ಕಲಬುರಗಿ : ಅಕೌಂಟೆಂಟ್ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರುವ ಸಚಿವ ಬಿ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಸಂಸದ ಉಮೇಶ್ ಜಾಧವ್ ಆಗ್ರಹಿಸಿದ್ದಾರೆ.

‌ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್ ಅವರ ಡೆತ್ ನೋಟ್ ನಲ್ಲಿ ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿದ್ದಾರೆ. ಡೆತ್ ನೋಟ್ ನಲ್ಲಿ ಸಚಿವರ ಸೂಚನೆ ಅಂತಾ ಕೂಡ ಉಲ್ಲೇಖ ಮಾಡಲಾಗಿದೆ. ನೈತಿಕ ಹೊಣೆಹೊತ್ತು ಸಚಿವರಾದ ನಾಗೇಂದ್ರ ರಾಜೀನಾಮೆ ನೀಡಬೇಕು, ಸರ್ಕಾರ ಅವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಈ ಹಿಂದೆ ಗುತ್ತಿಗೆದಾರ ಆತ್ಮಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳಿ ಆರೋಪ ಮಾಡಿ ಅಧಿಕಾರಿಕ್ಕೆ ಬಂದರು.‌ ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟಿದ್ದರು ಎಂದರು.

ಸಚಿವರಾದ ನಾಗೇಂದ್ರ ಅವರು ಈ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ. ಅವರು ಹೇಳಿಲ್ಲ ಅಂದ್ರೆ ಬೇರೆ ಯಾರಾದ್ರು ಸಚಿವರು ಹೇಳಿರಬೇಕು. ಅಲ್ಲವೆ ಮುಖ್ಯಮಂತ್ರಿಗಳು , ಸೂಪರ್ ಸಿಎಂ , ಸ್ಪೇಷಲ್‌ ಬೇಬಿ ಹೇಳಿರಬೇಕು ಅಲ್ವಾ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನ ಟೀಕಿಸಿದರು.

Author

Leave a Reply

Your email address will not be published. Required fields are marked *