ಮೊದಲ ಹಂತದ ಮತದಾನ ಸಂಪೂರ್ಣವಾಗಿ ನಮ್ಮ ಪರವಾಗಿತ್ತು ಎಂದ ಮೋದಿ ; ಇಂದು ಕರ್ನಾಟಕದಲ್ಲೂ ಪ್ರವಾಸ

PM Narendra Modi Campaign : ಪ್ರಧಾನಿ ಮೋದಿಯವರು ಇಂದು ಕರ್ನಾಟಕದ ಬೆಂಗಳೂರು ಮತ್ತು ದೊಡ್ದಬಳ್ಳಾಪುರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

ಬೆಂಗಳೂರು : ನೂರಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಲೋಕಸಭೆಯ ಮೊದಲ ಹಂತದ ಚುನಾವಣೆಯ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ ಡಿಎ ಗೆ ಸಮಾಧಾನಕರ ಫಲಿತಾಂಶ ಬಂದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಈ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ತಮ್ಮ ಚುನಾವಣಾ ಪ್ರಚಾರದಲ್ಲಿ ಮೊದಲ ಹಂತದ ಮತದಾನದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಮಹಾರಾಷ್ಟ್ರದ ನಾಂದೇಡ್ ದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ನಿನ್ನೆ ನಡೆದ ಮತದಾನ ಏಕ ಮುಖವಾಗಿತ್ತು. ಮತದಾರರು ಸಂಪೂರ್ಣವಾಗಿ ಏನ್ ಡಿಎ ಯನ್ನು ಬೆಂಬಲಿಸಿದರು ಎಂದು ಹೇಳಿದರು.

ಪ್ರಧಾನಿ ಮೋದಿ ಅವರಿಗೆ ಚುನಾವಣಾ ಮತದಾನ ಏಕಮುಖವಾಗಿತ್ತು ಎಂದು ಹೇಗೆ ತಿಳಿಯಿತು ? ಅವರಿಗೆ ಈ ವಿಷಯ ತಿಳಿಸಿದವರು ಯಾರು ? ಗೊತ್ತಿಲ್ಲ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಕರ್ನಾಟಕದಲ್ಲೂ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಬೆಂಗಳೂರು ಮತ್ತು ದೊಡ್ದಬಳ್ಳಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ

Author

error: