Suddi Tv

Suddi Tv

ಈತ ಬಿಜೆಪಿ ಕಾರ್ಯಕರ್ತ, ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ಶಂಕಿತ..ಈತನನ್ನು ಬಂಧಿಸಿದ ಎನ್ ಐ ಎ

ಬೆಂಗಳೂರು ನಗರದಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣ. ನಮ್ಮ ಮಾಧ್ಯಮಗಳಿಗೆ ಹಲವು ದಿನಗಳ ಕಾಲ ಭಾರಿ ಆಹಾರವನ್ನೇ ಒದಗಿಸಿತ್ತು. ಇದು ಅಲ್ಪಸಂಖ್ಯಾತ ಸಮುದಾಯದವರೇ ನಡೆಸಿದ ಬಾಂಬ್ ಸ್ಪೋಟ ಎಂಬ ತೀರ್ಮಾನಕ್ಕೆ ನಮ್ಮ ಮಾಧ್ಯಮಗಳು ಬಂದು ಬಿಟ್ಟಿದ್ದವು. ಇದಕ್ಕೆ ಸಂಬಂಧಿಸಿದಂತೆ ನೋರಾರು ವರದಿಗಳು ಬಂದವು. ಸಾಮಾನ್ಯ ಜನ ಕೂಡ ಇದನ್ನೆಲ್ಲ ನಂಬಿದರು. ಇದಾದ ಮೇಲೆ ಎನ್…

ಅರವಿಂದ್ ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದ ವ್ಯಕ್ತಿ ಈಗ ಬಿಜೆಪಿ ಮಿತ್ರ ಪಕ್ಷದ ಚುನಾವಣಾ ಅಭ್ಯರ್ಥಿ !

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಹೇಳಿಕೆ ನೀಡಿದ ವ್ಯಕ್ತಿ ಆಂಧ್ರದ ರಾಘವ್ ಮಾಗುಂಟಾ. ಅವರ ತಂದೆ ಮಾಗುಂಟಾ ಶ್ರೀನಿವಾಸಲು ರೆಡ್ಡಿ ವೈಎಸ್ ಆರ್ ಕಾಂಗ್ರೆಸ್ ನ ಸಂಸದರಾಗಿದ್ದವರು. ದೆಹಲಿಯ ಅಬ್ಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ದೂರು ಬಂದಿದ್ದು ಇವರ ಮೇಲೆ. ಇದಾದ ಮೇಲೆ ರಾಘವ ಮಾಗುಂಟಾ ಜೈಲು ಸೇರಿದರು. ಇವರು…

ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ ವಾತಾವರಣ ನೋಡಿದ ವಿಜಯೇಂದ್ರ !

ಬೆಂಗಳೂರು : ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ- ವಿಜಯೇಂದ್ರ ಕಂಡ ವಾತಾವರಣ..ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಪ್ರಕಾರ ಎಲ್ಲ 28 ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ ಎಂಬ ವಾತಾವರಣ ಇದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತ್ತೆ ಬಿಜೆಪಿ ಬರುವ ಆಶಾವಾದವನ್ನು ವ್ಯಕ್ತಪಡಿಸಿದರು. ಈ…

ನಮ್ಮದು ಸೈದ್ಧಾಂತಿಕ ಹೋರಾಟ, ಜನತಂತ್ರ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ನಡೆಸುತ್ತಿರುವ ಹೋರಾಟ: ರಾಹುಲ್ ಗಾಂಧಿ

ನವದೆಹಲಿ : ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಾಶಪಡಿಸಲು ಹೊರಟವರು ಮತ್ತು ಉಳಿಸಲು ಹೊರಟವರ ನಡುವಿನ ಹೋರಾಟ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೋರಾಟ ಮಾಧ್ಯಮಗಳು ಹೇಳುತ್ತಿರುವಂತೆ ಇಲ್ಲ. ಈ ಹೋರಾಟ ಹೆಚ್ಚು ನಿಕಟವಾಗಿದೆ…

ಸುಮಲತಾ ಈಗ ಬಿಜೆಪಿ ಕಾರ್ಯಕರ್ತೆ, ಕೇಸರಿ ಶಾಲಿನ ಪ್ರತಿನಿಧಿ: ಮಂಡ್ಯದ ಜನರ ಸ್ವಾಭಿಮಾನ ಅವರ ಪ್ರೀತಿ ಎಲ್ಲವನ್ನೂ ತ್ಯಜಿಸಿದ ಮೋದಿ ಭಕ್ತೆ

ಬೆಂಗಳೂರು : ಚಿತ್ರ ನಟಿ ಸುಮಲತಾ ತಮ್ಮ ರಾಜಕೀಯ ಬದುಕಿನಲ್ಲಿ ಒಂದು ಸುತ್ತು ಬಂದಿದ್ದಾರೆ. ಅಂಬರೀಷ್ ಅವರ ನಿಧನದ ನಂತರ ಮಂಡ್ಯವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಅವರು ಪ್ರೀತಿಯ ಸೋಸೆಯಾದರು. ಮಂಡ್ಯದ ಮಗಳಾದರು. ಮಂಡ್ಯದ ಜನರ ಸ್ವಾಭಿಮಾನದ ಸಂಕೇತವಾದರು. ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದರು. ನಿಖಿಲ್ ಕುಮಾರಸ್ವಾಮಿ ಅವರಂತಹ ಪ್ರಬಲ ಅಭ್ಯರ್ಥಿಯನ್ನು…

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ; ದೇಶದ ಜನರಿಗೆ ನ್ಯಾಯದಾನ; ರೈತರಿಗೆ ಕನಿಷ್ಟ ಬೆಂಬಲ ಬೆಲೆ

ನವದೆಹಲಿ : ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳಲ್ಲಿ ಯುವಕರು, ಮಹಿಳೆಯರು ರೈತರು ಮತ್ತು ಅಲ್ಪಸಂಖ್ಯಾತರಿಗೆ ಮಹತ್ವ ನೀಡಲಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಈ ಪ್ರಣಾಳಿಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿತ್ತು. ನಂತರ ಇದನ್ನು ಅಂತಿಮಗೊಳಿಸಲಾಯಿತು. ಈ ಪ್ರಣಾಳಿಕೆ ಕಾಂಗ್ರೆಸ್ ಪಕ್ಷದ ಆಧ್ಯತೆಯ ಮೇಲೆ ಹೆಚ್ಚಿನ…

ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಅನ್ವಯ: ನೀವು ತಿಳಿಯಲೇ ಬೇಕಾದ ಪ್ರಮುಖ ಅಂಶಗಳು

New Tax Rules : ಏಪ್ರಿಲ್ 1ರಿಂದ ಆರ್ಥಿಕ ವರ್ಷ ಆರಂಭವಾಗಿದೆ. ಈ ವರ್ಷ ಹೊಸ ತೆರಿಗೆ ನೀತಿ ಜಾರಿಯಾಗಿ ಅನ್ವಯವಾಗಲಿದೆ. ಈ ಬಗ್ಗೆ ಫೆಬ್ರವರಿಯಲ್ಲೇ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಕಂಗನಾ, ಸ್ವಲ್ಪ ಇತಿಹಾಸ ಓದಮ್ಮ, ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಅಲ್ಲ…!

ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ ಅಲ್ಲ. 2014 ರಲ್ಲಿ. ಈ ಹೇಳಿಕೆ ನೀಡಿದ ಮಹಾತಾಯಿ ಈಕೆ..ಸದಾ ಒಂದಿಲ್ಲೊಂದು ಇಂತಹ ಹೇಳಿಕೆ ನೀಡಿ ಪ್ರಚಾರ ಪಡೆಯುವ ನಟಿ. ಬಿಜೆಪಿಯ ನಾಯಕಿ. ಈಗ ಆಕೆ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾಳೆ. ಇಂತಹ ಬುದ್ದಿ ಇಲ್ಲದ ಹೇಳಿಕೆ ನೀಡುವ ಕಂಗನಾ ಎಂದರೆ ಬಿಜೆಪಿ ನಾಯಕರಿಗೆ ಇಷ್ಟ.…

ಪಾಕಿಸ್ತಾನದಲ್ಲಿ ಭಾರತದ ಟಾರ್ಗೆಟ್ ಕಿಲ್ಲಿಂಗ್; ಗಾರ್ಡಿಯನ್ ಪತ್ರಿಕೆಯ ತನಿಖಾ ವರದಿ: ವರದಿಯನ್ನು ಅಲ್ಲಗಳೆದ ಭಾರತ

ನವದೆಹಲಿ : ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಹತ್ಯಾ ಪ್ರಕರಣಗಳಲ್ಲಿ ಭಾರತದ ಕೈವಾಡವಿದೆ ಎಂಬ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಈ ಕುರಿತು ಇಂಗ್ಲಂಡಿನ ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ವರದಿಯನ್ನು ವಿದೇಶಾಂಗ ಇಲಾಖೆ ತಳ್ಳಿ ಹಾಕಿದೆ. ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ವರದಿಯಲ್ಲಿ 2019 ರ ಪುಲ್ವಾಮಾ ಘಟನೆಯ ನಂತರ ಪಾಕಿಸ್ಥಾನದಲ್ಲಿ ಟಾರ್ಗೆಟ್ ಕಿಲ್ಲಿಂಗ್ ನಡೆಯತೊಡಗಿತು. ಇದರಲ್ಲಿ ಭಾರತದ ಕೈವಾಡವಿತ್ತು…

ಬಿಜೆಪಿ ಜೊತೆ ಮೈತ್ರಿ. ಚೆನ್ನಪಟ್ಟಣದಲ್ಲಿ ಗುಳೆ ಹೊರಟ ಜೆಡಿಎಸ್ ನಾಯಕರು: ಕುಮಾರಸ್ವಾಮಿಗೆ ಆಘಾತ !

ಬೆಂಗಳೂರು : ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಗೆ ದಾರಿ ಸುಲಭವಿದ್ದಂತೆ ಕಾಣುತ್ತಿಲ್ಲ. ಹಳೇ ಮೈಸೂರು ಪ್ರದೇಶದಲ್ಲಿ ಬಲಿಷ್ಟವಾಗಿರುವ ಜೆಡಿಎಸ್ ಗೆ ಈ ಹೊಸ ಸಂಬಂಧ ಅಲ್ಲಲ್ಲಿ ಕೈಕೊಡುತ್ತಿದೆ. ಮೊದಲನೆಯದಾಗಿ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆ ಸುಲಭವಾಗಿಲ್ಲ. ಇಷ್ಟು ವರ್ಷಗಳ ಕಾಲ ಪರಸ್ಪರ ಹೋರಾಟ ಮಾಡಿಕೊಂಡು ಬಂದವರು ಎಲ್ಲವನ್ನೂ ಮರೆತು ಒಂದಾಗುವುದು ಸುಲಭವಲ್ಲ. ಅದೇ ಈಗ…

error: