ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಅನ್ವಯ: ನೀವು ತಿಳಿಯಲೇ ಬೇಕಾದ ಪ್ರಮುಖ ಅಂಶಗಳು
New Tax Rules : ಏಪ್ರಿಲ್ 1ರಿಂದ ಆರ್ಥಿಕ ವರ್ಷ ಆರಂಭವಾಗಿದೆ. ಈ ವರ್ಷ ಹೊಸ ತೆರಿಗೆ ನೀತಿ ಜಾರಿಯಾಗಿ ಅನ್ವಯವಾಗಲಿದೆ. ಈ ಬಗ್ಗೆ ಫೆಬ್ರವರಿಯಲ್ಲೇ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ನವದೆಹಲಿ : ಏಪ್ರಿಲ್ 1ರಿಂದ ಆರ್ಥಿಕ ವರ್ಷ ಆರಂಭವಾಗಿದೆ. ಈ ವರ್ಷ ಹೊಸ ತೆರಿಗೆ ನೀತಿ ಜಾರಿಯಾಗಿ ಅನ್ವಯವಾಗಲಿದೆ. ಈ ಬಗ್ಗೆ ಫೆಬ್ರವರಿಯಲ್ಲೇ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಅದರಂತೆ ಹೊಸ ತೆರಿಗೆಯಲ್ಲಿ ಏನೇನು ಪ್ರಮುಖ ಅಂಶಗಳಿವೆ ತಿಳಿಯುವುದಾದರೆ:
ಅ. ತೆರಿಗೆ ಕ್ರಮ ಮತ್ತು ದರವನ್ನು ಬದಲಿಸಲಾಗಿದೆ.
- ಹೊಸ ತೆರಿಗೆ ಕ್ರಮವು ಪೂರ್ವ ನಿಯೋಜಿತವಾಗಿ ಜಾರಿಗೆ ಬರುತ್ತದೆ. ತೆರಿಗೆ ಕಟ್ಟುವ ಕೆಲಸವನ್ನು ಸುಲಭಗೊಳಿಸುವುದು ಮತ್ತು ಹೊಸ ಕ್ರಮದಲ್ಲಿ ಹೆಚ್ಚು ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಇದರ ಹಿಂದಿನ ಉದ್ದೇಶ. ಆದಾಗ್ಯೂ ತೆರಿಗೆದಾರರು ತಮಗೆ ಬಹಳ ಪ್ರಯೋಜನವಿದೆ ಎಂದು ಭಾವಿಸುವುದಾದರೆ ಹಳೆ ತೆರಿಗೆ ಕ್ರಮದಂತೆ ತೆರಿಗೆ ಕಟ್ಟಬಹುದಾಗಿದೆ.
- ತೆರಿಗೆ ದರವು ಈ ಕ್ರಮದಂತಿರುತ್ತದೆ. : 3 ರಿಂದ 6 ಲಕ್ಷದವರೆಗೆ – 5% ತೆರಿಗೆ
- 6 – 9 ಲಕ್ಷದವರೆಗೆ – 10% ತೆರಿಗೆ
- 9 – 12 ಲಕ್ಷದವರೆಗೆ – 15% ತೆರಿಗೆ
- 12 – 15 ಲಕ್ಷದವರೆಗೆ – 20% ತೆರಿಗೆ
- 15ಲಕ್ಷ ಮತ್ತು ಅದಕ್ಕೂ ಹೆಚ್ಚು – 30%
3. 5 ಕೋಟಿ. ರೂ.ಗಳಿಗೂ ಹೆಚ್ಚು ಆದಾಯ ಹೊಂದಿರುವವರಿಗೆ ಮೊದಲು ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಆದಾಯದ ಮೇಲೆ ಶೇ.37ರಷ್ಟು ಇದ್ದ ಹೆಚ್ಚುವರಿ ಶುಲ್ಕವನ್ನು ಶೇ.25ಕ್ಕೆ ಇಳಿಸಲಾಗಿದೆ.
4. 2023, ಏಪ್ರಿಲ್ 1ರಂದು ಮತ್ತು ಆ ನಂತರ ಜಾರಿಗೊಳಿಸಿದ ವಿಮಾ ಮೆಚ್ಯುರಿಟಿಯ ಮೇಲೆ ಒಟ್ಟು ಕಂತಿನ ಮೊತ್ತ 5 ಲಕ್ಷ ರೂ. ಮೀರಿರಬಾರದು. ಪ್ರೀಮಿಯಂ ಮೊತ್ತ 5 ಲಕ್ಷ ರೂ. ದಾಟಿದರೆ ಅದರಿಂದ ಬರುವ ಮೆಚ್ಯುರಿಟಿ ಮೊತ್ತಕ್ಕೆ ತೆರಿಗೆ ಕಡಿತ ವ್ಯವಸ್ಥೆ (ಟಿಡಿಎಸ್) ಯಲ್ಲಿ ಶೇ5. ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
5. ಸರಕಾರೇತರ ಸಿಬ್ಬಂದಿಗೆ ರಜಾ ನಗದು ತೆರಿಗೆ ವಿನಾಯಿತಿಯ ಮಿತಿ ಮೊದಲು 3 ಲಕ್ಷ ರೂ.ಗಳಿದ್ದವು. ಈಗ 25ಲಕ್ಷ ರೂ.ಗಳಿಗೆ ಏರಿಸಲಾಗಿದೆ.
ಆ. ಲಾಭಾಂಶ ಹಂಚಿಕೆ ತೆರಿಗೆ ರದ್ದಾಗಿದೆ – ಕಂಪನಿಗಳಲ್ಲಿ ವರ್ಷಾಂತ್ಯದಲ್ಲಿ ಹಂಚಿಕೆಯಾಗುವ ಲಾಭಾಂಶಕ್ಕೆ ಈ ಹಿಂದಿನ ತೆರಿಗೆ ಪದ್ದತಿಯಲ್ಲಿ ತೆರಿಗೆ ಕಟ್ಟಬೇಕಾಗಿತ್ತು. ಹೊಸ ತೆರಿಗೆ ಕ್ರಮದಲ್ಲಿ ಈ ತೆರಿಗೆಯನ್ನು ರದ್ದು ಮಾಡಲಾಗಿದೆ. ಬದಲಾಗಿ ಹಂಚಿಕೆಯಾದ ಲಾಭಾಂಶವು ಶೇರುದಾರರ ವೈಯಕ್ತಿಕ ಆದಾಯಕ್ಕೆ ಸೇರಿದಾಗ ಎಷ್ಟು ಮೊತ್ತವಾಗುತ್ತದೆ, ಅದರನ್ವಯ ತೆರಿಗೆ ಕಡಿತವಾಗುತ್ತದೆ. ತೆರಿಗೆ ಕಟ್ಟುವುದನ್ನು ಸುಲಭಗೊಳಿಸುವುದು, ಹೂಡಿಕೆ ಉತ್ತೇಜನ ಮತ್ತು, ವಿದೇಶಿ ಬಂಡವಾಳ ಹೂಡಿಕೆದಾರರನ್ನು ದೇಶೀಯ ಮಾರುಕಟ್ಟೆಗೆ ಆಕರ್ಷಿಸುವುದು ಈ ಕ್ರಮದ ಉದ್ದೇಶವಾಗಿದೆ. ಅಲ್ಲದೆ ಲಾಭಾಂಶ ಹಂಚಿಕೆಯಲ್ಲಿ ಇನ್ನಷ್ಟು ಪಾರದರ್ಶಕತೆ ಬರಲಿದೆ ಎನ್ನುವುದನ್ನು ನಿರೀಕ್ಷಿಸಲಾಗಿದೆ.
ಇ. ತೆರಿಗೆದಾರರಿಗೆ ಆಯ್ಕೆಯ ಅವಕಾಶ – ಹೊಸ ತೆರಿಗೆ ಕ್ರಮದಲ್ಲಿ ತೆರಿಗೆ ದರವನ್ನು ಕಡಿಮೆ ಮಾಡಲಾಗಿದೆ. ಆದರೆ ಹಳೆಯ ತೆರಿಗೆ ಕ್ರಮದಲ್ಲಿದ್ದ ಕೆಲವು ಕಡಿತಗಳು ಮತ್ತು ವಿನಾಯಿತಿಗಳನ್ನು ಕೈಬಿಡಲಾಗಿದೆ. ತೆರಿಗೆದಾರರು ತಮ್ಮ ವೈಯಕ್ತಿಕ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಹೊಸ ಅಥವಾ ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಬಹುದಾಗಿದೆ.
ಈ. ಪ್ರಮಾಣೀಕೃತ ಕಡಿತದ ಹೆಚ್ಚಳ – ಹಿಂದಿನ ತೆರಿಗೆ ಕ್ರಮದಲ್ಲಿದ್ದ 50,000ರೂ.ಗಳ ಪ್ರಮಾಣೀಕೃತ ಕಡಿತವನ್ನು 75,000ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ತೆರಿಗೆ ಕಟ್ಟಬೇಕಾದ ಆದಾಯದ ಪ್ರಮಾಣ ಕಡಿಮೆಯಾಗುತ್ತದೆ. ಸಂಬಳ ತೆಗೆದುಕೊಳ್ಳುವ ನೌಕರರಿಗೆ ತೆರಿಗೆ ಕಟ್ಟುವಾಗ ಲಾಭವನ್ನು ಹೆಚ್ಚಿಸುತ್ತದೆ.
ಉ. ಡಿಜಿಟಲ್ ಪಾವತಿಗೆ ಪ್ರೋತ್ಸಾಹ – ತೆರಿಗೆಯನ್ನು ಆನ್ ಲೈನ್ ನಲ್ಲಿ ಪಾವತಿಸಲು ಉತ್ತೇಜನ ನೀಡಲಾಗಿದೆ. ಯಾವ ವ್ಯಾಪಾರೋದ್ಯಮಗಳು ಡಿಜಿಟಲ್ ಪೇಮೆಂಟ್ ನ್ನು ಹೆಚ್ಚು ಮಾಡಿದ್ದಾವೊ ಅವುಗಳಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಉದ್ದೇಶಿಸಿದೆ. ಈ ಕ್ರಮದಿಂದ ಕಪ್ಪುಹಣದ ಚಲಾವಣೆಯನ್ನು ಕಡಿಮೆಮಾಡಿ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ಗುರಿ ಹೊಂದಲಾಗಿದೆ.
ತೆರಿಗೆದಾರರು ವ್ಯವಸ್ಥೆಯಲ್ಲಿನ ಹೊಸ ಬದಲಾವಣೆಯನ್ನು ಗುರುತಿಸಿ , ತಮ್ಮ ಯೋಜನೆಯನ್ನು ಸಿದ್ಧಗೊಳಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ಕೆಲವು ಮಾಹಿತಿಗಳನ್ನು ತಿಳಿದಿರಬೇಕಾಗುತ್ತದೆ.
ಅವೆಂದರೆ :-
ಆದಾಯ ತೆರಿಗೆ ಎಂದರೇನು? ಮತ್ತು ಅದು ಯಾಕೆ ಬೇಕು?
ದೇಶದ ನಾಗರಿಕ ಗಳಿಸಿದ ವಾರ್ಷಿಕ ಆದಾಯದ ಮೇಲೆ ಕೇಂದ್ರ ಸರಕಾರ ವಿಧಿಸುವ ನೇರ ತೆರಿಗೆ. ವಸ್ತುಗಳು ಮತ್ತು ಸೇವೆಗಳಿಗೆ ವಿಧಿಸುವ ಪರೋಕ್ಷ ತೆರಿಗೆ ಜಿಎಸ್ ಟಿ. ಈ ಎರಡೂ ತೆರಿಗೆಗಳಿಂದ ಬರುವ ಹಣದಿಂದ ಸರಕಾರವು ತನ್ನ ಕಾರ್ಯ ನಿರ್ವಹಿಸುತ್ತದೆ. ಮೂಲಭೂತ ಸೌಕರ್ಯ ಅಭಿವೃದ್ಧಿ, ಶಿಕ್ಷಣ, ಮನರಂಜನೆ, ಕಲೆ, ಸಾಹಿತ್ಯ , ಸಂಸ್ಕೃತಿ ರಕ್ಷಣೆ ಮತ್ತು ಉತ್ತೇಜನ, ಆಂತರಿಕ ಮತ್ತು ಬಾಹ್ಯ ಸುರಕ್ಷತೆ ಸೇರಿದಂತೆ ತನ್ನ ವ್ಯವಸ್ಥೆಯ ನಿರ್ವಹಣೆಗೆ ಬೇಕಾದ ಖರ್ಚುವೆಚ್ಚಗಳನ್ನು ಸರ್ಕಾರ ಈ ಹಣದಿಂದ ಭರಿಸುತ್ತದೆ.
ಆದಾಯ ತೆರಿಗೆ ಲೆಕ್ಕಾಚಾರ ಹೇಗಿರುತ್ತದೆ?
ವ್ಯಕ್ತಿ ಅಥವಾ ವ್ಯಾಪಾರಿ ವಾರ್ಷಿಕವಾಗಿ ಗಳಿಸಿದ ಆದಾಯವನ್ನು ಲೆಕ್ಕಹಾಕಲಾಗುತ್ತದೆ. ಈ ಆದಾಯವು ಕೃಷಿ, ಸಂಬಳ, ವ್ಯಾಪಾರದಲ್ಲಿನ ಲಾಭಾಂಶ, ಬಾಡಿಗೆ ಆದಾಯ,ಬಂಡವಾಳ ಲಾಭ ಮತ್ತು ಇತರ ಹೂಡಿಕೆಗಳಿಂದ ದೊರೆತ ಹಣವಾಗಿರುತ್ತದೆ. ಇದರಲ್ಲಿ ವಾರ್ಷಿಕ 1.5ಲಕ್ಷ ರೂ.ಗಳವರೆಗೆ ವಿವಿಧ ಉಳಿತಾಯಕ್ಕೆ ವಿನಾಯಿತಿ ಇದೆ. ಈ ವಿನಾಯಿತಿ ಅಂಚೆ ಕಚೇರಿ, ಬ್ಯಾಂಕ್, ವಿಮೆ ಇವುಗಳಲ್ಲಿ ಉಳಿಸಿದ ಹಣಕ್ಕೆ ಅನ್ವಯವಾಗುತ್ತದೆ. ಜೊತೆಗೆ 75,000ರೂ. ಸಾರ್ವತ್ರಿಕ ಪ್ರಮಾಣೀಕೃತ ವಿನಾಯಿತಿ ಇದೆ. ಜೊತೆಗೆ ಶಿಕ್ಷಣಕ್ಕೆ, ಸಾಲದ ಅಸಲು, ಬಡ್ಡಿಗೆ, ಆರೋಗ್ಯ ಮತ್ತು ದೈನಂದಿನ ಜೀವನಕ್ಕೆ ಮಾಡಿದ ಖರ್ಚುಗಳನ್ನು ತೆಗೆದು ಉಳಿದ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತದೆ.
ಈ ಲೆಕ್ಕಾಚಾರ ಪತ್ರವನ್ನು ವರ್ಷಕ್ಕೊಮ್ಮೆ ಸರಕಾರಕ್ಕೆ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕಾಗುತ್ತದೆ. ಈ ಲೆಕ್ಕಾಚಾರದಲ್ಲಿ ತಪ್ಪಿದೆ ಎಂದು ಕಂಡುಬಂದರೆ, ನಿಗದಿತ ಅವಧಿಯಲ್ಲಿ ಲೆಕ್ಕಾಚಾರ ಪತ್ರ ಒದಗಿಸದಿದ್ದರೆ ವ್ಯಕ್ತಿ ಅಥವಾ ವ್ಯಾಪಾರಿಗೆ ದಂಡ ವಿಧಿಸಲಾಗುತ್ತದೆ. ಇದಕ್ಕೂ ತಪ್ಪಿದರೆ ಕೆಲವೊಮ್ಮೆ ಕಾನೂನು ಕ್ರಮ ಜರುಗಿಸುತ್ತದೆ.
ಆದಾಯ ತೆರಿಗೆ ಪಾವತಿ ದೇಶದ ಅಭಿವೃದ್ಧಿಗೆ ವ್ಯಕ್ತಿ ಕೊಡುವ ಕೊಡುಗೆ ಒಂದಾದರೆ, ವೈಯಕ್ತಿಕವಾಗಿ ಈ ಕೆಳಗಿನ ಉದ್ದೇಶಗಳಿಗೆ ಹೆಚ್ಚು ಉಪಯೋಗಕರವಾಗಿರುತ್ತದೆ.
- ಹೊಸ ಸಾಲ ಪಡೆಯಲು
- ಹೂಡಿಕೆ ಯಾ ಬಂಡವಾಳ ಆಕರ್ಷಿಸಲು
- ಅನಗತ್ಯ ಖರ್ಚುಗಳನ್ನು ಗುರುತಿಸಿ ಅವುಗಳನ್ನು ತಡೆಯಲು
- ಪರಿಣಾಮಕಾರಿ ಆರ್ಥಿಕ ಯೋಜನೆ ರೂಪಿಸಲು.
