Category ಲೋಕಸಭೆ – ಚುನಾವಣೆ

ಕೈ ಬೆಂಬಲಿಸ್ತಾರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್..!

ಚಾಮರಾಜನಗರ : ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಶ್ರೀನಿವಾಸ್ ಪ್ರಸಾದ್ ಒಬ್ಬರು. ಕರ್ನಾಟಕದ ರಾಜಕೀಯ ಇತಿಹಾಸಸ ಬಗ್ಗೆ ಮಾತನಾಡುವಾಗ ಶ್ರೀನಿವಾಸ್ ಪ್ರಸಾದ್ ಬಗ್ಗೆ ಮಾತನಾಡಲೇ ಬೇಕು. ಈಗ ಬಿಜೆಪಿ ಸಂಸತ್ ಸದಸ್ಯರಾಗಿರುವ ಅವರು ತಮ್ಮ ರಾಜಕೀಯ ಬದುಕಿನ ಹೆಚ್ಚಿನ ಸಮಯವನ್ನು ಕಳೆದಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಅವರು ಕಾಂಗ್ರೆಸ್ ಪಕ್ಷದಿಂದ 4 ಕ್ಕಿಂತ ಹೆಚ್ಚು ಬಾರಿ ಸಂಸತ್ ಸದಸ್ಯರಾಗಿದ್ದವರು.ಸಿದ್ದರಾಮಯ್ಯ…

ಬೀಗರಿಗೆ ಟಿಕೆಟ್ ತಪ್ಪಿಸಿದ ಶೆಟ್ಟರ್, ಓರ್ವ ಸ್ವಾರ್ಥ ರಾಜಕಾರಣಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

ಬೆಳಗಾವಿ : ಹುಬ್ಬಳ್ಳಿ ಧಾರವಾಡ ಜನರಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬೆಳಗಾವಿಯಲ್ಲಿ ಸಲ್ಲಲು ಹೇಗೆ ಸಾಧ್ಯ. ಸ್ವತಃ ಬೀಗರಿಗೆ ಟಿಕೆಟ್ ತಪ್ಪಿಸಿ ತಾವೇ ಅಭ್ಯರ್ಥಿಯಾಗುವ ಮೂಲಕ ಸ್ವಾರ್ಥ ರಾಜಕಾರಣಿ ಎಂದು ನಿರೂಪಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ವಿರುದ್ಧ ಕಿಡಿ ಕಾರಿದರು. ಇಂದು…

ಸೋಲಿನ ಭಯದಿಂದ ವಿರೋಧ ಪಕ್ಷಗಳಿಗೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಕಿರುಕುಳ: ಡಿ ಕೆ ಶಿವಕುಮಾರ್

ಬೆಂಗಳೂರು : “ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಕೇಂದ್ರ ಬಿಜೆಪಿ ಸರ್ಕಾರ, ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ಎಐಸಿಸಿಗೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ಜಾರಿ ಮಾಡಿರುವ ಬಗ್ಗೆ…

ಕಣ್ಣೀರು ಹಾಕಿದ ಅಭಿಮಾನಿಗಳು; ಕಣ್ಣೀರು ಒರೆಸಿಕೊಂಡ ಸುಮಲತಾ, ಏಪ್ರಿಲ್ 3 ರಂದು ರಾಜಕೀಯ ನಿರ್ಧಾರ ಪ್ರಕಟ

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಬಗ್ಗೆ ಏಪ್ರೀಲ್ ೨ ರಂದು ಅಂತಿಮ ನಿರ್ಧಾರವನ್ನು ಸಂಸತ್ ಸದಸ್ಯೆ ಸುಮಲತಾ ಪ್ರಕಟಿಸಲಿದ್ದಾರೆ. ಅಂದು ಮಂಡ್ಯದಲ್ಲೇ ಸುಮಲತಾ ಮತ್ತು ಅಂಬರೀಷ್ ಅಭಿಮಾನಿಗಳ ಸಭೆ ನಡೆಯಲಿದೆ. ಇನ್ನೂ ಮೂರು ದಿನಗಳ ಕಾಲ ಅವರು ತಮ್ಮ ಆಪ್ತರ ಜೊತೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯವನ್ನು ಪಡೆಯಲಿದ್ದಾರೆ. ಇಂದು ಬೆಂಗಳೂರಿನ…

ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗ: ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್ ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೇ ಸಚಿವರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗ…

ರಾಜಕೀಯವಾಗಿ ಅತಂತ್ರರಾದ ಸುಮಲತಾ. ಆಗುವರೇ ಸ್ವತಂತ್ರ ?

ಮಂಡ್ಯ : ಮಂಡ್ಯದ ಗಂಡು ಅಂಬರೀಶ್ ಅವರ ಪತ್ನಿ ಸುಮಲತಾ ಈಗ ರಾಜಕೀಯವಾಗಿ ಅತಂತ್ರ. ಇದು ಸ್ವಯಂಕೃತ ಅಪರಾಧ.. ಇದರಿಂದಾಗಿ ಅವರು ಮತ್ತೆ ಸ್ವತಂತ್ರರಾಗುವರೇ ? ಈ ಪ್ರಶ್ನೆಗೆ ಇಂದು ಸಂಜೆಯ ಹೊತ್ತಿಗೆ ಉತ್ತರ ದೊರಕಲಿದೆ. ಮಂಡ್ಯದ ಜನರ ಪ್ರೀತಿ ವಿಶ್ವಾಸ ಅವರನ್ನು ಸಂಸತ್ತಿನ ಮೆಟ್ಟಿಲು ಏರುವಂತೆ ಮಾಡಿತು. ಮಂಡ್ಯದ ಜನ ಪಕ್ಷವನ್ನು ನೋಡಲಿಲ್ಲ. ಜಾತಿಯನ್ನು…

ಕಾಂಗ್ರೆಸ್‌ ನ ಮತ್ತೊಂದು ಪಟ್ಟಿ ಬಿಡುಗಡೆ ; ರಕ್ಷಾ ರಾಮಯ್ಯ, ಇ.ತುಕಾರಾಂ, ಸುನೀಲ್‌ ಬೋಸ್‌ ಗೆ ಮಣೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ 9ನೇ ಪಟ್ಟಿ ಬಿಡುಗಡೆ ಮಾಡಿದೆ, ಚಿಕ್ಕಬಳ್ಳಾಪುರದಿಂದ ಎಂ ಆರ್ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ, ಬಳ್ಳಾರಿಯಿಂದ ಇ.ತುಕಾರಾಂ, ಮತ್ತು ಚಾಮರಾಜನಗರದಿಂದ ಸಚಿವ ಮಹದೇವಊಅ ಅವರ ಪುತ್ರ ಸುನೀಲ್‌ ಬೋಸ್‌ ಗೆ ಟಿಕೆಟ್ ನೀಡಲಾಗಿದೆ. ಶುಕ್ರವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 9ನೇ ಪಟ್ಟಿಯನ್ನು ಬಿಡುಗಡೆ…

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲ್ಲ ಎಂದ ಎಸ್ ಎಲ್ ಭೈರಪ್ಪ..ಬಿಜೆಪಿ ನಾಯಕರೆದುರೇ ಜಾಡಿಸಿ ಬಿಟ್ರು ..

ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿ ಬಹಳ ವೀಕ್ ಇದೆ. ಕಳೆದ ಬಾರಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯವರು, ಸರಕಾರವನ್ನು ಸರಿಯಾಗಿ ನಡೆಸಲಿಲ್ಲ. ಈ ಅಂಶವನ್ನು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು ಇದು ಸಾಹಿತಿ ಕಾದಂಬರಿಕಾರ ಬೈರಪ್ಪನವರು ಹೇಳಿದ್ದು. ಬಿಜೆಪಿ, ಮೋದಿ ಅಭಿಮಾನಿಯಾದ ಬೈರಪ್ಪನವರು ಯಾಕೋ ಬಿಜೆಪಿ ಬಗ್ಗೆ ಕೋಪಗೊಂಡಂತಿತ್ತು..ಜ್ನಾನಪೀಠ ಮಧ್ಯ ಬಂತೋ ಗೊತ್ತಿಲ್ಲ.…

ಸಿದ್ದರಾಮಯ್ಯ ಗರ್ವಭಂಗ ಆಗಲಿ; ಜೆಡಿಎಸ್ ಬಿಜೆಪಿ ಕಾರ್ಯಕರ್ತರಿಗೆ ದೇವೇಗೌಡ ಕರೆ . ಬಿಜೆಪಿಯನ್ನೇ ಹೈಜಾಕ್ ಮಾಡಿದ ದೇವೇಗೌಡ, ಕುಮಾರಸ್ವಾಮಿ

ಬೆಂಗಳೂರು : ಸಿದ್ದರಾಮಯ್ಯನವರ ಗರ್ವ ಭಂಗ ಮಾಡಬೇಕು. ಈ ಗುರಿ ಸಾಧಿಸಲು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಇಂದು ಕರೆ ನೀಡಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಎರಡೂ ಪಕ್ಷಗಳ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಗೌಡರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು…

ಯತೀಂದ್ರ ಅವರಿಗೂ ರಾಹುಲ್‌ ಗಾಂಧಿಯಂತೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ: ಆರ್‌.ಅಶೋಕ

ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವರ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಯತೀಂದ್ರ ಹೀಗೆಯೇ ಮಾತನಾಡುತ್ತಿದ್ದರೆ ರಾಹುಲ್‌ ಗಾಂಧಿಯಂತೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಮಗ ಎನ್ನುವ…