ತಮ್ಮನ್ನು ಪಕ್ಷದಿಂದ ಹೊರ ಹಾಕುವಂತೆ ವರಿಷ್ಠರಿಗೆ ಸವಾಲು; ನಾಳೆ ನಾಮಪತ್ರ ಸಲ್ಲಿಸುವುದು ನಿಶ್ಚಿತ ಎಂದ ಬಂಡಾಯಗಾರ

ನನಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಜನ ನನ್ನ ಜೊತೆಗಿದ್ದಾರೆ, ನಾನು ಗೆಲ್ಲುವುದು ನಿಶ್ಚಿತ ಎಂದು ಹೇಳಿದ ಅವರು ನಾನು ನಾಳೆ ನಾಮಪತ್ರ ಸಲ್ಲಿಸುತ್ತಿದ್ದೇನೆ.

ಶಿವಮೊಗ್ಗ : ತಮ್ಮನ್ನು ಬಿಜೆಪಿ ಪಕ್ಷದಿಂದ ಹೊರಹಾಕುವಂತೆ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ. ನನ್ನನ್ನು ಪಕ್ಷದಿಂದ ಹೊರ ಹಾಕುವುದಕ್ಕೆ ಕಾಯುತ್ತಿದ್ದೇನೆ. ಅವರು ಹೊರ ಹಾಕಿದ ಮೇಲೆ ಈ ಅಪ್ಪ ಮಕ್ಕಳ ಬಗ್ಗೆ ಮಾತನಾಡಲು ಸಾಕಷ್ಟು ವಿಷಯಗಳಿವೆ ಎಂದು ಅವರು ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ ವೈ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಹೊರ ಹಾಕಬೇಕು ಎಂದು ಒತ್ತಾಯಿಸಿದ್ದೇನೆ. ಪಕ್ಷದಿಂದ ಹೊರ ಹಾಕಲು ಇದು ಸಾಕಲ್ಲವೆ ? ಆದರೆ ಅವರು ಯಾಕೆ ಹೊರ ಹಾಕುತ್ತಿಲ್ಲ ಎಂಬುದು ನನಗೆ ತಿಳಿಯುತ್ತಿಲ್ಲ. ನಾನು ಅವರು ಪಕ್ಷದಿಂದ ಹೊರ ಹಾಕುವುದಕ್ಕೆ ಕಾಯುತ್ತಿದ್ದೇನೆ. ರಾಜ್ಯ ಬಿಜೆಪಿ ಅಪ್ಪ ಮಕ್ಕಳ ಆಸ್ತಿಯಾಗಿದೆ ಎಂದು ಅವರು ಆರೋಪಿಸಿದರು.

ನನಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಜನ ನನ್ನ ಜೊತೆಗಿದ್ದಾರೆ, ನಾನು ಗೆಲ್ಲುವುದು ನಿಶ್ಚಿತ ಎಂದು ಹೇಳಿದ ಅವರು ನಾನು ನಾಳೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ಬಗ್ಗೆ ಅನುಮಾನ ಬೇಡ. ನಾನು ನಿಂತೇ ನಿಲ್ಲುತ್ತೇನೆ ಎಂದು ಹಲವಾರು ಬಾರಿ ಹೇಳಿದ್ದೇನೆ. ಹೀಗಿರುವಾಗ ಮತ್ತೆ ಯಾಕೆ ಈ ಪ್ರಶ್ನೆ ಎಂದು ಕೇಳಿದರು.

ಇಂದು ಈಶ್ವರಪ್ಪ ಅವರನ್ನು ಹಲವಾರು ಮಹಿಳೆಯರು ಭೇಟಿ ಮಾಡಿ ಚುನಾವಣಾ ಸ್ಪರ್ಧೆಗೆ ಕಟ್ಟಬೇಕಾದ 24 ಸಾವಿರ ರೂಪಾಯಿ ಠೇವಣಿ ಹಣವನ್ನು ಅವರಿಗೆ ಹಸ್ತಾಂತರಿಸಿದರು.

ಕೆ ಎಸ್ ಈಶ್ವರಪ್ಪ ಅವರು ಹೊಳೆಹೊನ್ನೂರು ಸೇರೆದಂತೆ ಹಲವೆಡೆ ಚುನಾವಣಾ ಪ್ರಚಾರ ನಡೆಸಿದರು. ಇದೇ ಸಂದರ್ಭದಲ್ಲಿ ವಾಹನದಲ್ಲಿ ರೋಡ್ ಶೋ ಕೂಡ ನಡೆಸಲಾಯಿತು.

Author

error: