ಅಜಯ್ ದೇವಗನ್ ಅವರ ಮೈದಾನ್ ಅಪಾರ ನಿರೀಕ್ಷೆಯ ಸಿನಿಮಾ. ಈ ಸಿನಿಮಾದ ಬಿಡುಗಡೆಗೆ ಈಗ ಮೈಸೂರಿನ ನ್ಯಾಯಾಲಯ ತಡೆಯಾಜ್ನೆ ನೀಡಿದೆ. ಇದಕ್ಕೆ ಕಾರಣ ಸಿನಿಮಾದ ಸ್ಕ್ರಿಪ್ಟ್,,

ಈಗ ಈ ಸಿನಿಮಾದ ನಿರ್ಮಾಪಕರು ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ನ್ಯಾಯಾಲಯ ನಮಗೆ ಯಾವ ನೋಟೀಸು ನೀಡದೇ ನಮ್ಮ ಅಭಿಪ್ರಾಯವನ್ನು ಕೇಳದೇ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.

ಈ ಸಿನಿಮಾದ ಕಥೆ ಭಾರತೀಯ ಫೂಟ್ ಬಾಲ್ ಕೋಚ್ ಆಗಿದ್ದ ಸೈಯದ್ ಅಬ್ದುಲ್ ರಹೀಮ್ ಅವರ ಬದುಕಿನ ಆಧಾರದ ಮೇಲೆ ಸಿದ್ದವಾಗಿತ್ತು. ಇದು ನಾನು ರಚಿಸಿದ್ದ ಚಿತ್ರಕಥೆ ಎಂದು ಕರ್ನಾಟಕ ಮೂಲದ ಅನಿಲ್ ಕುಮಾರ್ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅನಿಲ್ ಕುಮಾರ್ ತಮ್ಮ ಲಿಕ್ಡ್ ಇನ್ ಖಾತೆಯಲ್ಲಿ ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ.

2010 ರಲ್ಲಿ ನಾನು ಈ ಸಿನಿಮಾದ ಚಿತ್ರಕಥೆ ಬರೆಯಲು ಪ್ರಾರಂಭಿಸಿದೆ. 2018 ರಲ್ಲಿ ಇದಕ್ಕೆ ಸಂಬಂಧಿಸಿದ ಪೋಸ್ಟರ್ ಒಂದನ್ನು ಹಾಕಿದ್ದೆ. ಜೊತೆಗೆ ಕಲಾ ನಿರ್ದೇಶಕ ಸುಖದಾಸ್ ಸೂರ್ಯವಂಶಿ ಎಂಬವರ ಸಂಪರ್ಕ ಆಯಿತು. ಅವರು ನನ್ನನ್ನು ಮುಂಬೈಗೆ ಬರುವಂತೆ ಕರೆ ನೀಡಿದರು. ಹಾಗೆ ಚಿತ್ರಕಥೆಯನ್ನು ನೀಡುವಂತೆಯೂ ಕೇಳಿದರು. ಈ ಮಾತುಕತೆಯ ಸಂಪೂರ್ಣ ವಿವರ ನನ್ನ ಬಳಿ ಇದೆ ಎಂದು ಅವರು ಹೇಳಿದ್ದಾರೆ.

ಸೈಯದ್ ಅಬ್ದುಲ್ ರಹೀಮ್ ಅವರು 1952 ಮತ್ತು 1962 ರ ಅವಧಿಯಲ್ಲಿ ಭಾರತೀಯ ಫೂಟ್ ಬಾಲ್ ಆನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು ಎಂಬುದೇ ಸಿನಿಮಾದ ಕಥೆ.

ಅವರು ಅಮೀರ್ ಖಾನ್ ಅವರನ್ನು ಭೇಟಿ ಮಾಡುವಂತೆ ನನಗೆ ತಿಳಿಸಿದರು. ಆದರೆ ಬೇರೆ ಬೇರೆ ಕಾರಣಕ್ಕೆ ಅಮೀರ್ ಖಾನ್ ಅವರನ್ನು ಭೇಟಿ ಮಾಡಲು ನನಗೆ ಸಾಧ್ಯವಾಗಲಿಲ್ಲ. ನಾನು ನನ್ನ ಕಥೆಯನ್ನು ನೀಡಿ ಅದನ್ನು ರಿಜಿಸ್ಟರ್ ಕೂಡ ಮಾಡಿಸಿದ್ದೆ ಎಂಬುದು ಅನಿಲ್ ಕುಮಾರ್ ಅವರ ಹೇಳಿಕೆ.

Leave a Reply

Your email address will not be published. Required fields are marked *