ಇಡಿ ದೇಶದಲ್ಲಿ ಗುಜರಾತ್ ಮಾದರಿಯ ನಂತರ ಕೇಳಿ ಬರುತ್ತಿರುವುದು ಉತ್ತರ ಪ್ರದೇಶದ ಮಾದರಿ. ಎಲ್ಲ ದೃಷ್ಟಿಯಿಂದ ಉತ್ತರ ಭಾರತಕ್ಕಿಂತ ಮುಂದಿರುವ ನಾವು ಸಹ ಆ ಮಾದರಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೇವೆ ?
ಆಲಿ ಮಾದರಿ ಹೇಗಿದೆ ಗೊತ್ತಾ ? ಇದನ್ನು ಓದಿ ಕೇಳಿಸಿಕೊಳ್ಳಿ.

ಉತ್ತರ ಪ್ರದೇಶದ ಜೌನ್ ಪುರ ಸರ್ಕಾರಿ ವಿಶ್ವವಿದ್ಯಾಲಯ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರ ಗೊತ್ತಿರಲಿಲ್ಲ. ಅದಕ್ಕಾಗಿ ಅವರು ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಘೋಷಣೆ ಬರೆದರು., ಭಾರತೀಯ ಕ್ರಿಕೆಟಿಗರ ಹೆಸರುಗಳನ್ನು ಬರೆದರು. ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಆರ್ ಟಿಐ ನಲ್ಲಿ ಈ ಮಾಹಿತಿ ಬಹಿರಂಗವಾಗಿದ್ದು, ಈ ರೀತಿ ಬರೆದ ನಾಲ್ವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ನಾಲ್ವರು ಪ್ರೊಫೆಸರ್ ಗಳನ್ನು ಅಮಾನತುಗೊಳಿಸಲಾಗಿದೆ.
ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿವಿಯ ಉಪಕುಲಪತಿ ಡಾ. ವಂದನಾ ಸಿಂಗ್ ಮಾತನಾಡಿ ಈ ವಿಷಯವಾಗಿ ಸಭೆಯನ್ನು ಕರೆಯಲಾಗಿತ್ತು. ಇಬ್ಬರು ಪ್ರಾಧ್ಯಾಪಕರಾದ ಡಾ. ಅಶುತೋಷ್ ಗುಪ್ತಾ ಹಾಗೂ ಡಾ. ವಿನಯ್ ವರ್ಮಾ ತಪ್ಪು ಮೌಲ್ಯಮಾಪನ ಮಾಡಿದ್ದು ದೃಢಪಟ್ಟಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You missed