ನವದೆಹಲಿ : ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಜೈಲಿನಲ್ಲಿ ಮಾವಿನ ಹಣ್ಣು ತಿನ್ನುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ.

ತಮ್ಮನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಬೇಕು ಎಂಬ ಕೇಜ್ರಿವಾಲ್ ಅವರ ಮನವಿಯ ಕುರಿತು ದೆಹಲಿ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಇಡಿ ಕೇಜ್ರಿವಾಲ್ ಮಾವಿನ ಹಣ್ಣು ತಿನ್ನುತ್ತಿದ್ದಾರೆ ಎಂದು ಹೇಳಿತು.

ಮಾವಿನ ಹಣ್ಣಿನ ಜೊತೆ ಬೇರೆ ಸಿಹಿ ಪದಾರ್ಥಗಳನ್ನು ಅವರು ತಿನ್ನುತ್ತಿದ್ದಾರೆ. ಆಲೂ ಪುರಿಯನ್ನು ಸೇವಿಸುತ್ತಿದ್ದಾರೆ. ಅವರ ಉದ್ದೇಶ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಲಿ ಎಂಬುದೇ ಆಗಿದೆ, ಆ ಮೂಲಕ, ಮತ್ತು ಈ ಕಾರಣವನ್ನು ನೀಡಿ ಜಾಮೀನು ಪಡೆಯಲು ಅವರು ಉದ್ದೇಶಿಸಿದ್ದಾರೆ ಎಂದು ನ್ಯಾಯಾಲಯದ ಮುಂದೆ ಇಡಿ ವಾದಿಸಿತು.

Leave a Reply

Your email address will not be published. Required fields are marked *