ಸಾಂದರ್ಭಿಕ ಚಿತ್ರ

ನವದೆಹಲಿ : ಮುಂದಿನ ಮೂರು ನಾಲ್ಕು ದಿನಗಳಲ್ಲಿ ದೇಶದ ಎಂಟು ರಾಜ್ಯಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದಾಗ ತಾಪಮಾನ ಮೂರರಿಂದ ನಾಲ್ಕು ಡಿಗ್ರಿಯಷ್ಟು ಹೆಚ್ಚಾಗಬಹುದು ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.

ಐಎಂಡಿ ಪ್ರಕಾರ ಮುಂಬೈನ ಥಾಣೆ, ರಾಯಘಡ್ ಮೊದಲಾದೆಡೆ ತಾಪಮಾನ 44 ಡಿಗ್ರಿ ಗೆ ತಲುಪಬಹುದು.
ಮುಂದಿನ ಐದು ದಿನಗಳಲ್ಲಿ ತಾಪಮಾನದಲ್ಲಿ ಈ ಹೆಚ್ಚಳ ಕಾಣಬಹುದು. ಮಹಾರಾಷ್ಟ್ರ, ಓಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ಜಾರ್ಖಂಡ್, ಬಿಹಾರ, ತೆಲಂಗಾಣಾದಲ್ಲಿ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ 3 ರಿಂದ 4 ಡಿಗ್ರಿ ಹೆಚ್ಚಲಿದೆ.

ಕಳೆದ ವಾರ ಮುಂಬೈನಲ್ಲಿ ತಾಪಮಾನ 41 ಡಿಗ್ರಿಯನ್ನು ದಾಟಿತ್ತು. ಒಡಿಶಾ ಸರ್ಕಾರ ಹೆಚ್ಚಿದ ತಾಪಮಾನದಿಂದ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿತ್ತು.

ಈಗ ದೇಶದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾನದ ಮೇಲೂ ಇದು ಪರಿಣಾಮ ಬೀರಬಹುದು. ಜನ ಮತಗಟ್ಟೆಗಳಿಗೆ ಬರಲು ಹಿಂಜರಿಯಬಹುದು. ಇದರಿಂದಾಗಿ ಮತದಾನದ ಪ್ರಮಾಣ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *