ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ರಾಜಕಾರಣದಲ್ಲಿ ನಿಸ್ಸೀಮರು. ಮುಖ್ಯ ವಿಷಯಗಳ ಬಗ್ಗೆ ಜನ ಮಾತನಾಡದಂತೆ ಮಾಡಲು ಅವರು ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತರುತ್ತಾರೆ. ಜನ ಈ ಬಗ್ಗೆ ಚರ್ಚೆ ನಡೆಸುತ್ತ ಮುಖ್ಯ ವಿಚಾರಗಳನ್ನು ಮರೆತು ಬಿಡಬೇಕು. ಇಲ್ಲ ಅದು ನೆನಪಾಗಲೇ ಕೂಡದು. ಇದು ಮೋದಿ ಸ್ಟ್ರ‍ೇಟಜಿ.

ಈಗ ಕೆಲವು ದಿನಗಳ ಹಿಂದೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಾವು ಮೀನು ತಿನ್ನುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಮೋದಿ ಮತ್ತು ಅವರ ಪರಿವಾರ ತಕ್ಷಣ ಈ ವಿಚಾರವನ್ನು ಕೈಗೆತ್ತಿಕೊಂಡಿತು. ಆಹಾರ ರಾಜಕಾರಣ ಪ್ರಾರಂಭವಾಯಿತು.

ಪ್ರಧಾನಿ ಮೋದಿ ಮೀನು ರಾಜಕಾರಣವನ್ನು ಪ್ರಾರಂಭಿಸಿದಾಗ ಮಾಂಸಹಾರವನ್ನು ಟೀಕಿಸಲಿಲ್ಲ. ಈ ದೇಶದಲ್ಲಿ ಸುಮಾರು ಪ್ರತಿಶತ 90 ರಷ್ಟು ಮಾಂಸಾಹಾರಿಗಳಾಗಿರುವುದರಿಂದ ಮಾಂಸಾಹಾರವನ್ನು ಟೀಕಿಸಲಿಲ್ಲ. ಆದರೆ ಅದಕ್ಕೆ ಧಾರ್ಮಿಕ ಲೇಪನ ಮಾಡಿದರು. ಈಗ ಮಾಂಸಾಹಾರವನ್ನು ತಿನ್ನುವ ಸಮಯ ಅಲ್ಲ. ಇದು ನವರಾತ್ರಿಯ ಕಾಲ. ದೇವರನ್ನು ಭಜಿಸಬೇಕು. ಮಾಂಸಾಹಾರವನ್ನು ಸ್ವೀಕರಿಸಬಾರದು ಎಂದು ಹೊಸ ರಾಜಕಾರಣವನ್ನು ಪ್ರಾರಂಭಿಸಿದರು.

ಯಾವ ದೇವರು ಎಲ್ಲಿ ಬಂದು ಮಾಂಸಾಹಾರ ತಿನ್ನಬೇಡಿ ಎಂದನೋ ಗೊತ್ತಿಲ್ಲ. ಮಾಂಸಾಹಾರ ಕನಿಷ್ಟ ಎಂದು ಮೋದಿಯವರಿಗೆ ಹೇಳಿದವರು ಯಾರು ? ಅದೂ ಗೊತ್ತಿಲ್ಲ. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೂಲ ವಿಚಾರಗಳಿಂದ ಇಂತಹ ತಲೆ ಬುಡ ಇಲ್ಲದ ವಿಚಾರದಲ್ಲಿ ಜನರ ಮನಸ್ಸನ್ನು ಸೆಳೆಯುವುದರಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದರು.

ಮಾಂಸಾಹಾರದ ವಿಚಾರ ಪ್ರಧಾನಿಯವರು ಚರ್ಚೆ ಮಾಡುವ ವಿಚಾರವಾ ಎಂದು ಈ ದೇಶದಲ್ಲಿ ಯಾರು ಪ್ರಶ್ನಿಸಲಿಲ್ಲ. ಬದಲಾಗಿ ಯಾವಾಗ ಮಾಂಸಾಹಾರವನ್ನು ಸ್ವೀಕರಿಸಬೇಕು ಸ್ವೀಕರಿಸಕೂಡದು ಎಂದು ಜ್ಯೋತಿಷಿಗಳು ಮಾಧ್ಯಮಗಳಲ್ಲಿ ಚರ್ಚೆ ಮಾಡುವಂತಾಯಿತು. ಅದರಂತೆ ಧರ್ಮದ ಬಗ್ಗೆ ಬಯಭಕ್ತಿ ಇರುವವರು ಪುರೋಹಿತರ ಮನೆಗಳಿಗೆ ಹೋಗಿ ಆಹಾರದ ಬಗ್ಗೆ ಧಾರ್ಮಿಕ ಅಭಿಪ್ರಾಯ ಪಡೆಯುವಂತಯಿತು.

ಈ ಆಹಾರ ರಾಜಕಾರಣ ಯುವಕರು ನಿರುದ್ಯೋಗದ ಬಗ್ಗೆ ಚಿಂತಿಸದಂತೆ ಮಾಡಿತು. ಬಡವರು ಸ್ವಂತ ಮನೆ, ನಿವೇಶನದ ಬಗ್ಗೆ ಚಿಂತಿಸದೇ ಆಹಾರ ಪದ್ಧತಿ ಮತ್ತು ಧರ್ಮದಂತಹ ಮಹತ್ವದ ವಿಚಾರದ ಬಗ್ಗೆ ತಲೆ ಕೆಡಿಸಿಕೊಂಡರು.

ತೇಜಸ್ವಿ ಯಾದವ್ ಪ್ರಯಾಣ ಮಾಡುವಾಗ ತಿಂದ ಒಂದು ಮೀನು ಮೋದಿ ಸಾಹೇಬರಿಗೆ ಆಹಾರ ರಾಜಕಾರಣದ ಬಾಗಿಲು ತೆರೆಯುವಂತೆ ಮಾಡಿತು. ಮೋದಿ ಅವರ ಥಿಂಕ್ ಟ್ಯಾಂಕ್ ಸಲಹೆ ಇರಬಹುದು. ಈಗ ಪ್ರಧಾನಿಗಳು ಆಹಾರದ ವಿಚಾರವನ್ನು ಚುನಾವಣಾ ಪ್ರಚಾರದಲ್ಲಿ ಹೆಚ್ಚುಹೆಚ್ಚಾಗಿ ಬಳಸುತ್ತಿದ್ದಾರೆ. ತಮ್ಮಾಅಡಳಿತವನ್ನು ವಿವರಿಸುವುದಕ್ಕೂ ಅವರು ಪಂಚತಾರಾ ಹೋಟೆಲ್ ಮೆನು ಬಳಕೆ ಮಾಡುತ್ತಾರೆ.

ಈಗ ಕೆಲವು ದಿನಗಳ ಹಿಂದೆ ಅವರು ತಾವು ಹತ್ತು ವರ್ಷಗಳ ಕಾಲ ಮಾಡಿದ ಕೆಲಸವನ್ನು ಪಂಚಾತಾರಾ ಹೋಟೆಲ್ ಗಳನ್ನು ಊಟಕ್ಕಿಂತ ಮೊದಲು ಕೊಡುವ ಎಪಿಟೈಸರ್ ಗೆ ಹೋಲಿಸಿದರು.. ಇದನ್ನು ತಮ್ಮದೇ ಆದ ಭಾಷೆಯಲ್ಲಿ ಭಾಷಣ ಕೇಳಲು ಬಂದವರಿಗೆ ವಿವರಿಸಿದರು.

ಈ ಆಹಾರ ರಾಜಕಾರಣದಲ್ಲಿ ಮೋದಿ ಎಷ್ಟು ಪಳಗಿದ್ದಾರೆಂದರೆ ತಮಿಳು ನಾಡು ಚುನಾವಣಾ ಪ್ರಚಾರದಲ್ಲಿದ್ದಾಗ ಒಂದು ತಮಿಳು ವಾಹಿನಿಗೆ ಸಂದರ್ಷನ ನೀಡಿದ್ದರು ಮೋದಿ. ಆ ಸಂದರ್ಶನದಲ್ಲಿ ಮತ್ತೆ ಆಹಾರದ ವಿಚಾರವನ್ನು ಪ್ರಸ್ತಾಪಿಸಿದರು. ನನಗೆ ಉಪಮಾ ಅಥವ ಉಪ್ಪಿಟ್ಟು ಎಂಬ ತಮಿಳು ಆಹಾರ ತುಂಬಾ ಇಷ್ಟ ಎಂದು ಬಿಟ್ಟರು.

.

Leave a Reply

Your email address will not be published. Required fields are marked *