ಬೆಂಗಳೂರು : ಕರ್ನಾಟಕದಲ್ಲಿ ಒಕ್ಕಲಿಗ ರಾಜಕಾರಣ ಗರಿಗೆದರಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆದಿ ಚುಂಚನಗಿರಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ಮೇಲೆ ಕಾಂಗ್ರೆಸ್ ಮತ್ತಿ ಮೈತ್ರಿ ಪಕ್ಷಗಳ ಒಕ್ಕಲಿಗ ನಾಯಕರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದಾರೆ. ಕುಮಾರಸ್ವಾಮಿ ಅವರ ಒಂದು ಕಾಲದ ಚಡ್ದಿ ಸ್ನೇಹಿತ ಸಚಿವ ಚಲುವರಾಯ ಸ್ವಾಮಿ ಮಾಡಿರುವ ಆರೋಪ ಒಕ್ಕಲಿಗ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.

ಚಲುವರಾಯ ಸ್ವಾಮಿ ಅವರ ಪ್ರಕಾರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಲಾನಂದ ಸ್ವಾಮೀಜಿ ಅವರ ಫೋನ್ ಟ್ಯಾಪ್ ಮಾಡಿಸಿದ್ದರು. ಇದು ಒಂದು ಸಮುದಾಯದ ಪ್ರತಿಷ್ಟಿತ ಮಠಕ್ಕೆ ಮಾಡಿರುವ ಧ್ರೋಹ ಎಂಬುದು ಅವರ ಆರೋಪ.

ನಾಗಮಂಗಲದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಈ ಆರೋಪ ಮಾಡಿದರು.

ಈ ಆರೋಪಕ್ಕೆ ಕುಮಾರಸ್ವಾಮಿ ಅವರೂ ಉತ್ತರ ನೀಡಿದ್ದಾರೆ. ಆದರೆ ಅವರ ಉತ್ತರದಲ್ಲಿ ಅಂತಹ ಶಕ್ತಿ ಇರಲಿಲ್ಲ.
ನಾನ್ಯಾಕೆ ಪೋನ್ ಟ್ಯಾಪ್ ಮಾಡಿಸಲಿ ? ಹಾಗೆ ಮಾಡುವುದಿದ್ದರೆ ನಾನು ಸರ್ಕಾರವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದೂ ಕುಮಾರಸ್ವಾಮಿ ಉತ್ತರ ನೀಡಿದರು.

ಆದರೆ ಅವರ ಉತ್ತರದಲ್ಲಿ ಅಂತಹ ಶಕ್ತಿ ಇರಲಿಲ್ಲ. ಸುಮ್ಮನೆ ಪ್ರತಿಕ್ರಿಯೆ ನೀಡಬೇಕು ಎಂಬಂತೆ ಇತ್ತು.
ಎಲ್ಲ ವಿಚಾರಗಳಲ್ಲೂ ಭಾವನಾತ್ಮವಾಗಿ ಹಾಗೂ ಆಕ್ರಮಣಕಾರಿಯಾಗಿ ಉತ್ತರ ನೀಡುವ ಅವರು ಈ ವಿಚಾರದಲ್ಲಿ ಯಾಕೆ ಶಾಂತವಾಗಿ ಮಾತನಾಡಿದರು ಎಂಬುದು ನಿಗೂಢ. ಇದಕ್ಕೆ ಬೇರೆ ಕಾರಣಗಳಿವೆಯೇ ಎಂಬುದು ಪ್ರಶ್ನೆ.
ಜೊತೆಗೆ ಚಲುವರಾಯ ಸ್ವಾಮಿ ಇನ್ನೂ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆದಿ ಚುಂಚನಗಿರಿ ಮಠವನ್ನು ಒಡೆದು ವಿಶ್ವ ಒಕ್ಕಲಿಗ ಮಠವನ್ನು ಸ್ಥಾಪಿಸುವುದರ ಹಿಂದೆ ಇರುವವರು ಯಾರು ? ಕೆಂಗೇರಿಯಲ್ಲಿ ಚಂದ್ರಶೇಖರ ಸ್ವಾಮೀಜಿ ಮಠ ಸ್ಥಾಪಿಸಲು ಯಾರು ಕಾರಣ ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೆ ಕುಮಾರಸ್ವಾಮಿ ಉತ್ತರ ನೀಡಿಲ್ಲ. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಈಗ ನಾನು ಹೇಳುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಹೇಳಬೇಕಾದಾಗ ಹೇಳುತ್ತೇನೆ. ಆದರೆ ಇದು ಬೇಸರದ ನೋವಿನ ವಿಚಾರ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

Author

Leave a Reply

Your email address will not be published. Required fields are marked *