NEET ಪರೀಕ್ಷೆ ನಡೆಸುವ NTA ಎಂದರೇನು? ಅದರ ಅಧಿಕಾರ, ಸ್ವಾಯತ್ತತೆ ಮತ್ತು ಸರ್ಕಾರದ ಹೊಣೆಗಾರಿಕೆ ಏನು?

ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ನೀಟ್ ಪರೀಕ್ಷೆಯ ಕುರಿತು ಪ್ರಶ್ನೆಗಳು ಎದುರಾದಾಗ ಸಾಮಾನ್ಯವಾಗಿ ಕೇಳಿಬರುವ ಹೆಸರು ಎನ್ ಟಿಎ. ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಅಥವಾ ಫಲಿತಾಂಶದ ಗೊಂದಲ ಉಂಟಾದಾಗ “ಎನ್ ಟಿಎ ಹೊಣೆಗಾರವೆ?”, “ಕೇಂದ್ರ ಶಿಕ್ಷಣ ಸಚಿವಾಲಯದ ಹೊಣೆ ಎಷ್ಟು?”, “ಸಚಿವರು ರಾಜೀನಾಮೆ ನೀಡಬೇಕೇ?” ಎಂಬ ರಾಜಕೀಯ ಪ್ರಶ್ನೆಗಳೂ ಮುಂದೆ ಬರುತ್ತವೆ.…






