ನವದೆಹಲಿ : ಮಕ್ಕಳ ಆಹಾರ ತಯಾರಿಕೆಯ ಖ್ಯಾತ ಕಂಪೆನಿ ನೆಸ್ಲೆ ಇಂಡಿಯಾ.. ಸೆರ್ಲಾಕ್ ನಿಡೋ ಬ್ರಾಂಡ್ ಗಳನ್ನು ಭಾರತದಲ್ಲಿ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ಈಗ ಬಂದಿರುವ ಆಘಾತಕಾರ ವರದಿ. ನೆಸ್ಲೇ ಮಕ್ಕಳ ಆಹಾರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಬಳಸಲಾಗುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಪ್ಷರಿಣಾಮ ಬೀರುತ್ತದೆ ಎಂಬ ವರದಿ ಬಂದಿದೆ. ಇದು ಪಾಲಕರನ್ನು ಆತಂಕಕ್ಕೆ ದೂಡಿದೆ. ಸಿರ್ಲಾಕ್ ಅನ್ನು ಆರು ತಿಂಗಳಿನಿಂದ 2 ವರ್ಷದ ವರೆಗಿನ ಮಕ್ಕಳಿಗೆ ನೋಡಲಾಗುತ್ತದೆ

ಸೆರ್ಲಾಕ್ ಮತ್ತು ಇನ್ನಿತರ ಮಕ್ಕಳ ಆಹಾರ ತಯಾರಿಕಾ ಮೂಅ ಫಾರ್ಮುಲಾದಲ್ಲಿ ಸಕ್ಕರೆ ಸೇರಿಸುವುದಿಲ್ಲ. ಅದರಂತೆ ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮಕ್ಕಳ ಆಹಾರಕ್ಕೆ ಹೆಚ್ಚುವರಿ ಸಕ್ಕರೆಯನ್ನು ಬಳಸುವುದಿಲ್ಲ. ಆದರೆ ಭಾರತ ಹಾಗೂ ಇನ್ನಿತರ ಕೆಲವು ರಾಷ್ಟ್ರ ಗಳಲ್ಲಿ ಮಾರಾಟ ಮಾಡುವ ಮಕ್ಕಳ ಆಹಾರದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಬಳಸಲಾಗುತ್ತದೆ. ಜೊತೆಗೆ ಜೆನುತುಪ್ಪದ ಬಳಕೆಯೂ ಆಗುತ್ತಿದೆ.

ಸ್ವಿಸ್ ತನಿಖಾ ಸಂಘಟನೆ ಪಬ್ಲಿಕ್ ಆಯ್ ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದೆ. ನೆಸ್ಲೆ ಕಡಿಮೆ ಮತ್ತು ಮಧ್ಯಮ ವರಮಾನವಿರುವ ದೇಶಗಳಲ್ಲಿ ಹೆಚ್ಚುವರಿ ಸಕ್ಕರೆ ಇರುವ ಮಕ್ಕಳ ಆಹಾರವನ್ನು ಬಿಡುಗಡೆ ಮಾಡುತ್ತಿದೆ. ಇದರಿಂದ ಬೊಜ್ಜು ಮತ್ತು ಬೇರೆ ಬೇರೆ ರೋಗಗಳು ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದೆ.

ನೆಸ್ಲೇ ಕಂಪೆನಿ 2022 ರಲ್ಲಿ ಮಕ್ಕಳ ಆಹಾರ ಸಿರ್ಲಾಕ್ ಅನ್ನು ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಅ ಮಾಡಿದೆ. ಅದರ ಒಟ್ಟೂ ಒಹಿವಾಟು 250 ಮಿಲಿಯನ್ ಡಾಲರ್ ಅನ್ನು ದಾಟಿದೆ. ಈ ವರದಿ ಬಂದ ಮೇಲೆ ಸ್ಪಷ್ಟೀಕರಣ ನೀಡಿರುವ ನೆಸ್ಲೇ ಇಂಡಿಯಾ ಕಳೆದ ಐದು ವರ್ಷಗಳಲ್ಲಿ ಮಕ್ಕಳ ಆಹಾರದಲ್ಲಿ ಹೆಚ್ಚುವರಿಯಾಗಿ ಸೇರಿಸುವ ಸಕ್ಕರೆ ಪ್ರಮಾಣವನ್ನು ಪ್ರತಿಶತ 30ರಷ್ಟು ಕಡಿಮೆ ಮಾಡಿದ್ದೇವೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *