ಅರವಿಂದ್ ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದ ವ್ಯಕ್ತಿ ಈಗ ಬಿಜೆಪಿ ಮಿತ್ರ ಪಕ್ಷದ ಚುನಾವಣಾ ಅಭ್ಯರ್ಥಿ !

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಹೇಳಿಕೆ ನೀಡಿದ ವ್ಯಕ್ತಿ ಆಂಧ್ರದ ರಾಘವ್ ಮಾಗುಂಟಾ. ಅವರ ತಂದೆ ಮಾಗುಂಟಾ ಶ್ರೀನಿವಾಸಲು ರೆಡ್ಡಿ ವೈಎಸ್ ಆರ್ ಕಾಂಗ್ರೆಸ್ ನ ಸಂಸದರಾಗಿದ್ದವರು.

ದೆಹಲಿಯ ಅಬ್ಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ದೂರು ಬಂದಿದ್ದು ಇವರ ಮೇಲೆ. ಇದಾದ ಮೇಲೆ ರಾಘವ ಮಾಗುಂಟಾ ಜೈಲು ಸೇರಿದರು. ಇವರು ಜೈಲು ಸೇರಿದ ಮೇಲೂ ಎಲ್ಲಿಯೂ ಅವರು ಅರವಿಂದ್ ಕೇಜ್ರಿವಾಲ್ ಅವರ ಹೆಸರು ಹೇಳಿರಲಿಲ್ಲ.

ನಂತರ ಅವರ ಹೇಳಿಕೆ ಬದಲಾಯಿತು. ಕೊನೆಗೆ ಆಂಧ್ರದ ರೆಡ್ಡಿಗಾರು ಬಿಜೆಪಿಯ ಮಿತ್ರ ಪಕ್ಷ ಟಿಡಿಪಿಯಿಂದ ಲೋಕಸಭಾ ಚುನಾವಣೆ ಸ್ಪರ್ಢಿಸಲು ಟಿಕೆಟ್ ಪಡೆದು ಬಿಟ್ಟರು. ಈ ಬೆಳವಣಿಗೆ ಸಂಶಯದ ಮುಳ್ಳು ಎತ್ತಲೋ ತಿರುಗುವಂತೆ ಮಾಡುತ್ತಿದೆ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರ ಇರುವ ಅನುಮಾನ ಮೂಡಿಸಿದೆ.

ಎರಡು ದಿನಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಹೇಳುವ ಪ್ರಕಾರ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದ್ದು ದೊಡ್ಡ ಪಿತೂರಿ. ಅರವಿಂದ್ ಕೇಜ್ರಿವಾಲ್ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಲಾಯಿತು. ಕೊನೆಗೆ ಅವರಿಗೆ ಜಾಮೀನು ದೊರಕಿಸಿ ಕೊಡಲಾಯಿತು ಎನ್ನುತ್ತಾರೆ ಸಂಝ್ಯ್ ಸಿಂಗ್.

ಕೇಜ್ರಿವಾಲ್ ದೆಹಲಿಯಲ್ಲಿ ಉತ್ತಮ ಶಿಕ್ಷಣ ಆರೋಗ್ಯದ ವ್ಯವಸ್ಥೆ ಮಾಡಿದ್ದಾರೆ. ಅವರೊಬಬ್ ಪ್ರಾಮಾಣಿಕ ವ್ಯಕ್ತಿ ಎಂದು ಸಂಜಯ್ ಸಿಂಗ್ ಹೇಳಿದರು.

Author

Leave a Reply

Your email address will not be published. Required fields are marked *