ಬೆಂಗಳೂರು : ದೆಹಲಿಯಲ್ಲಿ ಏನು ತೀರ್ಮಾನವಾಗಬೇಕೋ ಅದು ಆಗಿದೆ. ನೀವು ಸ್ವಲ್ಪ ಕಾಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ಹೇಳಿದರು.
ಅವರು ಮೈಸೂರು ಮತ್ತು ಕೊಡಗಿ ಕ್ಷೇತ್ರದ ಒಕ್ಕಲಿಗ ನಾಯಕರ ಸಭೆಯಲ್ಲಿ ಮಾತನಾಡುತ್ತಿದ್ದರು. ಚುನಾವಣೆಯಲ್ಲಿ ಈ ಸಮುದಾಯದ ಮತಗಳನ್ನು ಕ್ರೋಡೀಕರಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು.
ಈ ವಿಚಾರದ ಬಗ್ಗೆ ಹೆಚ್ಚಿಗೆ ಮಾತನಾಡುವುದು ಬೇಡ ಎಂಬ ಸೂಚನೆಯನ್ನು ಅವರು ನೀಡಿದರು. ಆದರೆ ಯಾವ ವಿಚಾರ ಎಂಬುದನ್ನು ಬಿಡಿಸಿ ಹೇಳಲಿಲ್ಲ.
ಮೈಸೂರಿನಲ್ಲಿ ನಮ್ಮ ಸಮುದಾಯದವರಿಗೆ ರಕ್ಷಣೆ ಇಲ್ಲದಂತಾಗಿದೆ. ಇಲ್ಲಿ ನಮ್ಮ ನಾಯಕರೂ ಇಲ್ಲ ಎಂದು ಹೇಳಿದ ಶಿವಕುಮಾರ್ ತಾವು ಮೈಸೂರಿನ ಅಳಿಯ ಎಂಬುದನ್ನು ನೆನಪು ಮಾಡಿಕೊಟ್ಟರು.
ಹಲವಾರು ವರ್ಷಗಳ ನಂತರ ನಮ್ಮ ಸಮುದಾಯದವರಿಗೆ ಇಲ್ಲಿ ಟಿಕೆಟ್ ನೀಡಿದ್ದೇವೆ. ಇವರು ಗ್ರಾಮಾಂತರ ಪ್ರದೇಶದಿಂದ ಬಂದವರು. ನೀವು ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಅವರು ಮನವಿ ಮಾಡಿದರು.







