ಬೆಂಗಳೂರು : ಈ ಕ್ಷೇತ್ರದ ಸಾಮಾನ್ಯರ ಜೊತೆ ಸದಾ ಸಂಪರ್ಕವನ್ನು ಇಟ್ಟುಕೊಂಡು ಬಂದವರು. ಜನರ ಕಷ್ಟ ಸುಖಗಳಿಗೆ ಆದವರು. ಡಿ.ಕೆ.ಸುರೇಶ್ ಅವರು ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು. ದೇವೇಗೌಡರ ಕುಟುಂಬ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಿಹಿ ಕಹಿ ಎರಡನ್ನೂ ನೋಡಿದೆ. ಇಲ್ಲಿನ ಜನ ಅವರನ್ನು ಸೋಲಿಸಿ ಮನೆಗೂ ಕಳಿಸಿದ್ದಾರೆ. ಗೆಲ್ಲಿಸಿ ವಿಧಾನ ಸೌಧಕ್ಕೂ ಕಳಿಸಿದ್ದಾರೆ.

ಈಗ ಮತ್ತೆ ಗೆಲ್ಲುವುದಕ್ಕಾಗಿ ತಂತ್ರವನ್ನು ರೂಪಿಸುತ್ತಿದ್ದಾರೆ. ಕುಮಾರಸ್ವಾಮಿ. ಅದಕ್ಕೆ ಅವರು ಒಕ್ಕಲಿಗರ ರಾಜಕಾರಣದಲ್ಲಿ ತೊಡಗಿದ್ದಾರೆ. ಬಿಜೆಪಿ ಜೆಡಿಎಸ್ ನ ಒಕ್ಕಲಿಗ ನಾಯಕರ ಜೊತೆ ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಬಿಜೆಪಿಯ ಒಕ್ಕಲಿಗ ನಾಯಕರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಇಂದೂ ಈ ಎಲ್ಲ ನಾಯಕರನ್ನು ಕರೆದುಕೊಂಡು ಆದಿಚುಂಚನಗಿಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮುಂಬರುವ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಅವರ ಮುಂದೆಯೂ ಸವಾಲುಗಳಿವೆ. ಈ ಸಾವಾಲುಗಳು ಸುಲಭವಾದುದಲ್ಲ.

ಕುಮಾರಸ್ವಾಮಿ ಅವರ ಮುಂದಿರುವ ಎರಡು ಪ್ರಮುಖ ಸವಾಲುಗಳು ಯಾವವು ?

  • ಒಂದು ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲ್ಲಬೇಕು.
  • ಇನ್ನೊಂದು ಬಿಜೆಪಿ ಗುರುತಿನಲ್ಲಿ ಸ್ಪರ್ಧಿಸಿರುವ ಭಾವ ಡಾ, ಮಂಜುನಾಥ್ ಅವರನ್ನು ಗೆಲ್ಲಿಸಬೇಕು. ನಂತರ ಕೇಂದ್ರ ಸಂಪುಟವನ್ನು ಸೇರಬೇಕು.

ಬಹುಮುಖ್ಯ ಒಕ್ಕಲಿಗರ ಪ್ರಾಬಲ್ಯ ಇರುವ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಸುಲಭವಾಗಿ ಕೈಗೆಟಗುವುದಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಡಿ. ಕೆ. ಶಿವಕುಮಾರ್ ಅವರ ಪ್ರಾಬಲ್ಯವಿದೆ. ಅವರು ನಿರ್ಮಲಾನಂದ ಸ್ವಾಮೀಜಿಯವರ ದರ್ಶನ ಮಾಡಿದರು. ನಂತರ ಅವರ ಜೊತೆ ಪ್ರತ್ಯೇಕ ಸಭೆ ನಡೆಸಿದರು.

ಈ ಸಭೆಯ ನಂತರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸುಲಭವಲ್ಲ ಎಂಬುದು ಅರಿವಿಗೆ ಬರುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಮಂಜುನಾಥ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಹೃದಯವಂತ ವೈದ್ಯರು ಎಂಬ ಪ್ರಚಾರವನ್ನು ಮಾಡಲಾಗುತ್ತಿದೆ. ಆದರೆ ಚುನಾವಣೆ ಗೆಲ್ಲಲು ಇಷ್ಟೇ ಸಾಲದು.

ಚುನಾವಣೆ ವಿಭಿನ್ನ ಆಟ. ಈ ಆಟಕ್ಕೆ ಸ್ಪಷ್ಟವಾದ ನಿಯಮಗಳಿಲ್ಲ. ನಿಯಮಗಳಿಲ್ಲದ ಆಟ ಇದು. ಇಂತಹ ಆಟದಲ್ಲಿ ಏನು ಬೇಕಾದರೂ ಆಗಬಹುದು. ಜೊತೆಗೆ ಪ್ರತಿಯೊಬ್ಬ ಮತದಾರ ವೈಯಕ್ತಿಕ ದೃಷ್ಟಿಯಿಂದ ಚುನಾವಣೆಯನ್ನು ನೋಡುತ್ತಾನೆ. ತನಗೆ ಯಾವ ಅಭ್ಯರ್ಥಿಯಿಂದ ಏನಾಗಿದೆ ಏನಾಗಬೇಕು ಎಂಬುದು ಮಾತ್ರ ಮುಖ್ಯ. ಉಳಿದಂತೆ ಕೆಲವರು ಮಾತ್ರ ದೇಶ ಮೋದಿ ಎಂದು ಯೋಚಿಸಬಹುದು. ಹಾಗೆ ಚುನಾವಣೆಯೊಂದರಲ್ಲಿ ಗಾಳಿ ಇರಬೇಕು. ಆಗ ಅದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಮೋದಿ ಗಾಳಿ ಇತ್ತು. ಈ ಚುನಾವಣೆಯಲ್ಲಿ ಗಾಳಿಯೇ ಇಲ್ಲ. ಇರುವುದು ಬಿರು ಬಿಸಿಲು ಮಾತ್ರ. ಮೋದಿ ಮುಖವೊಂದೇ ತಮಗೆ ಜಯ ತರಲಾರದು ಎಂಬ ಅರಿವು ಕುಮಾರಸ್ವಾಮಿ ಅವರಿಗೆ ಈಗ ಆಗುತ್ತಿದೆ.

ಈಗ ಕುಮಾರಸ್ವಾಮಿ ಅವರ ಹಬ್ಬದ ಬಾಡೂಟ ವಿವಾದವನ್ನು ಸೃಷ್ಟಿಸಿದೆ. ತಮ್ಮ ಬಿಡದಿಯ ತೋಟದ ಮನೆಯಲ್ಲಿ ಒಕ್ಕಲಿಗ ನಾಯಕರಿಗಾಗಿ ಬಾಡೂಟದ ವ್ಯವಸ್ಥೆ ಮಾಡಿದ್ದರಂತೆ. ಚುನಾವಣೆ ಸಂದರ್ಭದಲ್ಲಿ ಇಂತಹ ಊಟದ ವ್ಯವಸ್ಥೆ ಮಾಡುವುದೂ ನೀತಿ ಸಂಹಿತೆಯ ಉಲ್ಲಂಘನೆಯೇ. ಇವತ್ತು ಚುನಾವಣಾ ಅಧಿಕಾರಿಗಳು ಬಿಡದಿ ತೋಟದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂಬ ವರದಿ ಇದೆ. ಚುನಾವಣಾ ಆಯೋಗ ಯಾವ ಕ್ರಮವನ್ನೇ ಕೈಗೊಳ್ಳಲಿ ಅದು ಮುಖ್ಯವಲ್ಲ. ಮುಖ್ಯ ಕುಮಾರಸ್ವಾಮಿ ಅವರು ಗೆಲ್ಲುವುದಕ್ಕಾಗಿ ನಡೆಸುತ್ತಿರುವ ತಂತ್ರಗಾರಿಕೆ. ಆದರೆ ಚುನಾವಣಾಧಿಕಾರಿಗಳ ಭೇಟಿಯ ನಂತರ ಅನಿವಾರ್ಯವಾಗಿ ಬಾಡೂಟದ ಕಾರ್ಯಕ್ರಮವನ್ನೇ ರದ್ದಪಡಿಸಬೇಕಾಯಿತು.. ಅವರಿಗೆ ಬೇರೆ ದಾರಿ ಇರಲಿಲ್ಲ.

ಕುಮಾರಸ್ವಾಮಿ ಅವರ ಮುಂದಿರುವ ಸಮಸ್ಯೆ ಎಂದರೆ ಹಳೇ ಮೈಸೂರು ಪ್ರದೇಶದಲ್ಲಿ ಅವರು ಪ್ರಶ್ನಾತೀತ ನಾಯಕರಾಗಿ ಉಳಿದುಕೊಂಡಿಲ್ಲ. ಹಲವಾರು ನಾಯಕರುಗಳು ಗುಡರ ಕುಟುಂಬದಿಂದ ದೂರವಾಗಿದ್ದಾರೆ. ಕುಟುಂಬ ರಾಜಕಾರಣ ಕೂಡ ಹೊಸ ನಾಯಕರು ಹುಟ್ಟದಂತೆ ಮಾಡಿದೆ. ಜೊತೆಗೆ ಕಾಂಗ್ರೆಸ್ ಪಕ್ಷದಲ್ಲೂ ಈ ಪ್ರದೇಶದಲ್ಲಿ ಹೊಸ ನಾಯಕರು ಹುಟ್ಟಿಕೊಂಡಿದ್ದಾರೆ.

ಒಕ್ಕಲಿಗ ನಾಯಕತ್ವ ಈ ಕುಟುಂಬದ ಕೈಯಲ್ಲಿ ಉಳಿದಿಲ್ಲ. ಹೀಗಾಗಿ ಅವರ ಜಾತಿ ಕಾರ್ಡ್ ಕೂಡ ನಿರಿಕ್ಷಿತ ಫಲ ನೀಡುವ ಸಂಭವ ಕಡಿಮೆ. ಇದರ ಜೊತೆಗೆ ಬಿಜೆಪಿಯಲ್ಲಿ ಅನಾದಿಕಾಲದಿಂದಲೂ ಜೈಶ್ರೀರಾಮ ಎಂದು ಹೇಳುತ್ತ ಬಂದ ಒಕ್ಕಲಿಗ ನಾಯಕರಿಗೆ ತಮ್ಮ ಭವಿಷ್ಯದ ಚಿಂತೆ ಪ್ರಾರಂಭವಾಗಿದೆ. ಕುಮಾರಸ್ವಾಮಿ ತಮ್ಮನ್ನು ಬುಲ್ಡೋಜ್ ಮಾಡುತ್ತಾರೆ, ತಮ್ಮ ಮುಂದಿನ ಭವಿಷ್ಯ ಎನು ಎಂಬ ಪ್ರಶ್ನೆ ಕಾಡುತ್ತಿದೆ. ಇವರೆಲ್ಲ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ, ಒಳ ಹೊಡೆತ ನೀಡುತ್ತಾರೆಯೆ ? ಗೊತ್ತಿಲ್ಲ. ಯಾಕೆಂದರೆ ಕುಮಾರಸ್ವಾಮಿ ಅವರ ಜೊತೆ ಈ ನಾಯಕರ ರಾಜಕೀಯ ಭವಿಷ್ಯದ ಪ್ರಶ್ನೆಯೂ ತಳಕು ಹಾಕಿಕೊಂಡಿದೆ.

Author

Leave a Reply

Your email address will not be published. Required fields are marked *