ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೆಡ್ದು ಹೊಡೆದಿರುವ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲ. ಈ ಹಂತದಲ್ಲಿ ಟಿಕೆಟ್ ಕೊಡುವುದು ಸಾಧ್ಯವಿಲ್ಲ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿಯಲ್ಲಿ ಈ ಸ್ಪಷ್ಟನೆ ನೀಡಿದರು. ಇದರೊಂಡಿಗೆ ಈ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿತ್ತು.

ಪ್ರಲ್ಹಾದ್ ಜೋಶಿ ಅವರ ಜೊತೆ ತೊಡೆ ತಟ್ಟಿದ ದಿಂಗಾಲೇಶ್ವರರು ಚುನಾವಣೆಗೆ ನಿಲ್ಲುವುದಾಗಿ ಪ್ರಕಟಿಸಿದ್ದರು. ತಾವು ಪಕ್ಷೇತರರಾಗಿ ಜೋಶಿ ಅವರನ್ನು ಎದುರಿಸುವುದಾಗಿಯೂ ಅವರು ಹೇಳಿದ್ದರು.

ಈ ಹಂತದಲ್ಲಿ ಕಾಂಗ್ರೆಸ್ ದಿಂಗಾಲೇಶ್ವರರಿಗೆ ಟಿಕೆಟ್ ನೀಡಲಿದೆ ಎಂಬ ವದಂತಿ ಹಬ್ಬಿತ್ತು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಈ ಹಂತದಲ್ಲಿ ಸ್ವಾಮೀಜಿಯವರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ಹೇಳಿದ್ದರು

Author

Leave a Reply

Your email address will not be published. Required fields are marked *