ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ ಅಲ್ಲ. 2014 ರಲ್ಲಿ. ಈ ಹೇಳಿಕೆ ನೀಡಿದ ಮಹಾತಾಯಿ ಈಕೆ..
ಸದಾ ಒಂದಿಲ್ಲೊಂದು ಇಂತಹ ಹೇಳಿಕೆ ನೀಡಿ ಪ್ರಚಾರ ಪಡೆಯುವ ನಟಿ. ಬಿಜೆಪಿಯ ನಾಯಕಿ. ಈಗ ಆಕೆ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾಳೆ.
ಇಂತಹ ಬುದ್ದಿ ಇಲ್ಲದ ಹೇಳಿಕೆ ನೀಡುವ ಕಂಗನಾ ಎಂದರೆ ಬಿಜೆಪಿ ನಾಯಕರಿಗೆ ಇಷ್ಟ. ಯಾಕೆಂದರೆ ಮೂರ್ಖರು ಎಂದರೆ ಹಾಗೆ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಆಕೆ ನೀಡಿದ ಹೇಳಿಕೆ ಒಂದೆರಡಲ್ಲ. ಎಲ್ಲ ಹೇಳಿಕೆಗಳೂ ವಿವಾದಾತ್ಮಕ ಹೇಳಿಕೆಗಳೇ. ಕರಣ್ ಜೋಹರ್ ಅವರನ್ನು ಆಕೆ ಬಿಡಲಿಲ್ಲ. ಬ್ರಾಹ್ಮಾಸ್ತ್ರ ಸಿನಿಮಾ ಬಂದಾಗ ಇದು ಹಿಂದೂ ಧರ್ಮದ ಮೇಲಿನ ದಾಳಿ ಎಂದವಳು ಇದೇ ಕಂಗನಾ.
2021 ರ ಟೈಂಸ್ ನೌ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಆಕೆ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರಲಿಲ್ಲ. ಅದು ಭಿಕ್ಷೆ. ನಿಜವಾದ ಸ್ವಾತಂತ್ರ್ಯ ಬಂದಿದ್ದು 2014 ರಲ್ಲಿ ಎಂದಿದ್ದಳು.
ಈ ಮಾತಿನಿಂದ ಬಿಜೆಪಿ ನಾಯಕರೆಲ್ಲ ಸಂತಸ ಪಟ್ಟಿದ್ದರು.. ನಿಜ್…ನಿಜ ಎಂದು ತಲೆ ಅಲ್ಲಾಡಿಸಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹೋರಾಟಗಾರರನ್ನು ಅವಮಾನಿಸಿದರೂ ಅದು ದೇಶದ್ರೋಹ ಎಂದು ಪರಿಗಣಿಸಲಿಲ್ಲ. ಬಿಜೆಪಿಗರಿಂದ ಆಕೆಗೆ ಶಹಬಾಸ್ ಗಿರಿ.
ಈ ಮಹಾತಾಯಿ ಈಗ ಇನ್ನೊಂದು ಹೇಳಿಕೆ ನೀಡಿದ್ದಾಳೆ. ಅದು ಭಾರತದ ಮೊದಲ ಪ್ರಧಾನಿ ವಿಚಾರದಲ್ಲಿ.
ಇದೇ ಟೈಂಸ್ ನೌ ನಿರೋಪಕಿಗೆ ಸಂದರ್ಶನ ನೀಡಿದ ಕಂಗನಾ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್, ಅವರು ಈಗ ಎಲ್ಲಿ ಹೋದರು ಎಂದು ಪ್ರಶ್ನಿಸಿಬಿಟ್ಟಳು.
ಅಯ್ಯೋ ಸುಭಾಷ್ ಚಂದ್ರ ಬೋಸ್ ಭಾರತದ ಪ್ರಧಾನಿ ಆಗಿರಲಿಲ್ಲ ಎಂದು ಸತ್ಯವನ್ನು ಹೇಳಲು ಪ್ರಯತ್ನ ಪಟ್ಟರು. ಆದರೆ ಕಂಗನಾ ತನ್ನದೇ ಆದ ಲೋಕದಲ್ಲಿ ಇದ್ದಳು. ಈಕೆ ಬಿಜೆಪಿಯ ನಾಯಕಿ ಮತ್ತು ಲೋಕಸಭಾ ಅಭ್ಯರ್ಥಿ !






