ಮುಂಬೈ ; ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಇಲಾಖೆಯಿಂದ ಗುರುವಾರ ನೊಟೀಸ್ ಜಾರಿ ಮಾಡಲಾಗಿದೆ. ಐಪಿಎಲ್ 2023ನ್ನು ಫೈರ್ ಪ್ಲೇ ಆಪ್ ನಲ್ಲಿ ಅಕ್ರಮವಾಗಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ಈ ನೊಟೀಸ್ ಜಾರಿಯಾಗಿದೆ.

ಅಕ್ರಮವಾಗಿ ಐಪಿಎಲ್​ನ ಪ್ರಸಾರ ಮಾಡಿದ ಆರೋಪ ಹೊಂದಿರುವ ‘ಫೇರ್​​ಪ್ಲೇ’ ಆ್ಯಪ್​ನ ಪ್ರಚಾರದಲ್ಲಿ ನಟಿ ತಮನ್ನಾ ಭಾಟಿಯಾ ಕೂಡ ಭಾಗಿ ಆಗಿದ್ದರು ಎನ್ನಲಾಗಿದೆ. ಈ ಆ್ಯಪ್​ ಮಹದೇವ್ ಆನ್​ಲೈನ್ ಗೇಮಿಂಗ್​ ಆ್ಯಪ್​ನ ಅಂಗಸಂಸ್ಥೆ ಆಗಿದೆ.

ಆ್ಯಪ್ ನ ಈ ಪ್ರಸಾರದಿಂದ ವಯಾಕಾಮ್‌ಗೆ ಸಾಕಷ್ಟು ಆರ್ಥಿಕ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ನೊಟೀಸ್ ಜಾರಿಯಾದ ಹಿನ್ನೆಲೆಯಲ್ಲಿ ನಟಿ ತಮನ್ನಾ ಏಪ್ರಿಲ್ 29 ರಂದು ಮಹಾರಾಷ್ಟ್ರದ ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ ತನಿಖೆಗೆ ನೋಡಲ್ ಏಜೆನ್ಸಿಯ ಮುಂದೆ ಹಾಜರಾಗಬೇಕು.

2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಬಳಿ ಇತ್ತು. ಯಾವುದೇ ಬ್ರಾಡಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್​​ನ ಫೇರ್​ಪ್ಲೇ ಆ್ಯಫ್​ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಹೀಗಾಗಿ, ಫೇರ್​ಪ್ಲೇ ಆ್ಯಪ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *