ಮುಂಬೈ : ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿ ಪಿ ನಡುವಿನ ಟಿಕೆಟ್ ಹಂಚಿಕೆ ಅಂತಿಮ ಗೊಂಡಿದೆ. ಮಹಾ ವಿಕಾಸ್ ಅಗಾಡಿ ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿವೆ.

ಈ ತೀರ್ಮಾನದ ಪ್ರಕಾರ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉದ್ಭವ ಭಣದ ಶಿವಸೇನೆ 21 ಕ್ಷೇತ್ರಗಳಲ್ಲಿ ಹೋರಾಟ ಮಾಡಲಿದೆ. ಶರದ್ ಪವಾರ್ ಅವರ ಎನ್ ಸಿ ಪಿ 10 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.

ಮಂಗಳವಾರ ಮಹಾ ವಿಕಾಸ್ ಅಗಾಡಿಯ ಸೀಟು ಹಂಚಿಕೆ ಅಂತಿಮಗೊಂಡಿತು. ಕಳೆದ ಓಂದು ತಿಂಗಳಿನಿಂದ ಮಹಾ ವಿಕಾಸ್ ಅಗಾಡಿ ಸೀಟು ಹಂಚಿಕೆ ಕಸರತ್ತು ನಡೆಸುತ್ತಿತ್ತು.

ಶಿವಸೇನೆಯ ಉದ್ದವ್ ಠಾಕರೆ, ಎನ್ ಸಿ ಪಿಯ ಶರದ್ ಪವಾರ್ ಮತ್ತು ಕಾಂಗ್ರೆಸ್ ನ ನಾನಾ ಪಟೋಲೆ ಸೀಟು ಹಂಚಿಕೆಯ ವಿವರಗಳನ್ನು ಪ್ರಕಟಿಸಿದರು. ಮಹಾರಾಷ್ಟ್ರದಲ್ಲಿ ಐದು ಹಂತದಲ್ಲಿ ಚುನಾವಣೆ ನಡೆಯಲಿದೆ.

Author

Leave a Reply

Your email address will not be published. Required fields are marked *