ನವದೆಹಲಿ : ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳಲ್ಲಿ ಯುವಕರು, ಮಹಿಳೆಯರು ರೈತರು ಮತ್ತು ಅಲ್ಪಸಂಖ್ಯಾತರಿಗೆ ಮಹತ್ವ ನೀಡಲಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಈ ಪ್ರಣಾಳಿಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿತ್ತು. ನಂತರ ಇದನ್ನು ಅಂತಿಮಗೊಳಿಸಲಾಯಿತು. ಈ ಪ್ರಣಾಳಿಕೆ ಕಾಂಗ್ರೆಸ್ ಪಕ್ಷದ ಆಧ್ಯತೆಯ ಮೇಲೆ ಹೆಚ್ಚಿನ ಲಕ್ಷ್ಯ ನೀಡಿದೆ.
1926 ರಿಂದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕಾಲದ ಪರೀಕ್ಷೆಗೆ ಒಳಪಡುತ್ತಲೇ ಬಂದಿದೆ ಎಂದೂ ಕಾಂಗ್ರೆಸ್ ಟ್ವೀಟ್ ಮಾಡಿದೆ. ಐದು ನ್ಯಾಯಗಳೇ ನಮ್ಮ ಆಧ್ಯತೆಯ ಸ್ಥಂಬಗಳು. ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ ಶ್ರಮಿಕ ನ್ಯಾಯ ಮತ್ತು ಪಾಲುದಾರಿಕೆ ಅಥವಾ ಹಿಸ್ಸೇದಾರಿ ನ್ಯಾಯ ಎಂದೂ ಕಾಂಗ್ರೆಸ್ ಹೇಳಿದೆ.
ನಾರಿ ನ್ಯಾಯ: ಬಡ ಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಶ ರೂಪಾಯಿ, ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಪ್ರತಿಶತ 50 ರಷ್ಟು ಸ್ಥಾನ ಮೀಸಲು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಸಹಾಯಧನ ದ್ವಿಗುಣ,ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸಾವಿತ್ರಿಬಾಯಿ ಫುಲೆ ವಸತಿ ಗೃಹ ನಿರ್ಮಾಣ.
ಕಿಸಾನ್ ನ್ಯಾಯ: ಎಮ್ ಎಸ್ ಪಿ ಅಥವಾ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಶಕ್ತಿ. ಇದಕ್ಕಾಗಿ ವಿಶೇಷ ಕಾನೂನು ರಚನೆ. ಎಮ್.ಎಸ್. ಸ್ವಾಮಿನಾಥನ್ ವರದಿಯ ಆಧಾರದ ಮೇಲೆ ಕನಿಷ್ಟ ಬೆಂಬಲ ಬೆಲೆ ಸೂತ್ರ
ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ತೆಗೆದು ಹಾಕಲು ಕಾನೂನು ತಿದ್ದುಪಡಿ ಮಾಡಲಾಗುವುದು
ಕೃಷಿ ಉತ್ಪನ್ನಗಳಿಗಾಗಿ ಆಮದು ಮತ್ತು ರಫ್ತು ನೀತಿಯನ್ನು ರೂಪಿಸಲಾಗುವುದು. ರೈತರ ಹಿತಾಸಕ್ತಿಯ ರಕ್ಷಣೆಗಾಗಿ ಈ ನೀತಿಯನ್ನು ರೂಪಿಸಲಾಗುವುದು. ಭೀಮ ಸುರಕ್ಷಾ ಯೋಜನೆಯ ಅಡಿಯಲ್ಲಿ ಬೆಳೆ ಹಾನಿಯ ಸಂದರ್ಭಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ೩೦ ದಿನಗಳಲ್ಲಿ ಪರಿಹಾರ,
ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಸಾಲ ಮನ್ನಾ ಆಯೋಗದ ರಚನೆ.
ಶ್ರಮಿಕ ನ್ಯಾಯ: ಶ್ರಮಿಕ ವರ್ಗಕ್ಕೆ ಆರೋಗ್ಯ ಸುವಿಧಾ ಅದಕ್ಕಾಗಿ ಸ್ವಾಸ್ಥ್ಯ ಅಧಿಕಾರ್.
ರಾಷ್ಟ್ರೀಯ ಕನಿಷ್ಟ ವೇತನ 400 ರೂಪಾಯಿ ನಿಗದಿ.
