ನವದೆಹಲಿ : ಚುನಾವಣಾ ಬಾಂಡ್ ಗಳನ್ನು ‘ಹಫ್ತಾ ವಸೂಲಿ’ ಎಂದು ಕರೆಯುತ್ತಿರುವ ರಾಹುಲ್ ಗಾಂಧಿ 1,600 ಕೋಟಿ ರೂ.ಗಳನ್ನು ಎಲ್ಲಿಂದ ಪಡೆದರು ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.
ಇದು ಕೇಂದ್ರ ಗೃಹ ಸಚಿವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಾಕಿದ ಸವಾಲು.
ಆದರೆ ಬಿಜೆಪಿಗೆ ಬಂದಿರುವ 12 ಸಾವಿರ ಕೋಟಿಗೂ ಹೆಚ್ಚು ಹಣದ ಬಗ್ಗೆ ಯಾವುದೇ ವಿವರ ನೀಡಿಲ್ಲ.
ಜೊತೆಗೆ ಅಧಿಕಾರದಲ್ಲಿರುವ ಬಿಜೆಪಿಗೆ ಈ ಪ್ರಮಾಣದಲ್ಲಿ ಹಣ ನೀಡಿದ ಉದ್ಯಮಪತಿಗಳ ವಿವರವನ್ನು ಅವರು ನೀಡಿಲ್ಲ. ಈ ಉದ್ಯಮಪತಿಗಳಿಗೂ ಸರ್ಕಾರಕ್ಕೂ ಇರುವ ಸಂಬಂಧದ ಬಗ್ಗೆ ಮಾತನಾಡಿಲ್ಲ.
ಚುನಾವಣಾ ಬಾಂಡ್ ಗಳ ಮೂಲಕ ಗಾಂಧಿ ಅವರಿಗೂ 1,600 ಕೋಟಿ ರೂ. ಬಂದಿದೆ. ಆ ‘ಹಫ್ತಾ ವಸೂಲಿ’ ಅವರು ಎಲ್ಲಿಂದ ಪಡೆದರು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಇದು ಪಾರದರ್ಶಕ ದೇಣಿಗೆ ಎಂದು ನಾವು ಪ್ರತಿಪಾದಿಸುತ್ತೇವೆ, ಆದರೆ ಅವರು ಅದನ್ನು ವಸೂಲಿ ಎಂದು ಹೇಳುವುದಾದರೆ ಅವರು ವಿವರಗಳನ್ನು ನೀಡಬೇಕು ಎಂದು ಷಾ ಒತ್ತಯಿಸಿದ್ದಾರೆ.






