ಕಂಗನಾ ರಣಾವತ್ ಎಂದರೆ ವಿವಾದ. ಬಹಳಷ್ಟು ಸಂದರ್ಭದಲ್ಲಿ ಅವರೇ ವಿವಾದವನ್ನು ಸ್ರುಷ್ಟಿಸಿಕೊಂಡು ಪ್ರಚಾರ ಪಡೆಯುತ್ತಾರೆ. ಇನ್ನೂ ಕೆಲವು ಸಂದರ್ಭದಲ್ಲಿ ಬೇರೆಯವರು ವಿವಾದ ಸೃಷ್ಟಿಸುತ್ತಾರೆ.
ಒಟ್ಟಿನಲ್ಲಿ ವಿವಾದವೇ ಅವರ ಬದುಕು.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ವಿವಾದದ ರೋಗವೂ ಉಲ್ಬಣಗೊಂಡಿದೆ.
ಎರಡು ದಿನಗಳ ಹಿಂದೆ ಮಹಾರಾಷ್ಟ್ರ ವಿಧಾನಸಭ್ಎಯ ಕಾಂಗ್ರೆಸ್ ನಾಯಕರು ಕಂಗನಾ ಬಗ್ಗೆ ಒಂದು ಹೇಳಿಕೆ ನೀಡಿದ್ದರು.
ಕಂಗನಾ ಅವರು ದನದ ಮಾಂಸ ತಮಗೆ ಇಷ್ಟ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು ಎಂಬುದು ಅವರ ಹೇಳಿಕೆಯಾಗಿತ್ತು. ಈ ಹೇಳಿಕೆ ಣಾರಿ ಪ್ರಚಾರ ಪಡೆದುಕೊಂಡ ಮೇಲೆ ಕಂಗನಾ ವಿವರಣೆ ನೀಡಿದರು.
ಕಾಂಗ್ರೆಸ್ ನಾಯಕರ ಈ ಆರೋಪ ಆಧಾರರಹಿತ. ನಾನು ಇದನ್ನು ನಿರಾಕರಿಸುತ್ತೇನೆ ಎಂದಿದ್ದಾರೆ ಕಂಗನಾ.
ನಾನು ಆಯುರ್ವೇದ ಪದ್ಧತಿಯ ಪ್ರತಿಪಾದಕಿ. ಆನು ಯೋಗದ ಪ್ರಚಾರ ಮಾಡುತ್ತೇನೆ ಎಂದು ಹೇಳಿರುವ ಅವರು ದನದ ಮಾಂಸ ತಿನ್ನುವ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ.
ಹಾಗೆ ಆರೋಗ್ಯ ವೈಯಕ್ತಿಕವಾದದ್ದು. ಜನ ತಮಗೆ ಇಷ್ಟವಾದ ಆಹಾರವನ್ನು ಸ್ವೀಕರಿಸಬಹುದು. ಈ ಮಾತನ್ನು ಕಂಗನಾ ಯಾಕೆ ಹೇಳಿಲ್ಲ ? ಅವರಿಗೆ ನಾಗಪುರದವರ ಭಯಾನಾ ? ಗೊತ್ತಿಲ್ಲ.
