Category ದೇಶ

ನ್ಯಾಯಾಲಯದ ಮುಂದೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ದೆಹಲಿ ಮುಖ್ಯಂತ್ರಿ ಕೇಜ್ರಿವಾಲ್..

ಇದೊಂದು ಅಪರೂಪದ ಪ್ರಕರಣ. ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಕೇಜ್ರಿವಾಲ್..ನ್ಯಾಯಾಲಯದಲ್ಲಿ ತಮ್ಮ ಪರವಾದ ವಕೀಲರು ಹಾಜರಿದ್ದರೂ ತಾವೇ ವಾದ ಮಂಡಿಸುವುದಾಗಿ ಅವರ್ ಮನವಿ ಮಾಡಿದರು. ನ್ಯಾಯಾಲಯದ ಅನುಮತಿ ಪಡೆದು ಹಿಂದಿಯಲ್ಲಿ ವಾದ ಮಂಡಿಸಿದರು. ಅಬ್ಕಾರಿ ನೀತಿಯಲ್ಲಿ ಹಗರಣ ನಡೆದಿಲ್ಲ. ನಂತರ ನಡೆದಿದೆ. ಶರತ್ ಚಂದ್ರ ರೆಡ್ಡಿ ಅವರಿಗೆ ಜಾಮೀನು ದೊರಕಿದ ಮೇಲೆ ಅವರು ಬಿಜೆಪಿಗೆ…

ರಾಜಕಾರಣಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಒತ್ತಡ ಮುಖ್ಯ : ನ್ಯಾಯಮೂರ್ತಿಗಳಿಗೆ ವಕೀಲರಿಂದ ಪತ್ರ

ನವದೆಹಲಿ : ಕೆಲವೊಂದು ಸ್ವ ಹಿತಾಸಕ್ತಿ ಸಮೂಹಗಳು ನ್ಯಾಯಾಂಗ ನಿರ್ಣಯಗಳ ಮೇಲೆ ಪ್ರಭಾವ ಬೀರಲು ಒತ್ತಡ ತಂತ್ರವನ್ನು ಬಳಸುತ್ತಿವೆ ಎಂದು ಸುಮಾರು 600 ಕ್ಕೂ ಹೆಚ್ಚು ವಕೀಲರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಪತ್ರ ಬರೆದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನ್ಯಾಯಾಲಯ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಉಳಿಸಲು ಮುಂದಾಗಬೇಕು ಎಂದು ಅವರು ಮುಖ್ಯ…

ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಠಗಿತ , ಅಮೇರಿಕ ತನ್ನ ನಿಲುವಿಗೆ ಬದ್ಧ..

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ, ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಬೆಳವಣಿಗೆಗಳನ್ನು ಅಮೇರಿಕ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಅಮೇರಿಕ ನೀಡಿದ ಹೇಳಿಕೆಯ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಕಟೂವಾಗಿ ಪ್ರತಿಕ್ರಿಯಿಸಿತ್ತು, ಅಮೇರಿಕ ರಾಯಬಾರಿ ಸಿಬ್ಬಂದಿಯನ್ನು ವಿದೇಶಾಂಗ ಇಲಾಖೆಗೆ ಕರೆಸಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೆ ಅಮೇರಿಕ ಈಗಲೂ ತನ್ನ ನಿಲುಮೆಯನ್ನು ಬದಲಿಸಿಲ್ಲ.…

ಲೋಕಸಭಾ ಚುನಾವಣೆ : ರಾಜ್ಯದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆ ಗುರುವಾರದಿಂದ ಆರಂಭ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ, ಈ ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಿದೆ. ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ಏ.8ರಂದು ಉಮೇದುವಾರಿಕೆಗಳನ್ನು ವಾಪಸ್ ಪಡೆಯಲು ಕೊನೆಯ ದಿನ. ಏ.26ರಂದು ಮತದಾನ. ಜೂ.4ರಂದು ಫಲಿತಾಂಶ ಹೊರಬೀಳಲಿದೆ.…

ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಮಾರ್ಚ್ 31 ರಂದು ಬೃಹತ್ ಪ್ರತಿಭಟನೆ

ಬೆಂಗಳೂರು: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಕ್ರಮ ಬಂಧನವನ್ನು ಖಂಡಿಸಿ ಹಾಗೂ ಸಂವಿಧಾನದ, ಪ್ರಜಾಪ್ರಭುತ್ವದ ಉಳಿವಿಗಾಗಿ ಮೋದಿ ಸರ್ಕಾರದ ದುಷ್ಕೃತ್ಯಗಳನ್ನು ವಿರೋಧಿಸಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟದ ಮುಖಂಡರನ್ನು ಒಳಗೊಂಡಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ತಿಳಿಸಿದರು. ಇಂದು ಪಕ್ಷದ ಮಾಧ್ಯಮ…

ದೆಹಲಿ ಪೊಲೀಸರಿಂದ ಪತ್ರಕರ್ತರ ಮೇಲೆ ಹಲ್ಲೆ; ಫೋಟೋ ಜರ್ನಲಿಸ್ಟ್ ಗಳ ಕುತ್ತಿಗೆ ಹಿಡಿದ ಪೊಲೀಸರು, ಮಾಧ್ಯಮ ಸಂಘಟನೆಗಳ ಪ್ರತಿಭಟನೆ

ನವದೆಹಲಿ : ಆಮ್ ಆದ್ಮಿ ಪಕ್ಷದ ಪ್ರತಿಭಟನೆ ಸಂದರ್ಭದಲ್ಲಿ ಫೋಟೋ ಜರ್ನಲಿಸ್ಟ್ ಗಳ ಮೇಲೆ ದೆಹಲಿ ಪೋಲಿಸರು ಹಲ್ಲೆ ನಡೆಸಿದ್ದಾರೆ. ಪತ್ರಕರ್ತರ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ ಫೋಟೋವನ್ನು ಪತ್ರಕರ್ತರ ಸಂಘಗಳು ಹಂಚಿಕೊಂಡಿವೆ. ದೆಹಲಿ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಪ್ರತ್ಯೇಕ್ ಹೇಳಿಕೆ ನೀಡಿ ನಿವೃತ್ತ ನ್ಯಾಯಾಧೀಶರಿಂದ ಈ ಪ್ರಕರಣದ ಬಗ್ಗೆ…

ದೇಶದ ಆರ್ಥಿಕತೆ; ವೈಭವೀಕರಣದ ವಿರುದ್ಧ ರಘುರಾಮ್ ರಾಜನ್ ಎಚ್ಚರಿಕೆ

ನವದೆಹಲಿ : ಭಾರತದ ಅರ್ಥಿಕತೆಯ ಕುರಿತು ಅನಗತ್ಯ ಹೈಪ್ ಸೃಷ್ಟಿಮಾಡಲಾಗುತ್ತಿದೆ. ಇದು ಕೆಲವು ರಾಜಕಾರಣಿಗಳಿಗೆ ಬೇಕಾಗಿದೆ. ಆದರೆ ಇದು ಸರಿಯಾದುದಲ್ಲ ಎಂದು ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ. ದೇಶದ ಆರ್ಥಿಕತೆಯ ಬಗ್ಗೆ ಈಗ ಸೃಷ್ಟಿಸಲಾಗಿರುವ ಮಿಥ್ಯೆ ಸತ್ಯವಾಗಲು ಇನ್ನೂ ಕೆಲವು ವರ್ಷಗಳ ಕಠಿಣ ಪರಿಶ್ರಮ ಬೇಕು. ಆದರೆ ಈಗಲೇ…

ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಅಮೇರಿಕ ಜರ್ಮನಿ ಕಳವಳ; ದೆಹಲಿಯಲ್ಲಿ ಪ್ರತಿಭಟನೆ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ದೆಹಲಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಾವಿರಾರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸ್ತೆಗೆ ಇಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಈ ಕಾರ್ಯಕರ್ತರು ಯತ್ನ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆಪ್ ಹಿರಿಯ ನಾಯಕ ಸೋಮನಾಥ್ ಭಾರ್ತಿ, ದೆಹಲಿ ಅಸೆಂಬ್ಲಿ…

ಕೇಜ್ರಿವಾಲ್ ಬಂಧನ, ಕಾನೂನು ಪ್ರಕ್ರಿಯೆ ಮುಕ್ತವಾಗಿ, ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಿ: ಭಾರತಕ್ಕೆ ಅಮೇರಿಕ ಸೂಚನೆ

ವಾಷಿಂಗ್ಟನ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕುರಿತಂತೆ ಅಮೇರಿಕ ತೀಕ್ಷ ಪ್ರತಿಕ್ರಿಯೆ ನೀಡಿದೆ. ಕಾನೂನು ಪ್ರಕ್ರಿಯೆ ಮುಕ್ತವಾಗಿ ಮತ್ತು ನ್ಯಾಯ ಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಿ ಎಂದು ಅದು ಭಾರತಕ್ಕೆ ಸೂಚಿಸಿದೆ. ಈ ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಮೇರಿಕ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಈಗಾಗಲೇ ಹಲವು…

ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ; ಅಮೇರಿಕ ಕಳವಳ

ವಾಷಿಂಗ್ಟನ್ : ಭಾರತದಲ್ಲಿ ಜಾತಿ ಮತ್ತು ಕೋಮು ಆಧಾರದ ಮೇಲೆ ಪೌರತ್ವ ನೀಡುವ ಕುರಿತು ಅಮೇರಿಕದಲ್ಲಿ ಕಳವಳ ವ್ಯಕ್ತವಾಗಿದೆ. ಭಾರತದ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕದ ಅಂತಾರಾಷ್ಟ್ರ‍ೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ಆಯೋಗ ಧರ್ಮ ಮತ್ತು ಕೋಮು ಆಧಾರದ ಮೇಲೆ ಪೌರತ್ವ ನೀಡುವುದಾಗಲೀ ನಿರಾಕರಿಸುವುದಾಗಲಿ ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಧರ್ಮ…