ ಒಪ್ಪಿಕೊಂಡಂತೆ ಚೀನಾ ಬಲಿಷ್ಟ ರಾಷ್ಟ್ರ, ಹೀಗಾಗಿ ಅವರ ಜೊತೆ ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವ ಇಂಗಿತವನ್ನು ಜೈಶಂಕರ್ ವ್ಯಕ್ತಪಡಿಸಿದ್ದಾರೆ.






