ನವದೆಹಲಿ : ರಾಮ ದೇವಾಲಯದ ನಿರ್ಮಾಣದಲ್ಲಿ ರಾಜಕೀಯ ಇತ್ತು. ರಾಮನನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳಲಾಗಿತ್ತು. ಈಗ ರಾಮ ನವಮಿ ಆಚರಣೆ ಮತ್ತೆ ವಿವಾದವನ್ನು ಹುಟ್ಟಿಹಾಕಿದೆ.

ಈ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಹುಟ್ಟಿ ಹಾಕಿದ್ದು ಪಶ್ಚಿಮ ಬಂಗಾಲದಲ್ಲಿ, ದೂರಿದ್ದು ಅಲ್ಲಿನ ಸರ್ಕಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು. ನಾಳೆ ರಾಮ ನವಮಿ. ದೇಶದಲ್ಲಿ ಪಾನಕ ನೀಡಿ ರಾಮ ನವಮಿ ಆಚರಣೆ ಮಾಡಲಾಗುತ್ತದೆ.

ಈ ನಡುವೆ ಚುನಾವಣಾ ಪ್ರಚಾರಕ್ಕಾಗಿ ಬಂಗಾಲಕ್ಕೆ ಹೋದ ಮೋದಿ ತೃಣಮೂಲ ಕಾಂಗ್ರೆಸ್ ರಾಮ ನವಮಿ ಆಚರಣೆಯನ್ನು ನಿಲ್ಲಿಸಲು ಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಒಂದು ದಿನದ ಹಿಂದೆ ಕೊಲಕತ್ತಾ ಹೈಕೋರ್ಟ್ ಹೌರಾ ದಲ್ಲಿ ರಾಮನವಮಿ ಮೆರವಣಿಗೆ ನಡೆಸುವುದಕ್ಕೆ ವಿಶ್ವ ಹಿಂದೂ ಪರಿಷತ್ತಿಗೆ ಅನುಮತಿ ನೀಡಿತ್ತು. ಈ ವಿಚಾರದಲ್ಲಿ ಪಶ್ಚಿಮ ಬಂಗಾಲ ಸರ್ಕಾರ ಕಳೆದ ವರ್ಷ ಮೆರವಣಿಗೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯನ್ನು ಗಮನಕ್ಕೆ ತಂದಿತ್ತು. ಹಾಗೆ ಮೆರವಣಿಗೆಗೆ ಬೇರೆ ಮಾರ್ಗವನ್ನು ಸೂಚಿಸಲಾಗಿತ್ತು. ಮೆರವಣಿಗೆ ಸಂಘಟಕರು ಇದಕ್ಕೆ ಒಪ್ಪದೇ ಹೈಕೋರ್ಟ್ ಮೆಟ್ಟಿಲು ಏರಿದ್ದರು.

ಈ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಅಯೋಧ್ಯಯಲ್ಲಿ ರಾಮನ ಮೂರ್ತಿ ಸ್ಥಾಪನೆಯಾದ ಮೇಲೆ ನಡೆಯುತ್ತಿರುವ ಮೊದಲ ರಾಮನವಮಿ ಇದಾಗಿದೆ ಎಂದರು.

Leave a Reply

Your email address will not be published. Required fields are marked *