Category ಲೋಕಸಭೆ – ಚುನಾವಣೆ

ನೀವು ರಾಮನ ಪಾತ್ರ ಮಾಡಿದರೂ ಸರಿ, ಪ್ರಧಾನಿ ಮೋದಿ ಪಾತ್ರ ಮಾಡಿದರೂ ಸರಿ, ನಿಮಗೆ ಬಿಜೆಪಿ ಸೀಟು ಗ್ಯಾರಂಟಿ ! ಎರಡೂ ಮಾಡಿದರೆ ಡಬ್ಬಲ್ ಗ್ಯಾರಂಟಿ !!

ಬಿಜೆಪಿಗೂ ಚಿತ್ರ ನಟರಿಗೂ ಅವಿನಾಭಾವ ಸಂಬಂಧ. ಮೊದಲಿನಿಂದಲೂ ಬಿಜೆಪಿ ಚಿತ್ರ ನಟರಿಗೆ ಟಿಕೆಟ್ ನೀಡುತ್ತಲೇ ಬಂದಿದೆ..ಇದಕ್ಕೆ ಕಾರಣ ಏನು ? ನಟರು ರಾಜಕೀಯದಲ್ಲೂ ಚೆನ್ನಾಗಿ ನಟಿಸಬಹುದು ಎಂಬ ನಂಬಿಕೆ ಕಾರಣ ಇರಬಹುದೆ ? ಇದ್ದರೂ ಇರಬಹುದು. ಆದರೆ ಎಲ್ಲ ಚಿತ್ರ ನಟರೂ ರಾಜಕೀಯದಲ್ಲಿ ಚೆನ್ನಾಗಿ ನಟಿಸುತ್ತಾರೆ ಎಂದು ಹೆಳಲು ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ನಟರಿಗಿಂತ ರಾಜಕಾರಣಿಗಳೇ…

ಗಾಲಿ ಜನಾರ್ಧನ ರೆಡ್ಡಿ ಗಾಲಿ ಮತ್ತೆ ತಿರುಗಿಯೇ ಬಿಟ್ಟಿತಲ್ಲ…! ಬಿಜೆಪಿಯೆಡೆಗೆ…

ಬೆಂಗಳೂರು : ಬಳ್ಳಾರಿ ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ…ರಾಜ್ಯ ರಾಜಕಾರಣದಲ್ಲಿ ಹಲವು ಸ್ಥಿತ್ಯಂತರಗಳಿಗೆ ಕಾರಣರಾದವರು.. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜೈಲಿಗೂ ಹೋಗಿ ಬಂದವರು.. ಸಿದ್ದರಾಮಯ್ಯನವರ ಬಳ್ಳಾರಿ ನಡಿಗೆ ನಡೆದಿದ್ದು ಇವರ ವಿರುದ್ಧವೇ. ಆದರೆ ಕಾಲ ಅಂದರೆ ಹಾಗೆ.. ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದವರು ರೆಡ್ಡಿ..ಸಿದ್ದರಾಮಯ್ಯ ಮತ್ತು ಡಿ.ಕೆ.…

ಸಂಪಾದಕೀಯ: ಟಿಕೆಟ್ ಕಳೆದುಕೊಂಡ ಉಗ್ರ ಹಿಂದುತ್ವವಾದಿ, ಮೋದಿ ರಾಜಕಾರಣಕ್ಕೆ ಬಲಿಯಾದ ಅನಂತ ಮಾಣಿ ಎಂಬ ವಿಷ,

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ. ಅದು ಹಲವು ಉಗ್ರಗಾಮಿ ಹಿಂದುತ್ವವಾದಿಗಳನ್ನು ಹುಟ್ಟಿ ಹಾಕಿತು. ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಬಂದವರು ಹಾರಿಸಿದ್ದು ಕೋಮು ಧ್ವೇಷದ ಧ್ವಜವನ್ನು.ಆಗ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ಇದು ಬೇಕಾಗಿತ್ತು..ಸಮಾಜದಲ್ಲಿ ಶಾಂತಿ ಸಮಾಧಾನ, ಸೌಹಾರ್ದತೆ ಇದ್ದರೆ ರಾಜಕೀಯ ಬೆಳೆಯುವುದಿಲ್ಲ. ರಾಜಕೀಯಕ್ಕೆ ಹುಲುಸಾದ ಪ್ರಸ್ತ ಭುಮಿ ಬೇಕು. ಅದಕ್ಕೆ ಗೊಬ್ಬರ ಹಾಕಿ ಬೆಳೆಸಬೇಕು.…

ಗಣಿ ಧಣಿಗೆ ಗ್ರೀನ್‌ ಸಿಗ್ನಲ್‌ : ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್..‌..!

ಬಳ್ಳಾರಿ : ಗಂಗಾವತಿ ಶಾಸಕ ಜಿ.‌ಜನಾರ್ಧನರೆಡ್ಡಿ ಅವರು‌ ಕರ್ನಾಟಕ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷ‌ ಸೇರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ‌ ವಿಲೀನ ಮಾಡಲಿದ್ದಾರೆ. ಈ‌ ಕುರಿತು ಎಲ್ಲಾ‌ ಚರ್ಚೆಗಳಿಗೆ ಸೋಮವಾರ (ಮಾರ್ಚ್‌ ೨೫) ರಂದು ಅಂತಿಮ‌ ತೆರೆ ಬೀಳಲಿದೆ. ಕಲ್ಯಾಣ ಪ್ರಗತಿ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯನ್ನು ಬೆಂಗಳೂರಿನ ಮನೆಯಲ್ಲಿ ಭಾನುವಾರ…

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಬೆಂಬಲಿಸಲಿ: ಹೆಚ್‌ ಡಿ ದೇವೇಗೌಡ

ಬೆಂಗಳೂರು: ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ತನ್ನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ವಿರೋಧಿಸಿರುವ ಡಿಎಂಕೆ ಪಕ್ಷದ ನಡೆಯನ್ನು ಮಾಜಿ ಪ್ರಧಾನಿಗಳು ಹಾಗೂ ಜಾತ್ಯತೀತ ಜನತಾದಳ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ. ಅಲ್ಲದೆ, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯನ್ನು ಬೆಂಬಲಿಸಿ ಅದನ್ನು ಕಾರ್ಯಗತಗೊಳಿಸುವ ಅಚಲ ನಿರ್ಧಾರವನ್ನು ಇದೇ…

ಅಭ್ಯರ್ಥಿ ನೀವೇ ಆಗಬೇಕು ಎಂದು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದ ಸಕ್ಕರೆನಾಡಿನ ಕಾರ್ಯಕರ್ತರು

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ನೀವೇ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯ ಮಾಡಿದ ಸಕ್ಕರೆನಾಡಿನ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರು, ಜೆ.ಪಿ.ನಗರದಲ್ಲಿರುವ ಮಾಜಿ ಮುಖ್ಯಮಂತ್ರಿಗಳ ನಿವಾಸದ ಎದುರಿನ ರಸ್ತೆಯಲ್ಲಿಯೇ ಕೂತು ಘೋಷಣೆ ಕೂಗಿದ ಘಟನೆ ನಡೆಯಿತು. ಚೆನ್ನೈನಲ್ಲಿ ಮೂರನೇ ಬಾರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಮರಳಿದ…

ಮಾ. 31ರಂದು ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದಿಂದ ‘ಮಹಾ ರ್‍ಯಾಲಿ’

ನವದೆಹಲಿ: ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು’ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಮಾರ್ಚ್ 31 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮಹಾ ರ್‍ಯಾಲಿ’ ನಡೆಸಲಿದೆ. ಇಂಡಿಯಾ ಮೈತ್ರಿಕೂಟದ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ಅತಿಶಿ ಸಿಂಗ್, ಗೋಪಾಲ್ ರೈ, ಸೌರಭ್ ಭಾರದ್ವಾಜ್ ಹಾಗೂ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಮತ್ತು ಇತರರು ಈ…

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ೨೦ ಸ್ಥಾನ: ಸಿಎಂ ಸಿದ್ದರಾಮಯ್ಯ

ಮೈಸೂರು : ನಮ್ಮದು ನುಡಿದಂತೆ ನಡೆದ ಸರ್ಕಾರ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೨೦ ಕ್ಷೇತ್ರಗಳಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಅಥವಾ ನಾಳೆ ಬಾಕಿ ಉಳಿದಿರುವ ಕಾಂಗ್ರೆಸ್ ಪಟ್ಟಿಗಳನ್ನು ಬಿಡುಗಡೆ ಮಾಡುತ್ತೇವೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಕಗ್ಗಂಟಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.…

ಮತದಾರ ಪ್ರಭುವಿನ ಚಿತ್ತ ಈ ಸಲ ಯಾರತ್ತ?

ಒಂದೆಡೆ ಬರ, ಇನ್ನೊಂದೆಡೆ ಮತ ಯಾಚನೆ, ಒಂದೆಡೆ ನಿರುದ್ಯೋಗ ಇನ್ನೊಂದೆಡೆ ಪ್ರಚಾರಸಭೆಗಳಿಗೆ ಬರಲು ಆಹ್ವಾನ, ಬಿರುಬಿಸಿಲಿನಲ್ಲಿ ರಾಮನವಮಿಯ ಕೋಸಂಬರಿಯಂತೆ ಈ ಚುನಾವಣೆಯೆ? ಹಾಗೆಂದು ಜನರು ಯೋಚಿಸುತ್ತಿದ್ದಾರೆ ಈ ಬಾರಿ. ಕನ್ನಡದ ಟಿವಿ ವಾಹಿನಿಯೊಂದು ಬೆಂಗಳೂರಿನ ಸೆಂಟ್ರಲ್ ಲೋಕಸಭಾ  ಕ್ಷೇತ್ರದಲ್ಲಿ ಜನರನ್ನು ಮಾತನಾಡಿಸುತ್ತಿತ್ತು. ಅಲ್ಲಿ ಕೆಲವರು ಮೋದಿ ಬರಲಿ ಎಂದರೆ, ಇನ್ನು ಕೆಲವರು ಕಾಂಗ್ರೆಸ್ ಬರಲಿ ಅಂತಿದ್ದರು.…