ನೀವು ರಾಮನ ಪಾತ್ರ ಮಾಡಿದರೂ ಸರಿ, ಪ್ರಧಾನಿ ಮೋದಿ ಪಾತ್ರ ಮಾಡಿದರೂ ಸರಿ, ನಿಮಗೆ ಬಿಜೆಪಿ ಸೀಟು ಗ್ಯಾರಂಟಿ ! ಎರಡೂ ಮಾಡಿದರೆ ಡಬ್ಬಲ್ ಗ್ಯಾರಂಟಿ !!

ಬಿಜೆಪಿಗೂ ಚಿತ್ರ ನಟರಿಗೂ ಅವಿನಾಭಾವ ಸಂಬಂಧ. ಮೊದಲಿನಿಂದಲೂ ಬಿಜೆಪಿ ಚಿತ್ರ ನಟರಿಗೆ ಟಿಕೆಟ್ ನೀಡುತ್ತಲೇ ಬಂದಿದೆ..ಇದಕ್ಕೆ ಕಾರಣ ಏನು ? ನಟರು ರಾಜಕೀಯದಲ್ಲೂ ಚೆನ್ನಾಗಿ ನಟಿಸಬಹುದು ಎಂಬ ನಂಬಿಕೆ ಕಾರಣ ಇರಬಹುದೆ ? ಇದ್ದರೂ ಇರಬಹುದು. ಆದರೆ ಎಲ್ಲ ಚಿತ್ರ ನಟರೂ ರಾಜಕೀಯದಲ್ಲಿ ಚೆನ್ನಾಗಿ ನಟಿಸುತ್ತಾರೆ ಎಂದು ಹೆಳಲು ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ನಟರಿಗಿಂತ ರಾಜಕಾರಣಿಗಳೇ…








